Minister Madhu Bangarappa 23 ಶಿವಮೊಗ್ಗ, ಮಲೆನಾಡು ಟುಡೆ ಸುದ್ದಿ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (Madhu Bangarappa) ಅವರ ಹೇಳಿಕೆಯನ್ನು ತಿರುಚಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಾರ್ವಜನಿಕ ಶಾಂತಿ ಕದಡಲು ಯತ್ನಿಸಲಾಗುತ್ತಿದೆ. ಅಂತಹ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗರ ಸಂಘವು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
Minister Madhu Bangarappa 23
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಚಿವರು, ಸಿಗಂದೂರು ಸೇತುವೆ (Sigandur Bridge) ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, “ಸಿಗಂದೂರು ದೇವಸ್ಥಾನವನ್ನು ಯಾರು ಹಾಳು ಮಾಡಲು ಪ್ರಯತ್ನಿಸಿದರು ಎಂಬುದನ್ನು ಒಂದು ತಿಂಗಳಲ್ಲಿ ಹೇಳುತ್ತೇನೆ” ಎಂದು ಹೇಳಿದ್ದರು. ಆದರೆ, ಈ ಹೇಳಿಕೆಯ 19 ಸೆಕೆಂಡ್‌ಗಳ ವಿಡಿಯೋವನ್ನು ಉದ್ದೇಶಪೂರ್ವಕವಾಗಿ ಅರ್ಧಕ್ಕೆ ಕತ್ತರಿಸಿ, “ಸಿಗಂದೂರು ದೇವಸ್ಥಾನವನ್ನು ಹೇಗೆ ಹಾಳು ಮಾಡಬೇಕೆಂದು ಒಂದು ತಿಂಗಳೊಳಗೆ ನಿಮಗೆ ಡಿಟೈಲ್ ಹೇಳುವೆ” ಎಂದು ಹೇಳುವ ರೀತಿಯಲ್ಲಿ ಬಿಂಬಿಸಲಾಗಿದೆ ಎಂಬುದು ಸಂಘದ ಸದಸ್ಯರ ಆರೋಪವಾಗಿದೆ. ‘
ಈ ವಿಡಿಯೋದೊಂದಿಗೆ “ಅ—-ನಿ ವಿದ್ಯಾ ಮಂತ್ರಿಗಳೇ ಸಿಗಂದೂರು ಚೌಡೇಶ್ವರಿ ಮಾತೆಯ ಮಂದಿರ ಹಾಳು ಮಾಡ್ತೀವಿ ಎಂದ ನಾಲಿಗೆಗೆ ತಾಯಿ ಬರೆ ಹಾಕುವುದು ನಿಶ್ಚಿತ” ಎಂಬ ವಾಕ್ಯವನ್ನು ಸೇರಿಸಿ ವಿಡಿಯೋ ವೈರಲ್ ಮಾಡಲಾಗಿದೆ ಎಂದು ಸಂಘವು ಆರೋಪಿಸಿದೆ.



ಈ ರೀತಿಯ ವಿಡಿಯೋ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸಿ, ಸಚಿವರ ಬಗ್ಗೆ ದ್ವೇಷ ಮೂಡಿಸಿ, ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಯತ್ನಿಸಲಾಗುತ್ತಿದೆ ಎಂದು ಎಸ್ಪಿಯವರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಸಚಿವರು ಹೇಳಿರುವ ಮಾತಿ ಅರ್ಥ, ಈ ಹಿಂದೆ ಸಿಗಂದೂರು ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಲು ಅಂದಿನ ಸರ್ಕಾರ ಮಾಡಿದ ಪ್ರಯತ್ನವನ್ನು ವಿರೋಧಿಸಿದ್ದರು. ದೇವಸ್ಥಾನದ ಅಭಿವೃದ್ಧಿಗೆ ಅಡ್ಡಿಪಡಿಸಿದ್ದನ್ನು ಖಂಡಿಸಿ ಹೋರಾಟ ಸಮಿತಿಯನ್ನು ರಚಿಸಿದ್ದರು. ದೇವಸ್ಥಾನವು ಬಹುಸಂಖ್ಯಾತ ಈಡಿಗ ಸಮಾಜದ (Ediga Community) ಅಸ್ಮಿತೆ ಎಂದು ಹೇಳಿ, ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಅಂದಿನ ವಿಚಾರವನ್ನು ಮೆಗ್ಗಾನ್ ಆಸ್ಪತ್ರೆಗೆ ವಿಸಿಟ್ ನೀಡುವ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪರವರು ಹೇಳಿದ್ದರು. ಆದರೆ ಅವರ ಹೇಳಿಕೆಯನ್ನು ಎಡಿಟ್ ಮಾಡಿ ವಿಡಿಯೋ ಹರಿಬಿಡಲಾಗಿದೆ ಎಂದು ಆರೋಪಿಸಲಾಗಿದೆ.
ಹೀಗಾಗಿ ತಿರುಚಿರುವವರ ಮೇಲೆ ಮೊಕದ್ದಮೆ ದಾಖಲಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗರ ಸಂಘವು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ಒತ್ತಾಯಿಸಿದೆ.
Minister Madhu Bangarappa Shivamogga District Arya Eediga Sangha has urged the SP to take action against miscreants for distorting Minister Madhu Bangarappa’s statement about the Sigandur temple and circulating it on social media, causing public unrest.
ಮಧು ಬಂಗಾರಪ್ಪ, ಸಿಗಂದೂರು ದೇವಸ್ಥಾನ, ವಿಡಿಯೋ ವೈರಲ್, ಶಿವಮೊಗ್ಗ, ಆರ್ಯ ಈಡಿಗರ ಸಂಘ, ದ್ವೇಷ ರಾಜಕಾರಣ, ಸಾಮಾಜಿಕ ಜಾಲತಾಣ, ಕಾನೂನು ಕ್ರಮ, Madhu Bangarappa, Sigandur Temple, Video Viral, Shivamogga, Arya Eediga Sangha, Hate Politics, Social Media, Legal Action. #MadhuBangarappa #Shivamogga #SigandurTemple #FakeVideo #KarnatakaPolitics #AryaEedigaSangha