ತುಂಗಾ, ಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯಗಳ ಒಳಹರಿವು ಎಷ್ಟಿದೆ ಇವತ್ತು.

prathapa thirthahalli
Prathapa thirthahalli - content producer

Water level update ಕಳೆದು ನಾಲ್ಕೈದು ದಿನಗಳಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ಕಡಿಮೆಯಾಗಿದೆ. ಈ ಹಿನ್ನೆಲೆ  ಜಿಲ್ಲೆಯ ಜೀವನಾಡಿಗಳಾದ ಲಿಂಗನಮಕ್ಕಿ, ಭದ್ರಾ ಮತ್ತು ತುಂಗಾ ಜಲಾಶಯಗಳು ಒಳಹರಿವುಗಳು ಸಹ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.

Water level update ಭದ್ರಾ ಜಲಾಶಯ

ಭದ್ರಾ ಜಲಾಶಯಕ್ಕೆ 10,918 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹಾಗೆಯೇ ಒಟ್ಟು 3,962 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದರಲ್ಲಿ ಬಲದಂಡೆ ನಾಲೆಯಿಂದ 2,650 ಕ್ಯೂಸೆಕ್, ಯುಬಿಪಿ ಕಾಲುವೆಯಿಂದ 700 ಕ್ಯೂಸೆಕ್, ಮತ್ತು ರಿವರ್ ಸ್ಲೂಯಿಸ್‌ನಿಂದ 500 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಸದ್ಯ ಜಲಾಶಯದಲ್ಲಿ 65.677 ಟಿಎಂಸಿ ನೀರು ಸಂಗ್ರಹವಾಗಿದೆ.

ತುಂಗಾ ಜಲಾಶಯ 

ತುಂಗಾ ಜಲಾಶಯಕ್ಕೆ 18,003 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಒಳಹರಿವಿನ ಪ್ರಮಾಣ ಹೆಚ್ಚಳದಿಂದ ಒಟ್ಟು 19,149 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 588.24 ಮೀಟರ್ ಆಗಿದ್ದು, ಇಂದು (ಆಗಸ್ಟ್ 4, 2025) ಬೆಳಗ್ಗೆಯ ಹೊತ್ತಿಗೆ ಜಲಾಶಯದ ನೀರಿನ ಮಟ್ಟ 587.99 ಮೀಟರ್‌ಗೆ ತಲುಪಿದೆ.

ಲಿಂಗನಮಕ್ಕಿ ಜಲಾಶಯ

ಲಿಂಗನ ಮಕ್ಕಿ ಜಲಾಶಯಕ್ಕೆ ಪ್ರಸ್ತುತ 11,224 ಕ್ಯೂಸೆಕ್ ನೀರು ಹರಿದು ಬರುತ್ತಿದೆ.  7,549 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. 

ಇದರಲ್ಲಿ ಸ್ಲೂಯಿಸ್ ಗೇಟ್ ಮೂಲಕ 7,549 ಕ್ಯೂಸೆಕ್ ನೀರು ಹೊರ ಹೋಗುತ್ತಿದ್ದು, ಪೆನ್‌ಸ್ಟಾಕ್ ಮತ್ತು ಸ್ಪಿಲ್‌ವೇಗಳಿಂದ ಯಾವುದೇ ನೀರನ್ನು ಹೊರಬಿಡುತ್ತಿಲ್ಲ. ಜಲಾಶಯದ ಇಂದಿನ ನೀರಿನ ಸಂಗ್ರಹ ಸಾಮರ್ಥ್ಯ 127.95 TMC (ಶೇ. 84.38) ಇದೆ.

 

 

Share This Article