ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ನಾಲ್ವರು ನಾಪತ್ತೆ!

ajjimane ganesh

ಶಿವಮೊಗ್ಗ, ಆಗಸ್ಟ್ 25 ಮಲೆನಾಡುಟುಡೆ ನ್ಯೂಸ್ : ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಾಲ್ವರು  ಕಾಣೆಯಾಗಿದ್ದಾರೆ. ಅವರ ಬಗ್ಗೆ ಸುಳಿವು ನೀಡುವಂತೆ ಪೊಲೀಸ್ ಪ್ರಕಟಣೆ ನೀಡಲಾಗಿದೆ. 

ಪೊಲೀಸ್ ಪ್ರಕಟಣೆ

ಪ್ರಕರಣ ಒಂದು : ಜುಲೈ 19 ರಂದು ಹಾಸನದ ವಿಜಯನಗರ ವಾಸಿ ಬಿ. ಚಂದ್ರಗೌಡ ಅವರ ಮಗ ವಿಜಯಕುಮಾರ್ (35) ಎಂಬವರು ಶಿವಮೊಗ್ಗದ ಮಾನಸ ನರ್ಸಿಂಗ್ ಹೋಂ ಆಸ್ಪತ್ರೆಯಿಂದ ಕಾಣೆಯಾಗಿದ್ದಾರೆ. 5.6 ಅಡಿ ಎತ್ತರ, ತೆಳ್ಳನೆಯ ಮೈಕಟ್ಟು, ಗೋಧಿ ಬಣ್ಣ, ಕೋಲುಮುಖ. ಎಡಗೈ ಮೇಲೆ ‘ಸೂರಿ’ ಎಂದು ಹಚ್ಚೆ [Tattoo] ಇದೆ. 

- Advertisement -

ಪ್ರಕರಣ ಎರಡು : ಉಳ್ಳಾಲ ತಾಲೂಕಿನ ಪಂಜಾಜೆ ಮನೆ ವಾಸಿ ಪ್ರವೀಣ್‌ಕುಮಾರ್ ಅವರ ಪತ್ನಿ ಪೂಜಾ (21) ಆಗಸ್ಟ್ 2024 ರಲ್ಲಿ ಕಾಣೆಯಾಗಿದ್ದಾರೆ. ಇವರು ದಾವಣಗೆರೆಯ ತನ್ನ ತಾಯಿ ಮನೆಗೆ ಹೋಗುವಾಗ ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದಿಂದ ನಾಪತ್ತೆಯಾಗಿದ್ದಾರೆ. 4.2 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಕೆಂಪು ಬಣ್ಣ. ಇವರ ಎಡ ಮೊಣಕೈ ಮೇಲೆ ‘ಪ್ರವೀಣ್’ ಮತ್ತು ಬಲ ಮೊಣಕೈ ಮೇಲೆ ‘ಹಾಲು’ ಎಂದು ಹಚ್ಚೆ ಇದೆ.

Missing
Missing

ಪ್ರಕರಣ ಮೂರು : ಶಿವಮೊಗ್ಗದ ಭಾರತಿ ಕಾಲೋನಿಯ ನಿವಾಸಿಗಳಾದ ಗಿರಿ ಟಿಫನ್ ಸೆಂಟರ್‌ನ ಮಾಲೀಕ ಶ್ರೀನಿವಾಸ (50) ಮತ್ತು ಅವರ ಪತ್ನಿ ಜಯಮ್ಮ (45) ಕಳೆದ ಜುಲೈ 5 ರಿಂದ ನಾಪತ್ತೆಯಾಗಿದ್ದಾರೆ. ಮನೆಯಿಂದ ಹೋದವರು ಇದುವರೆಗೆ [Till now] ಮರಳಿ ಬಂದಿಲ್ಲ. ಶ್ರೀನಿವಾಸ್​ 5.4 ಅಡಿ ಎತ್ತರವಿದ್ದು, ಗೋಧಿ ಮೈಬಣ್ಣ ಹೊಂದಿದ್ದಾರೆ. ಇವರ ಬಲಗೈ ಮೇಲೆ ‘ಜಯಮ್ಮ’ ಎಂದು ಹಚ್ಚೆ ಇದೆ. ಜಯಮ್ಮ 5.1 ಅಡಿ ಎತ್ತರ, ಬಿಳಿ ಮೈಬಣ್ಣ ಹೊಂದಿದ್ದಾರೆ. ಬಲಗೈ ಮೇಲೆ ‘ಶ್ರೀನಿವಾಸ’ ಎಂದು ಹಚ್ಚೆ ಇದೆ. 

ಇವರ ಸುಳಿವು ಸಿಕ್ಕಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ ದೂ.ಸಂ: 08182-261414 ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ. 

4 People Missing in Doddapete station limits

Share This Article
Leave a Comment

Leave a Reply

Your email address will not be published. Required fields are marked *