Shivamogga District Police ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸರು ವಿಶೇಷ ಕಾರ್ಯಾಚರಣೆ ಕಾರ್ಯಾಚರಣೆಯನ್ನು ನಡೆಸಿದ್ದು, ಈ ಕಾರ್ಯಾಚರಣೆಯಲ್ಲಿ ಕಮ್ಯುನಲ್ ಗೂಂಡಾಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಅಲ್ಲದೆ ಕಳೆದ ವರ್ಷ ಕೋಮು ಪ್ರಚೋದನೆ ನೀಡುವಂತೆ ವಿಡಿಯೋ ಮಾಡಿದವರಿಗೂ ಈ ಸಲ ಎಚ್ಚರಿಕೆಯನ್ನು ನೀಡಲಾಗಿದೆ.

Shivamogga District Police
ಶಿವಮೊಗ್ಗ ಜಿಲ್ಲೆಯಲ್ಲಿ ಶಾಂತಿಯುತವಾಗಿ ಹಬ್ಬವನ್ನು ಆಚರಿಸುವ ನಿಟ್ಟಿನಲ್ಲಿ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಠಾಣೆಗಳ ಅಧಿಕಾರಿ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ.
ಕಳೆದ ವರ್ಷಗಳಲ್ಲಿ ಗಣಪತಿ ಮತ್ತು ಈದ್ ಮಿಲಾದ್ ಮೆರವಣಿಗೆಗಳ ಸಂದರ್ಭದಲ್ಲಿ ಅಶಿಸ್ತಿನಿಂದ ವರ್ತಿಸಿದವರ ವಿಡಿಯೋಗಳನ್ನು ಪರಿಶೀಲಿಸಿ, ಅಂತಹ ವ್ಯಕ್ತಿಗಳನ್ನು ಪೊಲೀಸ್ ಠಾಣೆಗೆ ಕರೆಸಿ ಎಚ್ಚರಿಕೆ ನೀಡಲಾಗಿದೆ.
ಇದೇ ರೀತಿ, ಆಯಾ ಠಾಣಾ ವ್ಯಾಪ್ತಿಯಲ್ಲಿರುವ ರೌಡಿ ಮತ್ತು ಕಮ್ಯುನಲ್ ಗೂಂಡಾ ಆಸಾಮಿಗಳನ್ನು ಠಾಣೆಗೆ ಕರೆಯಿಸಿ ವಾರ್ನಿಂಗ್ ನೀಡಲಾಗಿದೆ. ಮುಂಬರುವ ಹಬ್ಬಗಳಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಬಾರದೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಅಲ್ಲದೆ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಸೂಕ್ತ ನಿಗಾ ಇಟ್ಟಿರುವ ಪೊಲೀಸ್ ಇಲಾಖೆ ಈ ಪೈಕಿ ಯಾರಾದರೂ ಕಾನೂನು ಉಲ್ಲಂಘನೆ ಮಾಡುವುದು, ಸಾರ್ವಜನಿಕರಿಗೆ ತೊಂದರೆ ಕೊಡುವುದು (Disturbing public peace) ಅಥವಾ ಹಬ್ಬದ ಮೆರವಣಿಗೆಗಳಲ್ಲಿ ದುರ್ನಡತೆ ತೋರುವುದು ಮಾಡಿದಲ್ಲಿ ಅವರ ವಿರುದ್ಧ ಕೇಸ್ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ.
Shivamogga Police Intensifies Security Ahead of Gauri Ganesh and Eid Milad Festivals
Shivamogga Police, Gauri Ganesh festival, Eid Milad, law and order, Shivamogga police station contact, report public disturbance Shivamogga, police helpline Karnataka,Shivamogga District Police website ಶಿವಮೊಗ್ಗ ಪೊಲೀಸ್, ಗೌರಿ ಗಣೇಶ ಹಬ್ಬ, ಈದ್ ಮಿಲಾದ್, ಶಾಂತಿ ಸುವ್ಯವಸ್ಥೆ, ಪೊಲೀಸ್ ಕಾರ್ಯಾಚರಣೆ, ರೌಡಿ ಆಸಾಮಿಗಳು, ಕೋಮು ಗೂಂಡಾಗಳು, ಹಬ್ಬದ ಭದ್ರತೆ, ಕಾನೂನು ಉಲ್ಲಂಘನೆ, ಕರ್ನಾಟಕ ಪೊಲೀಸ್

#ShivamoggaPolice