ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ಸಂಭ್ರಮ: ಹೇಗಿದೆ ವಾತಾವರಣ 

prathapa thirthahalli
Prathapa thirthahalli - content producer

Eid mubarak shivamogga : ಶಿವಮೊಗ್ಗ: ಇಂದು ನಗರದಲ್ಲಿ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಮೆರವಣಿಗೆ ಮತ್ತು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಗರದ ವಿವಿಧ ಭಾಗಗಳನ್ನು ಹಸಿರು ಬಾವುಟಗಳು ಮತ್ತು ಬ್ಯಾನರ್‌ಗಳಿಂದ ಅಲಂಕರಿಸಲಾಗಿದ್ದು, ವಿಶೇಷವಾಗಿ ಅಮೀರ್ ಅಹಮದ್ ಸರ್ಕಲ್ ಅನ್ನು ವಿದ್ಯುತ್ ದೀಪಾಲಂಕಾರ ಮತ್ತು ಧಾರ್ಮಿಕ ಕಲಾಕೃತಿಗಳಿಂದ ಸಿಂಗರಿಸಲಾಗಿದೆ.

Eid mubarak shivamogga : ಮೆರವಣಿಗೆಯ ವಿವರಗಳು

ಮೆರವಣಿಗೆಯು ಮಧ್ಯಾಹ್ನ 2:30 ಕ್ಕೆ ಗಾಂಧಿ ಬಜಾರ್‌ನ ಸುನ್ನಿ ಜಾಮಿಯಾ ಮಸೀದಿಯಿಂದ ಆರಂಭವಾಗಲಿದೆ. ಈ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಾದ ನಾಗಪ್ಪಕೇರಿ, ಲಷ್ಕರ್ ಮೊಹಲ್ಲಾ, ಪೆನ್ಷನ್ ಮೊಹಲ್ಲಾ, ಬಿ.ಎಚ್. ರಸ್ತೆ, ಗೋಪಿ ಸರ್ಕಲ್, ಮಹಾವೀರ ವೃತ್ತದ ಮೂಲಕ ಹಾದು ಹೋಗಲಿದೆ. ಅಂತಿಮವಾಗಿ, ಈ ಮೆರವಣಿಗೆಯು ಅಮೀರ್ ಅಹಮದ್ ಸರ್ಕಲ್ ಬಳಿಯ ಅಷೂರ್ ಖಾನಾದಲ್ಲಿ ಕೊನೆಗೊಳ್ಳಲಿದೆ.

ಮೆರವಣಿಗೆ ಮುಗಿದ ನಂತರ, ರಾತ್ರಿ 8 ರಿಂದ 9 ಗಂಟೆಯವರೆಗೆ ಅಮೀರ್ ಅಹಮದ್ ಸರ್ಕಲ್‌ನ ಅಷೂರ್ ಖಾನಾ ಮುಂಭಾಗದಲ್ಲಿ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ನಂತರ, ರಾತ್ರಿ 9 ಗಂಟೆಯಿಂದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಪ್ರವಚನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮರ್ಕಜಿ ಸುನ್ನಿ ಜಿಮೈತುಲ್ ಉಲ್ಮಿ ಕಮಿಟಿ ಕಾರ್ಯದರ್ಶಿ ಎಜಾಜ್ ಪಾಷಾ ತಿಳಿಸಿದ್ದಾರೆ.

ಬಿಗಿ ಪೊಲೀಸ್ ಭದ್ರತೆ

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಅವರ ಪ್ರಕಾರ, 1 ಎಸ್ಪಿ, 3 ಎಎಸ್‌ಪಿ, 17 ಡಿವೈಎಸ್‌ಪಿ, 52 ಸಿಪಿಐ, 38 ಪಿಎಸ್‌ಐ ಸೇರಿದಂತೆ ಒಟ್ಟು 2000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, 1000 ಗೃಹರಕ್ಷಕ ದಳ ಸಿಬ್ಬಂದಿ ಮತ್ತು ವಿವಿಧ ಕ್ಷಿಪ್ರ ಕಾರ್ಯಪಡೆಗಳನ್ನು ನಿಯೋಜಿಸಲಾಗಿದೆ. ಈದ್ ಮಿಲಾದ್ ಆಚರಣೆ ಶಾಂತಿಯುತವಾಗಿ ನಡೆಯಲು ಪೊಲೀಸ್ ಇಲಾಖೆಯು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.

Eid mubarak shivamogga
Eid mubarak shivamogga
Share This Article