ಹಾವು ಕಚ್ಚಿ ಸಾವು, ಮದುವೆ ಹೋಗಿದ್ದವರಿಗೆ ಅಪಘಾತ, ಮತ್ತೊಂದು ಪೋಕ್ಸೋ ಕೇಸ್!

ajjimane ganesh

ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, 10 ಸೆಪ್ಟೆಂಬರ್ 2025 ದಾವಣಗೆರೆ: ಹಾವು ಕಚ್ಚಿ ರೈತ ಸಾವು

ದಾವಣಗೆರೆ ತಾಲೂಕಿನ ಆಲೂರು ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಹನುಮಂತಪ್ಪ (52) ಹಾವು ಕಚ್ಚಿ ಸಾವನ್ನಪ್ಪಿದ್ದಾರೆ. ಸೋಮವಾರ ತಮ್ಮ ಜಮೀನಿನಲ್ಲಿ ದನಗಳಿಗೆ ಮೇವು ಕಟಾವು ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Snake Bite Teen Gives Birth  in Shivamogga Karnataka Ayanuru Shivamogga short news  CGHS Wellness Centres, Mangaluru, Udupi, Shivamogga, Central Government Health Scheme, Prataprao Jadhav, Kota Srinivas Poojary, Nalin Kumar Kateel, Mansukh Mandaviya, Karnataka health, central government pensioners, medical facilities. KSRTC Chatpat News
former death

ಪಡುಬಿದ್ರಿ: ಸ್ಕೂಟರ್ ಡಿಕ್ಕಿ, ಶಿವಮೊಗ್ಗದ ವ್ಯಕ್ತಿ ಗಂಭೀರ ಗಾಯ

ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಬಳಿ ಸ್ಕೂಟರ್ ಡಿಕ್ಕಿಯಾಗಿ ಶಿವಮೊಗ್ಗ ಮೂಲದ ಗಂಗಾಧರಪ್ಪ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಉದ್ಯಾವರದಲ್ಲಿ ನಡೆದ ವಿವಾಹ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಗಂಗಾಧರಪ್ಪ ಅವರು, ವಾಪಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸದ್ಯ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಂತರ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಶಿವಮೊಗ್ಗ: ಅಪ್ರಾಪ್ತೆಯೊಂದಿಗೆ ವಿವಾಹ: ಯುವಕನ ಮೇಲೆ ಪೋಕ್ಸೋ ಪ್ರಕರಣ೩

ಶಿವಮೊಗ್ಗ ಜಿಲ್ಲೆ ತಾಲ್ಲೂಕು ಒಂದರ ಸ್ಟೇಷನ್​ನಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಮದುವೆಯಾಗಿದ್ದ ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಹೊರಜಿಲ್ಲೆಯ ಯುವಕನೊಬ್ಬ ಇಲ್ಲಿನ ಅಪ್ರಾಪ್ತೆಯ ಜೊತೆ ಕಳೆದ ಆಗಸ್ಟ್  29 ರಂದು ಮದುವೆಯಾಗಿದ್ದ, ಈ ಬಗ್ಗೆ ವಿಷಯ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಶಿವಮೊಗ್ಗ ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿಯೊಂದಿಗೆ ಜಂಟಿ ಕಾರ್ಯಾಚರಣೆ ಪ್ರಕರಣ ದಾಖಲಾಗುವಂತೆ ಕ್ರಮವಹಿಸಿದ್ದಾರೆ.

Snake Bite Tragedy Road Accident  Pocso Case 

Davanagere farmer death, snake bite death Karnataka, Padubidri road accident, Shivamogga Pocso case, child marriage Karnataka, crime news Karnataka, ಹಾವು ಕಚ್ಚಿ ಸಾವು, ದಾವಣಗೆರೆ ರೈತ, ಪಡುಬಿದ್ರಿ ಅಪಘಾತ, ಶಿವಮೊಗ್ಗ ಪೋಕ್ಸೋ ಪ್ರಕರಣ,

car decor new

Share This Article