ಕೋವಿ ಸಮೇತ ಕಾರಿನಲ್ಲಿ ಕಾಡಿನೊಳಗೆ ಬಂದವರು ಅರೆಸ್ಟ್!

ajjimane ganesh

ಮಲೆನಾಡು ಟುಡೆ ಸುದ್ದಿ, ರಿಪ್ಪನ್‌ಪೇಟೆ, ಸೆಪ್ಟೆಂಬರ್ 4 2025 : ಶಿವಮೊಗ್ಗ ಅರಣ್ಯ ಇಲಾಖೆ ಮತ್ತೊಮ್ಮೆ ಸಂಚಲನ ಮೂಡಿಸಿದೆ. ರಿಪ್ಪನ್‌ಪೇಟೆ ಸಮೀಪ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಸಂಚು ರೂಪಿಸಿದ್ದ ಐವರ ಗುಂಪಿನಲ್ಲಿ ಮೂವರನ್ನು ಬಂಧಿಸಿದ್ದಾರೆ.  ಅರಣ್ಯಾಧಿಕಾರಿ ಪವನ್ ಕುಮಾರ್ ಎನ್. ನೇತೃತ್ವದ ತಂಡ ಈ ಕಾರ್ಯಾಚರಣೆಯನ್ನು ನಡೆಸಿದೆ. ಇನ್ನಿಬ್ಬರ ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. 

Three Poachers Arrested in Ripponpete Forest
Three Poachers Arrested in Ripponpete Forest

ಮೂಗುಡ್ತಿ ವನ್ಯಜೀವಿ ವಲಯದ ಕುಮದ್ವತಿ ಮೀಸಲು ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಕೆಲವರ ಬಗ್ಗೆ ಅನುಮಾನ ಮೂಡಿದೆ. ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡಿದ ಅವರು, ಬಳಿಕ ಕಾರ್ಯಾಚರಣೆಗೆ ಇಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ನಾಡ ಬಂದೂಕು, ಮದ್ದುಗುಂಡು ಮತ್ತು ಒಂದು ಆಲ್ಟೊ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

- Advertisement -

ಬಂಧಿತ ಆರೋಪಿಗಗಳು ಬಟ್ಟೆ ಮಲ್ಲಪ್ಪ, ಬಳಸಗೋಡು ಗ್ರಾಮದವರು ಎನ್ನಲಾಗಿದೆ. ಆರೋಪಿಗಳ ವಿರುದ್ಧ  ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಡಿ.ಆರ್.ಎಫ್.ಓ ಪುಟ್ಟಣ್ಣ ಕೆ., ಫಾರೆಸ್ಟ್ ಗಾರ್ಡ್ ಸಚಿನ್ ಕೆ.ಟಿ., ವಾಚರ್ ಸವಿನ್ ಮತ್ತು ಇತರ ಸಿಬ್ಬಂದಿ ಪಾಲ್ಗೊಂಡಿದ್ದರು ಎಂದು ಅರಣ್ಯ ಇಲಾಖೆ ತಿಳಿಸಿದೆ.

Three Poachers Arrested in Ripponpete Forest

Poaching in Ripponpete, wild animal hunting Karnataka, Kumudvati forest poaching, Ripponpete forest news, ರಿಪ್ಪನ್‌ಪೇಟೆ, ಬೇಟೆಗಾರರ ಬಂಧನ, ಅರಣ್ಯ ಇಲಾಖೆ, ಕಾಡು ಪ್ರಾಣಿಗಳ ಬೇಟೆ, ಮೂಗುಡ್ತಿ ವನ್ಯಜೀವಿ ವಲಯ, ವನ್ಯಜೀವಿ ಸಂರಕ್ಷಣಾ ಕಾಯ್ದೆ.

car decor new

Share This Article