ಇಂದು ಲಿಂಗನಮಕ್ಕಿ ಜಲಾಶಯದ ಎಲ್ಲಾ ಗೇಟುಗಳನ್ನು ತೆಗೆಯಲಾಗಿದೆ. ಇದರಿಂದಾಗಿ ಜೋಗದ ಕಳೆ ಹೆಚ್ಚಿದ್ದು ಜೋಗ ಮೈದಿಂಬಿ ಹರಿಯುತ್ತಿದೆ. ಜೋಗದಲ್ಲಿ ಹಾಲ್ನೊರೆಯ ರೀತಿ ಭೋರ್ಗರೆದು ದುಮ್ಮುಕುತ್ತಿರುವ ರಾಜ, ರಾಣಿ ರೋರರ್ ರಾಕೆಟ್ನ್ನು ನೋಡಲು ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಕಳೆದ 02 ಮಗೆ ಮಳೆ ನಿರಂತರವಾಗಿ ಸುರಿಯುತ್ತದೆ. ಇದರಿಂದಾಗಿ ಲಿಂಗನಮಕ್ಕಿ ಜಲಾಶಯ ತುಂಬಿದ್ದು ಹೆಚ್ಚುವರಿ ನೀರನ್ನು 11 ಗೇಟ್ಗಳ ಮೂಲಕ ಹೊರಬಿಡಲಾಗುತ್ತಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಇವತ್ತು 47,232 ಕ್ಯೂಸೆಕ್ ಒಳ ಹರಿವು ಇದೆ. ಜಲಾಶಯ ಭರ್ತಿ ಆಗಿರುವುದರಿಂದ ಎಲ್ಲ ರೇಡಿಯಲ್ ಗೇಟುಗಳನ್ನು ಮೇಲೆತ್ತಿ ನೀರನ್ನು ಹೊರಗೆ ಬಿಡಲಾಗುತ್ತಿದೆ. ಒಟ್ಟು 32,138 ಕ್ಯೂಸೆಕ್ ಹೊರ ಹರಿವು ಇದೆ.
ಲಿಂಗನಮಕ್ಕಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊರಬಿಡುತ್ತಿರುವುದರಿಂದ ಜೋಗದ ನೈಸರ್ಗಿಕ ಸೌಂದರ್ಯ ಇನ್ನಷ್ಟು ಹೆಚ್ಚಾಗಿದೆ. ಪ್ರವಾಸಿಗರು ಜಲಪಾತದ ಸೊಬಗನ್ನು ನೋಡಿ ಆನಂದಿಸುತ್ತಿದ್ದಾರೆ.
Jog falls

TAGGED:Jog Falls

