Malur police station
ಮನೆ ನಿರ್ಮಾಣ ಮಾಡಲು ಸಾಲ ಏಕೆ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಮನನೊಂದು ದಂಪತಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗುಂಡ ನಾಯ್ಕ್ (72) ಹಾಗೂ ಲಕ್ಷಮ್ಮ (58) ಮೃತ ದಂಪತಿಗಳು
ತೀರ್ಥಹಳ್ಳಿ ತಾಲೂಕಿನ ಬಿಳುವೆ ಗ್ರಾಮದ ಕಣಬೂರು ಸಮೀಪದ ಹಲ್ಯಾಪುರ ಎಂಬಲ್ಲಿ ದಂಪತಿಗಳು ಮನೆಯೊಂದನ್ನು ನಿರ್ಮಾಣ ಮಾಡುತ್ತಿದ್ದರು, ಈ ಮನೆಗೆ ಸ್ಲ್ಯಾಬ್ನ್ನು ಸಹ ಹಾಕಲಾಗಿತ್ತು. ಈ ಮನೆ ನಿರ್ಮಾಣ ಮಾಡಲು ದಂಪತಿಗಳು ಸಾಲವನ್ನು ಮಾಡಿದ್ದರು. ಇದರಿಂದಾಗಿ ಮನೆಯವರು ಏಕೆ ಸಾಲ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಅಷ್ಟಕ್ಕೆ ಮನನೊಂದು ಕಾಡಿನಲ್ಲಿ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TAGGED:Malur police station

