ಹುಷಾರ್ ಸಾರ್, ಶಿವಮೊಗ್ಗದ ಜನರೇ ನಿಮ್ಮಿಂದ ದಂಡ ಕಟ್ಟಿಸ್ತಾರೆ! 

prathapa thirthahalli
Prathapa thirthahalli - content producer

 ಶಿವಮೊಗ್ಗ ಸುದ್ದಿ, malenadu today news , ಹಾಗೊಂದು ವೇಳೆ ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರಿಂದ ಬಚಾವ್ ಆಗಬಹುದೇನೋ! ಆದರೆ ಶಿವಮೊಗ್ಗ ಟ್ರಾಫಿಕ್ ಪೊಲೀಸರ ಕಣ್ಣಗಳಿಂದ ತಪ್ಪಿಸಿಕೊಳ್ಳುವುದು ಕಷ್ಟ. ಕಷ್ಟ.ಏಕೆಂದರೆ ಶಿವಮೊಗ್ಗ ನಾಗರಿಕರೇ ನೇರವಾಗಿ ಫೋಟೋ ತೆಗೆದು ಟ್ರಾಫಿಕ್ ರೂಲ್ಸ್ ವೈಲೇಷನ್ ಆಗಿದೆ ಎಂದು ಟ್ರಾಫಿಕ್ ಪೊಲೀಸರಿಗೆ ವಾಟ್ಸ್ಯಾಪ್ ಮಾಡುತ್ತಾರೆ. ಯೂತ್ಸ್​ನ ಕಾಮನ್ ಲಾಂಗ್ವೇಜ್​ನಲ್ಲಿ ಹೇಳಬೇಕೆಂದರೆ, ಜನರೇ ಹಾಕ್ಕೊಡುತ್ತಾರೆ. ಇದಕ್ಕೆ ಶಿವಮೊಗ್ಗ ಸಿಟಿ ಬಸ್​ ಡ್ರೈವರ್​ ಒಬ್ಬರು ಸಾಕ್ಷಿಯಾಗಿದ್ದಾರೆ

ಹೌದು, ಕಳೆದ ಭಾನುವಾರ, ಶಿವಮೊಗ್ಗ ನಗರ ದ  ಸಿಟಿ ಬಸ್ ವೊಂದರ ಚಾಲಕ ಮೊಬೈಲ್​ನಲ್ಲಿ ಮಾತನಾಡ್ತಾ ಡ್ರೈವ್ ಮಾಡುತ್ತಿದ್ದರು. ನ್ಯಾಕ್​ ಸಿಕ್ಕ ಮೇಲೆ ಯಾವ ಕೆಲಸವಾದರೂ ಸಲೀಸು ಎನ್ನುವ ಹಾಗೆ ಡ್ರೈವರ್ ಸಹ ಮೊಬೈಲ್​ನಲ್ಲಿ ಮಾತನಾಡುವ ಹಾಗೂ ಬಸ್​ ಚಲಾಯಿಸುವ ಎರಡು ಕೆಲಸವನ್ನು ಒಟ್ಟಿಗೆ ಮಾಡುತ್ತಿದ್ದರು. ಸಹಜವಾಗಿ ಇದು ಪ್ರಯಾಣಿಕರಿಗೆ ಕಿರಿಕಿರಿಯಾಗಿದೆ. ಟಿಪ್ಪುನಗರದಿಂದ ಬಸ್ ನಿಲ್ದಾಣದವರೆಗೆ ಚಾಲಕ ಮೊಬೈಲ್‌ನಲ್ಲಿ (ಫೋನ್) ಮಾತನಾಡುತ್ತಾ ಬಸ್ ಚಲಾಯಿಸುತ್ತಿರುವುದನ್ನು ನೋಡಿ ಸಿಟ್ಟಿಗೆದ್ದ ಸಾರ್ವಜನಿಕರು ಆ ದೃಶ್ಯವನ್ನು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದು,  ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ತಿರುಮಲೇಶ್ ಅವರ ಮೊಬೈಲ್​ಗೆ ವಾಟ್ಸಾಪ್​ ಮಾಡಿದ್ದಾರೆ. 

- Advertisement -

ವಿಡಿಯೋ ನೋಡಿದ ಪಿಎಸ್‌ಐ ಚಾಲಕನಿಗೆ ಮೊಬೈಲ್ ರೈಡ್, ಅಜಾಗರೂಕ ಮತ್ತು ಅಪಾಯಕಾರಿ ಚಾಲನೆ (ಅಜಾಗರೂಕ ಚಾಲನೆ), ಮತ್ತು ಸಮವಸ್ತ್ರವಿಲ್ಲದೆ ವಾಹನ ಚಾಲನೆ ಆರೋಪದ ಅಡಿಯಲ್ಲಿ ಒಟ್ಟು ಒಟ್ಟು ರೂ. 2,500 ದಂಡ ವಿಧಿಸಿದ್ದಾರೆ.  ಈ ಬಗ್ಗೆ ಶಿವಮೊಗ್ಗ ಟ್ರಾಪಿಕ್ ಪೊಲೀಸ್ ಫೇಸ್​ಬುಕ್ ಪೇಜ್​ನಲ್ಲಿ ಪೋಸ್ಟ್ ಸಹ ಮಾಡಲಾಗಿದೆ. 

bus driver

bus driver
bus driver

 

Share This Article
prathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Leave a Comment

Leave a Reply

Your email address will not be published. Required fields are marked *