ಶಿವಮೊಗ್ಗ, ಸಾಗರ, ಭದ್ರಾವತಿ, ಶಿಕಾರಿಪುರದಲ್ಲಿ ಏನೆಲ್ಲಾ ನಡೀತು? ಓದಿ! 3 ಸಾವು! ಆ ಒಂದು ಕೇಸ್!

ajjimane ganesh

Latest Updates in Shivamogga Today 22 ಶಿವಮೊಗ್ಗ ಜಿಲ್ಲೆ: ನೇಣು ಬಿಗಿದ ಶವ ಪತ್ತೆ, ಚಿನ್ನಾಭರಣ ಕಳವು, ಹಾಗೂ ರಸ್ತೆ ಅಪಘಾತ

ಸಾಗರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ, ಶಿಕಾರಿಪುರದಲ್ಲಿ ₹6 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಭದ್ರಾವತಿ ಮತ್ತು ಶಿಕಾರಿಪುರದಲ್ಲಿ ಪ್ರತ್ಯೇಕ ರಸ್ತೆ ಅಪಘಾತ, ಇಬ್ಬರು ಸಾವು

1.ಸಾಗರ: ಗುಡ್ಡದ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

Latest Updates in Shivamogga Today 22

ಸಾಗರ ಸಮೀಪದ ವರದಹಳ್ಳಿಯ ಗುಡ್ಡದ ಮೇಲೆ ನಿನ್ನೆ ದಿನ ಸೋಮವಾರ ನೇಣು ಬಿಗಿದ ಸ್ಥಿತಿಯಲ್ಲಿ (Hanging Body Found) ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಮೃತಪಟ್ಟವರನ್ನು ಮಾರ್ಕೆಟ್ ರಸ್ತೆಯಲ್ಲಿ ಚಿನ್ನಾಭರಣ ಉದ್ಯಮ ನಡೆಸುತ್ತಿದ್ದ ನಿತಿನ್ ಶೇಟ್ (34) ಎಂದು ಗುರುತಿಸಲಾಗಿದೆ. ವರದಹಳ್ಳಿ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಮನೆಯವರಿಗೆ ತಿಳಿಸಿದ್ದ ನಿತಿನ್, ಅವರ ಬೈಕ್ ವರದಹಳ್ಳಿ ಸಮೀಪ ಪತ್ತೆಯಾಗಿತ್ತು. ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ (Investigation) ಕೈಗೊಂಡಿದ್ದಾರೆ.

Latest Updates in Shivamogga Todayshort news updates 112 Shivamogga Shivamogga evening news today  Big news today Shivamogga Historic Gathering Malnad Seers Convene Today in Shivamogga shivamogga bhadravati davanagere today post , Missing Mother-in-Law Found in Davangere; Affair Suspected with Son-in-Law,Tragedy in Soraba Schools Colleges Closed on June 25 SIMS Medical Collegesuddi today
shivamogga bhadravati davanagere suddi today

2.ಶಿಕಾರಿಪುರ: ₹6 ಲಕ್ಷ ಮೌಲ್ಯದ ಬಂಗಾರ ಹಾಗೂ ನಗದು ಕಳವು

ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಕ್ರಾಸ್ ಬಳಿ ಮನೆಯೊಂದರಲ್ಲಿ ಮಂಗಳವಾರ ₹6 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹30,000 ನಗದು ಕಳವು ಮಾಡಲಾಗಿದೆ. ಸರ್ಕಾರದಿಂದ ಉಚಿತವಾಗಿ ಸಿಂಟೆಕ್ಸ್ ನೀಡುವುದಾಗಿ ಹೇಳಿ ಬಂದಿದ್ದ ಇಬ್ಬರು ಅಪರಿಚಿತರು ಈ ಕಳವು (Theft) ನಡೆಸಿದ್ದಾರೆ. ಒಬ್ಬ ವ್ಯಕ್ತಿ ಮನೆಯಲ್ಲಿದ್ದ ಮಹಿಳೆಯನ್ನು ಮಹಡಿ ಮೇಲೆ ಕರೆದುಕೊಂಡು ಹೋಗಿ ಮಾಹಿತಿ ಪಡೆಯುತ್ತಿದ್ದಾಗ, ಮತ್ತೊಬ್ಬ ವ್ಯಕ್ತಿ ಬೀರುವಿನಲ್ಲಿದ್ದ ಮಾಂಗಲ್ಯ ಸರ, 2 ಚೈನ್, ಅವಲಕ್ಕಿ ಸರ, 2 ಉಂಗುರ, ಕಿವಿ ಓಲೆ, ಜುಮುಕಿ ಸೇರಿ ಒಟ್ಟು 120 ಗ್ರಾಂ ಬಂಗಾರದ ಆಭರಣ ಹಾಗೂ ₹30,000 ನಗದು ದೋಚಿದ್ದಾನೆ. ನಂತರ ಇಬ್ಬರೂ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.  ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

