how to get free Pahani ಸಾಮಾನ್ಯವಾಗಿ ಜಮೀನು ಮಾಲೀಕರು ಮರಣ ಹೊಂದಿದಾಗ, ಅದರ ಮಾಲೀಕತ್ವವನ್ನು ಕಾನೂನುಬದ್ಧವಾಗಿ ವಾರಸುದಾರರಿಗೆ ವರ್ಗಾವಣೆಯಾಗಬೇಕಾಗುತ್ತದೆ. ದಾಖಲೆಗಾಗಿ ಇದು ಬಹಳ ಮುಖ್ಯ. ಈ ಪ್ರಕ್ರಿಯೆಯನ್ನು ಸುಲಭಗೊಳಿಸಲು ಮತ್ತು ಜನರಿಗೆ ಸಹಾಯ ಮಾಡಲು ಇದೀಗ ಸರ್ಕಾರ ಮುಂದಾಗಿದ್ದು, ಮಧ್ಯವರ್ತಿಗಳ ಹಾವಳಿ ಇಲ್ಲದೆ, ನೇರವಾಗಿ ಸಂಬಂಧಪಟ್ಟವರೇ ಅಧಿಕಾರಿಗಳ ಬಳಿಯಲ್ಲಿ ಉಚಿತವಾಗಿ ‘ಇ-ಪೌತಿ ಮಾಡಿಸಿಕೊಳ್ಳಬಹುದಾಗಿದೆ.

ಇದಕ್ಕಾಗಿ ಇ-ಪೌತಿ ಆಂದೋಲನ’ (E-Pouthi Andolana) ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಆಂದೋಲನದ ಅಡಿಯಲ್ಲಿ, ಶಿವಮೊಗ್ಗ ತಾಲ್ಲೂಕಿನ ಜಮೀನುಗಳ ವಾರಸುದಾರರಿಗೆ ಉಚಿತವಾಗಿ ಪಹಣಿ ಪತ್ರವನ್ನು (Record of Rights, Tenancy, and Crops – RTC) ನೀಡಲಾಗುತ್ತದೆ ಎಂದು ಶಿವಮೊಗ್ಗ ತಹಶೀಲ್ದಾರ್ ರಾಜೀವ್ ವಿ.ಎಸ್. ತಿಳಿಸಿದ್ದಾರೆ.
ಯೋಜನೆಯ ಲಾಭ ಪಡೆಯಲು, ಮೃತ ಜಮೀನು ಮಾಲೀಕರ ವಾರಸುದಾರರು , ಮೃತರ ಮರಣ ಪ್ರಮಾಣ ಪತ್ರ, ವಂಶವೃಕ್ಷ, ಮತ್ತು ವಾರಸುದಾರರ ಆಧಾರ್ ಕಾರ್ಡ್‌ನಂತಹ ಅಗತ್ಯ ದಾಖಲೆಗಳನ್ನು ತಮ್ಮ ಗ್ರಾಮದ ಗ್ರಾಮ ಆಡಳಿತಾಧಿಕಾರಿಗಳಿಗೆ ಸಲ್ಲಿಸಬೇಕು.

ಮಧ್ಯವರ್ತಿಗಳ ಸಹಾಯವಿಲ್ಲದೆ, ನೇರವಾಗಿ ಗ್ರಾಮ ಆಡಳಿತಾಧಿಕಾರಿ ಅಥವಾ ರಾಜಸ್ವ ನಿರೀಕ್ಷಕರನ್ನು ಸಂಪರ್ಕಿಸಿ ಉಚಿತವಾಗಿ ತಮ್ಮ ಜಮೀನಿನ ಖಾತೆಯನ್ನು ಬದಲಾಯಿಸಿಕೊಳ್ಳುವಂತೆ ತಹಶೀಲ್ದಾರ್ ರಾಜೀವ್ ವಿ.ಎಸ್. ಕೋರಿದ್ದಾರೆ.
how to get free Pahani
E-Pouthi Andolana, Shivamogga Tahsildar, free RTC, land record transfer, property inheritance, land mutation, E-Pouthi application process, how to get free Pahani, land record change Shivamogga, E-Pouthi registration, Pahani transfer documents, Shivamogga Tahsildar office, E-Pouthi Karnataka website, ಶಿವಮೊಗ್ಗ ತಹಶೀಲ್ದಾರ್, ಉಚಿತ ಪಹಣಿ ಪತ್ರ, ಜಮೀನು ವಾರಸುದಾರಿಕೆ, ಖಾತೆ ಬದಲಾವಣೆ, ಗ್ರಾಮ ಆಡಳಿತಾಧಿಕಾರಿ, ಭೂ ದಾಖಲೆಗಳು, ಕರ್ನಾಟಕ ಸರ್ಕಾರ
