ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಬೆಂಗಳೂರಿನ ಲೇಡಿ ಸೇರಿ ಇಬ್ಬರು ಅರೆಸ್ಟ್!

ajjimane ganesh

ಆಗಸ್ಟ್ 31 2025 : ಮಲೆನಾಡು ಟುಡೆ ಸುದ್ದಿ :ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಪೇಪರ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಇಬ್ಬರನ್ನ ಅರೆಸ್ಟ್ ಮಾಡಲಾಗಿದೆ. ಬಂಧಿತರ ಪೈಕಿ ಓರ್ವ ಮಹಿಳೆ ಸಹ ಇದ್ದಾಳೆ. ಈ ಇಬ್ಬರಿಂದ  ₹7.82 ಲಕ್ಷ ಮೌಲ್ಯದ 83 ಗ್ರಾಂ ತೂಕದ ಮಾಂಗಲ್ಯ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  

Bengaluru Duo Arrested in gold theft case in Bhadravathis Paper Town
Bengaluru Duo Arrested in gold theft case in Bhadravathis Paper Town

ಕಳೆದ ಆಗಸ್ಟ್ 18, 2025 ರಂದು ಪೇಪರ್ ಟೌನ್‌ 5ನೇ ವಾರ್ಡ್‌ನಲ್ಲಿನ ನಿವಾಸಿ ಚಂದ್ರಮ್ಮ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಮನೆಯ ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು. ಪ್ರಕರಣದ ಸಂಬಂಧ  ಭದ್ರಾವತಿ ಉಪವಿಭಾಗದ ಡಿವೈಎಸ್‌ಪಿ  ಕೆ. ಆರ್. ನಾಗರಾಜ ಅವರ ಮೇಲ್ವಿಚಾರಣೆಯಲ್ಲಿ  ಪೇಪರ್ ಟೌನ್ ಇನ್​ಸ್ಪೆಕ್ಟರ್  ನಾಗಮ್ಮ ಕೆ ಅವರ ನೇತೃತ್ವದಲ್ಲಿ, ಸಹಾಯಕ ಸಬ್‌ ಇನ್ಸ್‌ಪೆಕ್ಟರ್ ರತ್ನಾಕರ್ ಎ. ಎಸ್.ಐ., ಹಾಗೂ ಸಿಬ್ಬಂದಿಗಳಾದ ಪ್ರಕಾಶ್, ಅರುಣ್, ನಾಗರಾಜ ಎಂ., ಹನುಮಂತ, ಆಸ್ಮಾ, ಸ್ವೀಕೃತ ಮತ್ತು ಅನುರೂಪ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಅರೆಸ್ಟ್ ಮಾಡಿದೆ.

Bengaluru Duo Arrested in gold theft case in Bhadravathis Paper Town
Bengaluru Duo Arrested in gold theft case in Bhadravathis Paper Town

ಆಗಸ್ಟ್ 30, 2025 ರಂದು ಆರೋಪಿಗಳನ್ನ ಬಂಧಿಸಲಾಗಿದೆ. ಬೆಂಗಳೂರಿನ ಕೆಂಗೇರಿ ನಿವಾಸಿ ಮಂಜುಳಾ ಆರ್. (21) ಮತ್ತು ಸುಜೈನ್ ಖಾನ್ (24) ಬಂಧಿತರು 

Bengaluru Duo Arrested in gold theft case in Bhadravathis Paper Town

Bhadravathi gold theft, Paper Town police, Shivamogga crime news, Bhadravathi police news, ಭದ್ರಾವತಿ ಕಳ್ಳತನ, ಪೇಪರ್ ಟೌನ್ ಪೊಲೀಸ್, ಶಿವಮೊಗ್ಗ ಕ್ರೈಂ ನ್ಯೂಸ್ 

Share This Article