ಡಿವೈಎಸ್‌ಪಿ GT ನಾಯಕ್​ ವರ್ಗಾವಣೆ, ಡಾ. ಬೆನಕ ಪ್ರಸಾದ್ ನೂತನ ASP! ಇವರ ವಿಶೇಷ ಗೊತ್ತಾ!?

ajjimane ganesh

Dr Benaka Prasad ಸಾಗರ, ಆಗಸ್ಟ್ 7,  malenadu today news  : ಶಿವಮೊಗ್ಗ ಜಿಲ್ಲೆ ಸಾಗರ ಉಪವಿಭಾಗದಲ್ಲಿ ಕಳೆದ 2 ವರ್ಷಗಳಿಂದ ಡಿವೈಎಸ್‌ಪಿ ಗೋಪಾಲಕೃಷ್ಣ ನಾಯಕ್ ರವರು ಕಾರ್ಯ ನಿರ್ವಹಿಸುತ್ತಿದ್ದರು. ದಕ್ಷ ಅಧಿಕಾರಿಯಾಗಿ ಸಾಕಷ್ಟು ಸುಧಾರಣೆ ತಂದ ಇವರ ಬಗ್ಗೆ ಸಾಗರದಲ್ಲಿ ವಿಶೇಷ ಹೆಸರು ಮೂಡಿತ್ತು. ಕ್ರೈ ತನಿಖೆಯಲ್ಲಿ ತಮ್ಮದೆ ಆದ ವಿಶೇಷತೆಗಳನ್ನು ಮೂಡಿಸಿದ್ದ ಜಿಟಿ ನಾಯಕ್​ರನ್ನು ವರ್ಗಾವಣೆ ಮಾಡಲಾಗಿದೆ. ಇದೀಗ ಅವರ ಸ್ಥಳಕ್ಕೆ  ಐಪಿಎಸ್ ಅಧಿಕಾರಿ ಡಾ. ಬೆನಕ ಪ್ರಸಾದ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಸ್ಥಳ ನಿಯುಕ್ತಿಗಾಗಿ ಕಾಯುತ್ತಿದ್ದ ಇವರನ್ನು ಸಾಗರ ಉಪವಿಭಾಗದ ನೂತನ ಎಎಸ್‌ಪಿ (ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ) ಆಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. 

ಯಾರಿವರು ಡಾ. ಬೆನಕ ಪ್ರಸಾದ್ /Dr Benaka Prasad

ನೂತನ ಎಎಸ್‌ಪಿ ಡಾ. ಬೆನಕ ಪ್ರಸಾದ್ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದವರು. 2021ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 92ನೇ ರ‍್ಯಾಂಕ್ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದರು. ನಿವೃತ್ತ ಉಪನ್ಯಾಸಕ ದಿ. ನಾಗರಕಟ್ಟೆ ಜಯಣ್ಣ ಮತ್ತು ಪಂಕಜಾ ದಂಪತಿಯ ಪುತ್ರರಾದ ಇವರು, ತಮ್ಮ ತಂದೆಯ ಕನಸನ್ನು ನನಸು ಮಾಡಲು ವೈದ್ಯಕೀಯ ವೃತ್ತಿಯನ್ನು ತ್ಯಜಿಸಿ ನಾಗರಿಕ ಸೇವೆಗೆ ಬಂದವರು. ತಮ್ಮ 3ನೇ ಪ್ರಯತ್ನದಲ್ಲಿ  ಯುಪಿಎಸ್​ಇ ಪರೀಕ್ಷೆ ಪಾಸ್ ಮಾಡಿ 2022 ರ ಬ್ಯಾಚ್​ನಲ್ಲಿ ಐಪಿಎಸ್​ ಅಧಿಕಾರಿಯಾಗಿ ಆಯ್ಕೆಯಾದವರು. 

- Advertisement -
Dr Benaka Prasad IPS is New ASP for Sagara Gopalakrishna Naik Transferred
Dr Benaka Prasad IPS is New ASP for Sagara Gopalakrishna Naik Transferred

Dr Benaka Prasad IPS is New ASP for Sagara Gopalakrishna Naik Transferred

Share This Article