ತೀರ್ಥಹಳ್ಳಿ ಗುಡ್ಡದ ಮೇಲೆ ಸಿಕ್ಕ ಶವ!/ ಟಿಪ್ಪುನಗರದಲ್ಲಿ ಸಿಕ್ಕಿಬಿದ್ದ ಆಸಾಮಿ/ ಬೈಕ್ ಮಾಲೀಕರೆ ಎಚ್ಚರ! ಶಿವಮೊಗ್ಗ ಸುದ್ದಿಗಳು

ajjimane ganesh

Shivamogga short news  ನಾಪತ್ತೆಯಾಗಿದ್ದ ಕೃಷಿಕನ ಶವ ಪತ್ತೆ

Shivamogga short news 

Shivamogga short news  CGHS Wellness Centres, Mangaluru, Udupi, Shivamogga, Central Government Health Scheme, Prataprao Jadhav, Kota Srinivas Poojary, Nalin Kumar Kateel, Mansukh Mandaviya, Karnataka health, central government pensioners, medical facilities. KSRTC Chatpat News
former death

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಹೊನ್ನೇತಾಳು ಗ್ರಾಮದ ಚಂಗಾರು ನಿವಾಸಿ, 59 ವರ್ಷದ ರಮೇಶ್‌ ಎಂಬ ಕೃಷಿಕ ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಜುಲೈ 26 ರಂದು ಕೃಷಿ ಕೆಲಸಕ್ಕೆಂದು ತೋಟಕ್ಕೆ ತೆರಳಿದ್ದ ಇವರು ಮರಳಿ ಬಂದಿರಲಿಲ್ಲ. ಗ್ರಾಮಸ್ಥರು, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳದ ಸಿಬ್ಬಂದಿ ಮಳೆಯ ನಡುವೆಯೂ ತೀವ್ರ ಶೋಧ ನಡೆಸಿದ್ದರು. ಮಂಗಳವಾರ ಬೆಳಿಗ್ಗೆ ಮನೆಯಿಂದ ಸ್ವಲ್ಪ ದೂರದಲ್ಲಿರುವ ಕಲ್ಲುಗುಡ್ಡ ಸಮೀಪ ರಮೇಶ್‌ ಅವರ ಶವ ಪತ್ತೆಯಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Tragedy Sominakoppa Toddler Attacked by Stray Dogಶಿವಮೊಗ್ಗ, ಬೀದಿ ನಾಯಿ ದಾಳಿ, ಮಗು ಮೇಲೆ ನಾಯಿ ದಾಳಿ, ಸೋಮಿನಕೊಪ್ಪ, ಸರ್ಜಿ ಆಸ್ಪತ್ರೆ, ಬೀದಿ ನಾಯಿ ಹಾವಳಿ, ಮಗು ಗಂಭೀರ ಗಾಯ, ಶಿವಮೊಗ್ಗ ಸುದ್ದಿ, ನಾಯಿ ಕಡಿತ, ಸಾರ್ವಜನಿಕರ ಆಗ್ರಹ. Shocking Husband Bites Wifes Nose Over Debt Dispute in Davangere digital arrest in shivamogga Lokayukta Raid in Shivamogga malenadutoday news paper today malenadutoday news paper 20/05/2025 malenadutoday newspaper today malenadutoday newspaper
malenadutoday news paper 20/05/2025malenadutoday newspaper

ಗಾಂಜಾ ಸೇವಿಸಿ ಓಡಾಡ್ತಿದ್ದ ಆರೋಪಿ ಅರೆಸ್ಟ್

ಇತ್ತ ಶಿವಮೊಗ್ಗದ ಟಿಪ್ಪುನಗರ ಬಲಭಾಗದ 5ನೇ ಕ್ರಾಸ್ ಬಳಿಯ ಖಾಲಿ ಜಾಗದಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಓರ್ವ ವ್ಯಕ್ತಿಯನ್ನು ಪೊಲೀಸರು ಹಿಡಿದು ವಿಚಾರಿಸಿದ್ದರು. ಆ ಸಂದರ್ಭದಲ್ಲಿ ಆತ ಗಾಂಜಾ ಸೇವಿಸಿದ್ದು ಗೊತ್ತಾಗಿದೆ. ಹೀಗಾಗಿ ಆತನಿಗೆ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ, ಆತನ ವಿರುದ್ಧ  ತುಂಗಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬ್ಯಾಂಕ್‌ ಎದುರು ಬೈಕ್ ಕಳ್ಳತನ

ಇನ್ನೊಂದೆಡೆ ಶಿವಮೊಗ್ಗ ನಗರದ ಗಾರ್ಡನ್ ಏರಿಯಾದ ಬಳಿ ಇರುವ  ಬ್ಯಾಂಕ್ ಎದುರು ಬೈಕ್ ಕಳ್ಳತನವಾಗಿದೆ. ಸ್ಪ್ಲೆಂಡರ್ ಬೈಕ್ ಅನ್ನು ಬ್ಯಾಂಕ್ ಎದುರು ನಿಲ್ಲಿಸಿ, ಬ್ಯಾಂಕ್​​ಗೆ ಹೋಗಿದ್ದ ಗ್ರಾಹಕರು, ಅಲ್ಲಿಂದ ಹೊರಕ್ಕೆ ಬರುವಷ್ಟರಲ್ಲಿ ಅವರ ಬೈಕ್ ಕಳ್ಳತನ ಮಾಡಲಾಗಿದೆ. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. 

Shivamogga short news 

 

Share This Article