ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಿವಿಧ ಘಟನೆಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಮಲೆನಾಡು ಟುಡೆ ಡಿಜಿಟಲ್ ಮೀಡಿಯಾದ ಚಟ್ಪಟ್ ನ್ಯೂಸ್ ಹೀಗಿದೆ.
officer /ಹೊಸ ಎಎಸ್ಪಿ ಅಧಿಕಾರ ಸ್ವೀಕಾರ
ಶಿವಮೊಗ್ಗ : ವರ್ಗಾವಣೆಗೊಂಡಿದ್ದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿಯವರ ಸ್ಥಳಕ್ಕೆ ಇದೀಗ ಎಸ್. ರಮೇಶ್ ಕುಮಾರ್ ಆಗಮಿಸಿದ್ದಾರೆ. ಈ ಸಂಬಂಧ ಇವತ್ತು ಅಧಿಕಾರ ಸ್ವೀಕರಿಸಿದ ಅವರು ಹೆಚ್ಚುವರಿ ಪೊಲೀಸ್ ಅಧೀಕ್ಷಕರು -2 ರವರಿಂದ ಶಿವಮೊಗ್ಗ ಜಿಲ್ಲೆ ಹುದ್ದೆಯ ಪ್ರಭಾರವನ್ನು ವಹಿಸಿಕೊಂಡಿದ್ದಾರೆ.

ಆನವಟ್ಟಿಯಲ್ಲಿ ಪೊಲೀಸ್ ಸಭೆ
ಇತ್ತ ಗೌರಿ ಗಣೇಶ, ಈದ್ ಮಿಲಾದ್ ಹಿನ್ನೆಲೆಯಲ್ಲಿ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ, ಚಂದನ್ ಚಲುವಯ್ಯ ಠಾಣಾ ವ್ಯಾಪ್ತಿಯಲಿನ ಶಾಮಿಯಾನ ಮತ್ತು ಸೌಂಡ್ ಸಿಸ್ಟಮ್ ಮಾಲೀಕರ ಸಭೆ ಕರೆದು, ಮಾರ್ಗಸೂಚಿಗಳನ್ನು ಅನುಸರಿಸುವಂತೆ ಸೂಚಿಸಿದರು.

ಭದ್ರಾವತಿಯಲ್ಲಿ ಅಧಿಕಾರಿಗಳ ಸಭೆ
ಇನ್ನೂ ಭದ್ರಾವತಿಯಲ್ಲಿ ಭದ್ರಾವತಿ ನಗರಸಭೆಯ ಕಮಿಷನರ್ ಹೇಮಂತ್ ಮತ್ತು ಭದ್ರಾವತಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ನಾಗರಾಜ ಕೆ ರವರುಗಳ ನೇತೃತ್ವದಲ್ಲಿ ಹಬ್ಬಗಳ ಹಿನ್ನಲೆಯಲ್ಲಿ ಪೂರ್ವ ಭಾವಿ ಸಭೆ ನಡೆಸಲಾಗಿದೆ. ಈ ವೇಳೆ ಬ್ಯಾನರ್ ಮತ್ತು ಫ್ಲೆಕ್ಸ್ ಗಳಿಗೆ ಅನುಮತಿ ನೀಡುವಾಗ ಅನುಸರಿಸಬೇಕಾದ ಮಾರ್ಗ ಸೂಚಿಗಳು. ಸುಗಮ ಸಂಚಾರ ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಬ್ಯಾರಿಕೆಡ್ ಗಳ ವ್ಯವಸ್ಥೆ ಹಾಗೂ ಸಿಸಿ ಕ್ಯಾಮೆರಾಗಳು ಮತ್ತು ವಾಚ್ ಟವರ್ ಗಳ ಅಳವಡಿಕೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚಿಸಲಾಯ್ತು

ಬೊಮ್ಮನಕಟ್ಟೆಯಲ್ಲಿ ರೂಟ್ ಮಾರ್ಚ್
ಶಿವಮೊಗ್ಗದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಹಾಗೂ ವಿಶೇಷ ಕಾರ್ಯಪಡೆಯ ರೂಟ್ ಮಾರ್ಚ್ ಮುಂದುವರಿದಿದೆ. ವಿಶೇಷ ಪೊಲೀಸ್ ಸಿಬ್ಬಂದಿಯ ತಂಡವು ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮನ ಕಟ್ಟೆಯಿಂದ ಪ್ರಾರಂಭಿಸಿ, ಬೊಮ್ಮನಕಟ್ಟೆಯ ಎಲ್ಲಾ ಬ್ಲಾಕ್ ಗಳಲ್ಲಿ ರೂಟ್ ಮಾರ್ಚ್ ನಡೆಸಿದೆ. ಅಂತಿಮವಾಗಿ ಬೊಮ್ಮನ ಕಟ್ಟೆ ಬಸ್ ನಿಲ್ದಾಣದಲ್ಲಿ ರೂಟ್ ಮಾರ್ಚ್ ಕೊನೆಗೊಳಿಸಲಾಗಿದೆ.

