ಶಿವಮೊಗ್ಗ : ಶಿವಮೊಗ್ಗ ದಸರಾ ಮಹೋತ್ಸವದ ಅಂಗವಾಗಿ ಮಹಾನಗರ ಪಾಲಿಕೆಯು ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಶೇಷವಾದ ‘ರೀಲ್ಸ್’ ಸ್ಪರ್ಧೆಯನ್ನು ಆಯೋಜಿಸಿದೆ. ಆಸಕ್ತರು ಸೆಪ್ಟೆಂಬರ್ 20, 2025ರ ಒಳಗಾಗಿ ತಮ್ಮ ರೀಲ್ಸ್ ಕಳುಹಿಸಬಹುದಾಗಿದೆ.
ಸ್ಪರ್ಧೆಯ ವಿಷಯಗಳು ವೈವಿಧ್ಯಮಯವಾಗಿದ್ದು, ಸ್ಪರ್ಧಿಗಳು ಶಿವಮೊಗ್ಗದ ಇತಿಹಾಸ, ಗತವೈಭವ, ಐತಿಹಾಸಿಕ ಸ್ಥಳಗಳು, ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು, ಅಥವಾ ಸಾಹಿತಿಗಳಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಆಯ್ದುಕೊಂಡು ರೀಲ್ಸ್ ಮಾಡಬಹುದು. ಈ ರೀಲ್ಸ್‌ಗಳು ಸೃಜನಶೀಲತೆ ಮತ್ತು ಮಾಹಿತಿ ಪೂರ್ಣವಾಗಿರಬೇಕು.
ನಿಗದಿತ ವಿಷಯಗಳ ಮೇಲೆ ತಯಾರಿಸಿದ ರೀಲ್ಸ್‌ಗಳನ್ನು ಸೆಪ್ಟೆಂಬರ್ 20, 2025ರ ಒಳಗಾಗಿ 7676236690 ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸಬೇಕು. ಆಯ್ದ ಉತ್ತಮ ರೀಲ್ಸ್‌ಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ಪಾಲಿಕೆ ತಿಳಿಸಿದೆ.
Instagram reels


