Sigandur : ಸಿಗಂದೂರಿಗೆ ಬರಲಿದೆ ಯುದ್ದ ನೌಕೆ
ಸಿಗಂದೂರು ಸೇತುವೆ ಬಳಿ ನೌಕಾಪಡೆಯ ಯುದ್ದ ನೌಕೆಯೊಂದನ್ನು ತರಿಸುವ ಸಿದ್ದತೆ ನಡೆಸಲಾಗುತ್ತಿದೆ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿವೈ ರಾಘವೇಂದ್ರ ಯುವಕರಲ್ಲಿ ದೇಶಭಕ್ತಿ ಮೂಡಿಸಲು ಹಾಗೂ ಪ್ರವಾಸಿಗರನ್ನು ಸೆಳೆಯಲು ಯುದ್ದ ನೌಕೆಯನ್ನು ಸ್ಥಾಪಿಸುವ ಕುರಿತಾಗಿ ಯೋಚಿಸಿದ್ದೇವೆ. ಈ ಹಿನ್ನೆಲೆ ನೌಕೆಯನ್ನು ನೀಡುವಂತೆ ರಕ್ಷಣಾ ಇಲಾಖೆಗೆ ಮನವಿ ಮಾಡಿದ್ದೇವೆ ಎಂದರು.
TAGGED:Sigandur

