ಆಗಸ್ಟ್ 31 2025 : ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಲ ತುಂಗಾನಗರ ಪೊಲೀಸ್ ಠಾಣೆಯ ಪಿಎಸ್‌ಐ ದೂದ್ಯಾ ನಾಯ್ಕ್ ಎಲ್.ಸಿ ಮತ್ತು ಡಿಎಆರ್‌ನ ಎಹೆಚ್‌ಸಿ ಕೆ.ಎನ್ ಸತ್ಯನಾರಾಯಣ ಅವರು ಸೇವೆಯಿಂದ ನಿವೃತ್ತಿ (Retirement) ಹೊಂದಿದ್ದಾರೆ.
ಈ ಇಬ್ಬರು ಅಧಿಕಾರಿಗಳ ಸೇವೆಯನ್ನು ಪ್ರಶಂಸಿರುವ ಎಸ್ಪಿ ಮಿಥುನ್ ಕುಮಾರ್, ಇಬ್ಬರಿಗೂ ಸನ್ಮಾನ ಮಾಡಿ ಬಿಳ್ಗೊಡುಗೆ ನೀಡಿದ್ದಾರೆ. ಈ ವೇಳೆ ಅಧಿಕಾರಿಗಳ ಕುಟುಂಬಸ್ಥರು ಸಹ ಎಸ್ಪಿಯೊಂದಿಗೆ ಮಾತುಕತೆ ನಡೆಸಿ ಫೋಟೋ ಕ್ಲಿಕ್ಕಿಸಿಕೊಂಡರು.

ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಜಿ.ಕೆ., ಅವರು ನಿವೃತ್ತಿ ಹೊಂದಿದ ಅಧಿಕಾರಿಗಳನ್ನು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು ಅಲ್ಲದೆ, ಇಬ್ಬರು ಅಧಿಕಾರಿಗಳ ನಿಸ್ವಾರ್ಥ ಸೇವೆ ಮತ್ತು ಕೊಡುಗೆಯನ್ನು ಸ್ಮರಿಸಿದರು. ಅವರ ಮುಂದಿನ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಶುಭ ಕೋರಿದರು.

ಈ ವೇಳೆ ಜಿಲ್ಲಾ ಪೊಲೀಸ್ ಕಚೇರಿಯ ಎಎಓ ಸೈಯದ್ ಖಾದರ್, ಶಾಖಾಧೀಕ್ಷಕರಾದ ಎಂ.ಎಂ.ಮಾಳಗಿ ಮತ್ತು ಅರುಣ್ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
Shivamogga Police Farewell to Two Officers
Shivamogga police retirement, police officer farewell, SP Mithun Kumar GK, ಶಿವಮೊಗ್ಗ ಪೊಲೀಸ್, ನಿವೃತ್ತಿ ಸಮಾರಂಭ, ದೂದ್ಯಾ ನಾಯ್ಕ್, ಕೆ.ಎನ್.ಸತ್ಯನಾರಾಯಣ,
