Jp story : ಆಗುಂಬೆಯ ಮುಸುಕು, ಚಾಲನೆಗೆ ತೊಡಕು, ವಾಹನವನ್ನು ಚಲಾಯಿಸುವಾಗ ಎಚ್ಚರಿಕೆಯಿಂದಿರಿ

prathapa thirthahalli
Prathapa thirthahalli - content producer

Jp story : ಆಗುಂಬೆಯ ಮುಸುಕು | ಚಾಲನೆಗೆ ತೊಡಕು

Jp story : ನಿಸರ್ಗ ಸೌಂದರ್ಯವನ್ನು ಹೊಂದಿರುವ ಆಗುಂಬೆ ಮಳೆಗಾಲದ ವರ್ಷವೈಭವ  ಎಂತವರನ್ನು ಆಕರ್ಷಿಸುತ್ತದೆ. ಇಲ್ಲಿನ ಮಳೆಯ ಆರ್ಭಟವನ್ನು ನೋಡಲೆಂದೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಮಳೆಯಲ್ಲಿ ಮಿಂದು ಮೈಮನಸ್ಸು ತಣಿಸಿಕೊಳ್ಳುತ್ತಾರೆ. ಮಳೆಹಬ್ಬವೆಂಬ ಪರಿಕಲ್ಪನೆಗೆ ಆಗುಂಬೆಯ ಮಳೆಗಾಲವೇ ಮುನ್ನುಡಿ ಬರೆದಂತಿದೆ. 

ಆದರೆ ಆಗುಂಬೆಯ ಸೌಂದರ್ಯ ಎಷ್ಟು ರುದ್ರ ರಮಣಿಯವೋ ಅಷ್ಟೇ ಅಪಾಯ ಕೂಡ ಇದೆ. ಆಗುಂಬೆಯಲ್ಲಿ ಈಗ ಮಂಜು ಮುಸಿಕಿನದ್ದೇ ಮೇಲುಗೈ ಆಗಿದೆ. ಇಲ್ಲಿ ವಾಹನ ಸವಾರರು ಸಂಚರಿಸುವುದು ಕೂಡ ಕಷ್ಟವಾಗಿದೆ. ಪಾರ್ಕಿಂಗ್ ಲೈಟ್ ಹಾಕಿಕೊಂಡು ವಾಹನ ಚಲಾಯಿಸಬೇಕು. ಅತೀ ವೇಗವಾಗಿ ವಾಹನ ಚಲಾಯಿಸಿದರೆ ಅಪಘಾತಗಳಾಗುವ ಸಾಧ್ಯತೆಗಳು ಹೆಚ್ಚಿದೆ. ಮಳೆ ಬಿಟ್ಟಾಗ ಸೃಷ್ಟಿಯಾಗುವ ಮುಸುಕು ನೋಡಲು ಆಕರ್ಷಣೆಯಾಗಿರುತ್ತದೆ. ಎದುರುಗಡೆ ಇರುವ ವ್ಯಕ್ತಿ ಕೂಡ ಕಾಣುವುದು ಕಷ್ಟವಾಗುತ್ತದೆ. 

ಕೇವಲ 30 ರಿಂದ 40 ಕಿಲೋಮೀಟರ್ ಮೇಗದಲ್ಲಿ ಹೋಗುವುದು ಕಷ್ಟವಾಗಿದೆ. ಕಣ್ಣಳೆಗೂ ಇಲ್ಲಿ ವ್ಯಕ್ತಿಗಳಾಗಿ ಅಥವಾ ವಾಹನಗಳಾಗಿ ಕಾಣುವುದು ಕಷ್ಟ. ರಸ್ತೆಯ ಬಗ್ಗೆ ಮಾಹಿತಿ ಇರುವ ಬಸ್ ಮತ್ತು ಕಾರು ಚಾಲಕರು ವಾಹವನ್ನು ಒಂದು ಅಂದಾಜಿನ ಮೇಲೆ ಚಲಾಯಿಸುತ್ತಾರೆ. ಆದರೆ ಮೊದಲ ವಾಹನ ಸವಾರರಾದರೆ, ಆಗುಂಬೆ ರಸ್ತೆ ಹಾಗು ಘಾಟಿಯಲ್ಲಿ ವಾಹನ ಚಲಾಯಿಸುವುದು ಕಷ್ಟ. 14 ಹೇರ್ ಪಿನ್ ಕ್ರಾಸ್ ಗಳನ್ನು ಹೊಂದಿರುವ ಆಗುಂಬೆ ಘಾಟಿಯಲ್ಲಿ ಮಿಸ್ಟ್ ಎದ್ದು ಕಾಣುತ್ತದೆ. ವಾಹನ ಸವಾರರು ಎಚ್ಚರಿಕೆಯಿಂದ ಈ ಘಾಟಿಯಲ್ಲಿ ಸಾಗಬೇಕಿದೆ.

Jp story ಮಂಜು ಮುಸುಕಿರುವ ವಾತಾವರಣ
Jp story ಮಂಜು ಮುಸುಕಿರುವ ವಾತಾವರಣ
Share This Article