ಗಣಪತಿ ಮೆರವಣಿಗೆಯ ಗಲಾಟೆ ವಿಚಾರ : ಎಸ್​ ಎನ್​ ಚನ್ನಬಸಪ್ಪ ಹೇಳಿದ್ದೇನು

prathapa thirthahalli
Prathapa thirthahalli - content producer

Sn channabasappa : ಶಿವಮೊಗ್ಗ, : ಕಾಶ್ಮೀರದಲ್ಲಿ ಕಲ್ಲು ತೂರಾಟ ಮಾಡುತ್ತಿದ್ದವರನ್ನು ಕೇಂದ್ರ ಸರ್ಕಾರ ನಿಗ್ರಹಿಸಿದೆ. ಆದರೆ ಮದ್ದೂರಿನಲ್ಲಿ ಗಣಪತಿ ಮೆರವಣಿಗೆಯ ವೇಳೆ ಕಲ್ಲು ತೂರಾಟ ಮಾಡಿದವರನ್ನು ರಾಜ್ಯ ಸರ್ಕಾರಕ್ಕೆ  ನಿಗ್ರಹಿಸಲು ಏಕೆ  ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ನಗರ ಶಾಸಕ ಎಸ್​ ಎನ್​ ಚನ್ನಬಸಪ್ಪ ಪ್ರಶ್ನಿಸಿದರು.

ಶಿವಮೊಗ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚನ್ನಬಸಪ್ಪ, ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿಯನ್ನು ಯಾವುದೇ ಗಲಾಟೆಯಿಲ್ಲದೆ ಭವ್ಯವಾಗಿ ವಿಸರ್ಜನೆ ಮಾಡಲಾಯಿತು. ಆದರೆ, ಸಾಗರ ಮತ್ತು ಮದ್ದೂರಿನಲ್ಲಿ ಗಣಪತಿ ವಿಸರ್ಜನೆ ವೇಳೆ ಅಹಿತಕರ ಘಟನೆ ನಡೆದಿವೆ. ಇದು ರಾಜ್ಯದ ಗೃಹ ಇಲಾಖೆ ಮತ್ತು ಸರ್ಕಾರ ಏನು ಮಾಡುತ್ತಿದೆ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ .ಈ ಹಿಂದೆ ಕಾಶ್ಮೀರದಲ್ಲಿಯೂ ಇದೇ ರೀತಿಯ ಕಲ್ಲು ತೂರಾಟಗಳು ನಡೆಯುತ್ತಿದ್ದವು. ಆದರೆ, ಕೇಂದ್ರ ಸರ್ಕಾರ ಅದನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಅದೇ ರೀತಿ, ರಾಜ್ಯ ಸರ್ಕಾರವು ಇಂತಹ ಘಟನೆಗಳನ್ನು ನಿಗ್ರಹಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದರು.

Sn channabasappa : ಶಾಸಕ ಬಿ.ಕೆ. ಸಂಗಮೇಶ್ವರ್ ಹೇಳಿಕೆಗೆ ಖಂಡನೆ

ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವ ಆಸೆಯಿದೆ’ ಎಂದು ಹೇಳಿಕೆ ನೀಡಿದ ಶಾಸಕ ಬಿ.ಕೆ. ಸಂಗಮೇಶ್ವರ್ ಅವರ ಹೇಳಿಕೆಯನ್ನೂ ಚನ್ನಬಸಪ್ಪ ತೀವ್ರವಾಗಿ ಖಂಡಿಸಿದರು. ಒಬ್ಬ ಹಿಂದೂವಾಗಿ ಹುಟ್ಟಿ ಇಂತಹ ಹೇಳಿಕೆಗಳನ್ನು ನೀಡಬಾರದಿತ್ತು ಎಂದು ಹೇಳಿದರು. ಹಾಗೆಯೇ, ಇಂತಹ ಹೇಳಿಕೆ ನೀಡಿದ ಅವರಿಗೆ ಭಾರತದಂತಹ ಪುಣ್ಯ ದೇಶದಲ್ಲಿ  ಪುನರ್ ಜನ್ಮವೇ ಇರಲು ಸಾಧ್ಯವಿಲ್ಲ ಎಂದರು. ಕಾಂಗ್ರೆಸ್ ಸರ್ಕಾರ ಮುಸಲ್ಮಾನರ ಗೂಂಡಾರಾಜ್ಯ ಸ್ಥಾಪನೆಗೆ ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯ ಕೊನೆಯಲ್ಲಿ, ಹಿಂದೂ ಮಹಾ ಸಭಾ ಗಣಪತಿಯ ವಿಸರ್ಜನೆಯು ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಅವರು ಧನ್ಯವಾದಗಳನ್ನು ಅರ್ಪಿಸಿದರು.  

Sn channabasappa
Sn channabasappa
Share This Article