sp mithun kumar ಯಾರ್ಯಾರಿದ್ದೀರ? ಮನೆ ವಿಸಿಟ್ ಮಾಡಿದ ಎಸ್ಪಿ ಮಿಥುನ್ ಕುಮಾರ್
ಶಿವಮೊಗ್ಗ : ನಿನ್ನೆ ಜುಲೈ 25 ರಂದು ರಾಮಣ್ಣ ಶ್ರೇಷ್ಠಿ ಪಾರ್ಕ್‌ನಲ್ಲಿ “ಮನೆ ಮನೆಗೂ ಪೊಲೀಸ್” ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಯೋಜನೆಯು ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೊದಲು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಮಿಥುನ್ ಕುಮಾರ್ ಅವರು ಸ್ವತಃ ನಗರದ ಕೆಲವು ಮನೆಗಳಿಗೆ ಭೇಟಿ ನೀಡಿ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ, ಎಸ್ಪಿ ಒಂದು ಮನೆಗೆ ತೆರಳಿ ಅಲ್ಲಿನ ಪುಟ್ಟ ಬಾಲಕನೊಬ್ಬನೊಂದಿಗೆ ಆದರತೆಯಿಂದ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
sp mithun kumar ವೈರಲ್ ಆಗಿರುವ ವಿಡಿಯೋದಲ್ಲಿ, ಎಸ್ಪಿ ಮಿಥುನ್ ಕುಮಾರ್ ಒಂದು ಮನೆಗೆ ಹೋಗುವ ಮುನ್ನ ಅಲ್ಲಿದ್ದ ಪುಟ್ಟ ಬಾಲಕನೊಬ್ಬನನ್ನು ಮಾತನಾಡಿಸಿ, “ಇಲ್ಲಿ ಪೋಸ್ಟರ್ ಅಂಟಿಸಬಹುದೇ?” ಎಂದು ಕೇಳಿ ಪೋಸ್ಟರ್ ಅಂಟಿಸುತ್ತಾರೆ. ನಂತರ, “ಮನೆಯಲ್ಲಿ ಯಾರ್ಯಾರಿದ್ದೀರಿ, ಮನೆ ಒಳಗೆ ಬರಬಹುದೇ?” ಎಂದು ಕೇಳಿ ಮನೆಯೊಳಗೆ ತೆರಳುತ್ತಾರೆ. ಅಲ್ಲಿ ಮನೆಯವರೊಂದಿಗೆ ಮಾತನಾಡುತ್ತಾರೆ. ನಂತರ ಆ ಬಾಲಕನೊಂದಿಗೆ ಮಾತಿಗಿಳಿದ ಎಸ್ಪಿ “ನೀನು ಓದಿ ದೊಡ್ಡ ವ್ಯಕ್ತಿಯಾಗಬೇಕು, ಮನೆಯವರನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಚೈತನ್ಯ ನೀಡುತ್ತಾರೆ. ಇದರ ನಡುವೆ ಬಾಲಕನಿಗೆ “ಬೈಕ್ ಓಡಿಸುತ್ತೀಯಾ?” ಎಂದು ಪ್ರಶ್ನಿಸುತ್ತಾರೆ ಬಾಲಕ “ಇಲ್ಲ, ನನಗೆ ಬೈಕ್ ಓಡಿಸಲು ಮನೆಯಲ್ಲಿ ಕೊಡುವುದಿಲ್ಲ” ಎಂದು ಉತ್ತರಿಸುತ್ತಾನೆ. ಅದಕ್ಕೆ ಎಸ್ಪಿ, “ಒಳ್ಳೆಯದು, 18 ವರ್ಷ ತುಂಬುವ ಮೊದಲು ಬೈಕ್ ಓಡಿಸಬಾರದು” ಎಂದು ಹೇಳಿ ತೆರಳುತ್ತಾರೆ.


ಎಸ್ಪಿ ಮಿಥುನ್ ಕುಮಾರ್ ಅವರ ಈ ಸರಳತೆ ಮತ್ತು ಸಾರ್ವಜನಿಕರೊಂದಿಗೆ ಬೆರೆಯುವ ಗುಣಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ಎಸ್ಪಿ ಮಿಥುನ್ಕುಮಾರ್ರವರು ಮನೆಗೆ ವಿಸಿಟ್ ನೀಡಿದ ರೀತಿಯಂತೆಯೇ ಇನ್ಮುಂದೆ ಬೀಟ್ ಪೊಲೀಸರು ತಮ್ಮ ವ್ಯಾಪ್ತಿಯ ಮನೆಗಳಿಗೆ ಬಂದು ಯೋಗ ಕ್ಷೇಮ ವಿಚಾರಿಸುವುದರ ಜೊತೆಗೆ ಸಮಸ್ಯೆಗಳ ಬಗ್ಗೆಯೂ ಆಲಿಸುತ್ತಾರೆ. ಇದು ಮನೆಗೆ ಪೊಲೀಸ್ ಅಭಿಯಾನದ ಒಂದು ಭಾಗವಾಗಿದೆ.
ಈ “ಮನೆ ಮನೆಗೂ ಪೊಲೀಸ್” ಕಾರ್ಯಕ್ರಮ ಎಂದರೇನು ಮತ್ತು ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು, ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
ಮನೆ ಮನೆಗೂ ಬರುತ್ತಾರೆ ಪೊಲೀಸ್! ಏನಿದು ಹೊಸ ಕಾನ್ಸೆಪ್ಟ್! ಪೂರ್ತಿ ಡಿಟೇಲ್ಸ್ ಓದಿ https://malenadutoday.com/mane-manege-police-program-launched-24/
