ಮೈದುಂಬಿದ ಲಿಂಗನಮಕ್ಕಿ ಅಣೆಕಟ್ಟು, 15 ಸಾವಿರ ಕ್ಯೂಸೆಕ್ಸ್ ನೀರು ಡ್ಯಾಂ ನಿಂದ ಬಿಡುಗಡೆ : ಹೇಗಿದೆ ನೋಡಿ ಡ್ಯಾಂನ ದೃಶ್ಯ

prathapa thirthahalli
Prathapa thirthahalli - content producer

Linganamakki dam : ಮಲೆನಾಡಿನ ಹಸಿರಿವ ವನರಾಶಿಯ ಕಣಿವೆ ಪ್ರದೇಶದಲ್ಲಿ ಹರಿಯುವ ಶರಾವತಿ ನದಿಯ ಹರಿವಿನಿಂದಾಗಿ ಲಿಂಗನಮಕ್ಕಿ ಅಣೆಕಟ್ಟು ವಾಡಿಕೆಗಿಂತ ಮೊದಲೇ ಭರ್ತಿಯಾಗುವತ್ತ ಸಾಗಿದೆ.

ಗರಿಷ್ಠ 1819 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ಪ್ರಸ್ಥುತ 1816.20 ಅಡಿ ನೀರು ಸಂಗ್ರಹಗೊಂಡಿದೆ. ಜಲಾಶಯಕ್ಕೆ 48,393 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ.ಕಳೆದ 24 ಗಂಟೆಯಲ್ಲಿ ಸುರಿದ ಮಳೆಗೆ ಜಲಾಶಯದ ನೀರಿನ ಮಟ್ಟ 1.5 ಅಡಿಗೂ ಹೆಚ್ಚಿಗೆ ಏರಿಕೆ ಕಂಡಿದೆ. ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ಮಂಜಾಗೃತ ಕ್ರಮವಾಗಿ ನದಿಯ 11 ರೇಡಿಯಲ್ ಕ್ರೆಸ್ಟ್ ಗೇಟ್ ಗಳ ಮೂಲಕ 15 ಸಾವಿರ ಕ್ಯೂಸೆಕ್ಸ್ ನೀರು ಹೊರಬಿಡಲಾಗಿದೆ.

- Advertisement -

Malenadu Today 

ನದಿಯ ಅಚ್ಚುಕಟ್ಟು ಪ್ರದೇಶದ ಜನರಿಗೆ ನದಿಗೆ ಜನ ಜನುವಾರು ಇಳಿಯದಂತೆ ಕಳೆದ ಒಂದು ತಿಂಗಳಿನಿಂದ ಕೆಪಿಸಿ ಅಧಿಕಾರಿಗಳು ಎಚ್ಚರಿಕೆಯನ್ನು ನೀಡಿದ್ದಾರೆ. ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಟ್ಟ ಎರಡು ಗಂಟೆ ಬಳಿಕ ಜೋಗ ಜಲಪಾತ ತಲುಪಲಿದೆ. ಇದರಿಂದಾಗಿ ಜೋಗ ಜಲಪಾತದ ಜಲಧಾರೆಗಳು ಭೋರ್ಗರೆಯುತ್ತ ಪ್ರಪಾತಕ್ಕೆ ದುಮುಕಲಿದೆ.

Malenadu Today

Linganamakki dam

Share This Article