ಪ್ರಜ್ವಲ್ ರೇವಣ್ಣರ ಖೈದಿ ಸಂಖ್ಯೆ 15528 : ಜೈಲಿನಲ್ಲಿ ಅವರಿಗೆ ದಿನ ಸಂಬಳ ಎಷ್ಟು ಗೊತ್ತ.?

prathapa thirthahalli
Prathapa thirthahalli - content producer

Prajwal revanna case :  ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಈ ತೀರ್ಪಿನ ಹಿನ್ನೆಲೆಯಲ್ಲಿ ಅವರಿಗೆ ಪರಪ್ಪನ ಅಗ್ರಹಾರದ ಕಾರಾಗೃಹದಲ್ಲಿ ಖೈದಿ ಸಂಖ್ಯೆ 15528 ಅನ್ನು ನೀಡಲಾಗಿದೆ.

Prajwal revanna case :   ಜೈಲಿನಲ್ಲಿ 524  ರೂಪಾಯಿ ಸಂಬಳ

ಜೈಲು ನಿಯಮಗಳ ಪ್ರಕಾರ, ಪ್ರಜ್ವಲ್ ರೇವಣ್ಣ ಸಹ ಇತರ ಕೈದಿಗಳಂತೆ ದಿನಕ್ಕೆ ಕನಿಷ್ಠ ಎಂಟು ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಜೈಲಿನಲ್ಲಿ ತರಕಾರಿ ಬೆಳೆಯುವುದು, ಬೇಕರಿ ಕೆಲಸ, ಕರಕುಶಲ ವಸ್ತುಗಳ ತಯಾರಿಕೆ, ಮರಗೆಲಸ ಸೇರಿದಂತೆ ಹಲವು ಕೆಲಸಗಳನ್ನು ಕೈದಿಗಳಿಗೆ ನೀಡಲಾಗುತ್ತದೆ. ಈ ನಿಯಮಗಳ ಪ್ರಕಾರ,  ಖೈದಿಗಳು ತಮಗೆ ಸೂಕ್ತವಾದ ಕೆಲಸವನ್ನು ಆಯ್ಕೆ ಮಾಡಿಕೊಳ್ಳಬೇಕು.

ಸದ್ಯಕ್ಕೆ, ಅವರ ಆರಂಭಿಕ ಸಂಬಳ ತಿಂಗಳಿಗೆ  524 ರೂಪಾಯಿ ಆಗಿರುತ್ತದೆ. ವರ್ಷ ಕಳೆದಂತೆ ಮತ್ತು ಅವರ ಕೆಲಸದ ಆಧಾರದ ಮೇಲೆ ಈ ಸಂಬಳ ಹೆಚ್ಚಾಗಲಿದೆ. ಈ ಎಲ್ಲಾ ನಿಯಮಗಳು ಪ್ರಜ್ವಲ್ ರೇವಣ್ಣ ಅವರಿಗೂ ಅನ್ವಯವಾಗಲಿದ್ದು, ಇತರ ಕೈದಿಗಳಂತೆ ಜೈಲಿನ ಎಲ್ಲಾ ನಿಯಮಗಳನ್ನು ಅವರು ಪಾಲಿಸಬೇಕಾಗುತ್ತದೆ.

 

Share This Article