3.ಭದ್ರಾವತಿ: ರಸ್ತೆ ಅಪಘಾತಕ್ಕೆ ಅರ್ಚಕ ಬಲಿ /

Latest Updates in Shivamogga Today 22

ಭದ್ರಾವತಿಯಲ್ಲಿ ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ಹನುಮಂತಪ್ಪ ಕಾಲೊನಿಯ ಅರ್ಚಕ ಬಿ.ಕೆ. ಲಕ್ಷ್ಮೀಕಾಂತ (50) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ (Died). ಪೂಜೆ ಮುಗಿಸಿ ಮನೆಗೆ ಹೋಗುವಾಗ ಈ ಘಟನೆ ನಡೆದಿದೆ. ಶಿವಮೊಗ್ಗ ಕಡೆಯಿಂದ ಬರುತ್ತಿದ್ದ ಕಾರು ರಾಮಿನಕೊಪ್ಪ ಕ್ರಾಸ್ ಬಳಿ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇವರು ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕೃಷ್ಣ ದೇವಸ್ಥಾನ ಮತ್ತು ಬಿ.ಬಿ. ಮೈನ್ಸ್ ಹತ್ತಿರದ ರಂಗನಾಥಸ್ವಾಮಿ ದೇವಸ್ಥಾನಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು.

4. ಶಿಕಾರಿಪುರ: ಸೈಕಲ್ ಸವಾರನ ದುರ್ಮರಣ

ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಕ್ರಾಸ್‌ನಲ್ಲಿ ಸೈಕಲ್‌ನಲ್ಲಿ ರಸ್ತೆ ದಾಟುತ್ತಿದ್ದಾಗ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಸವಾರ ರುದ್ರನಾಯ್ಕ (66) ಸ್ಥಳದಲ್ಲೇ ಮೃತಪಟ್ಟಿದ್ದಾರೆ (Passed Away). ಅಂಬಾರಗೊಪ್ಪ ಗ್ರಾಮದವರಾದ ರುದ್ರನಾಯ್ಕ ಅವರು ಗ್ರಾಮದಿಂದ ಶಿರಾಳಕೊಪ್ಪ-ಶಿಕಾರಿಪುರ ಮುಖ್ಯರಸ್ತೆ ದಾಟುವಾಗ ಈ ದುರ್ಘಟನೆ (Tragedy) ನಡೆದಿದೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ https://chat.whatsapp.com/CTxKdbjEu0zLLQD5RTVkRt

TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h

ಶಿವಮೊಗ್ಗದ ವಿಶೇಷ ಸುದ್ದಿಗಳಿಗಾಗಿ ಈ ಲಿಂಕ್​ ಕ್ಲಿಕ್ ಮಾಡಿ : https://malenadutoday.com/category/shivamogga/

Latest news from Shivamogga district, Karnataka: A body found hanging in Sagar, gold and cash worth ₹6 lakh stolen in Shikaripura, and two fatal road accidents in Bhadravathi and Shikaripura. Get details on these recent incidents.

ಶಿವಮೊಗ್ಗ ಸುದ್ದಿ, ಸಾಗರ, ಶಿಕಾರಿಪುರ, ಭದ್ರಾವತಿ, ಅಪಘಾತ, ಕಳವು, ಶವ ಪತ್ತೆ, ಚಿನ್ನಾಭರಣ, ಗ್ರಾಮಾಂತರ ಠಾಣೆ, ಸಾವಿನ ಸುದ್ದಿ, Shivamogga News, Sagar, Shikaripura, Bhadravati, Accident, Theft, Body Found, Gold Stolen, Rural Police Station, Fatal Accident. #ShivamoggaNews #KarnatakaCrime #RoadSafety #LocalNews #PoliceInvestigation #TheftAlert #TragicAccident #SagarNews #ShikaripuraNews #BhadravathiNews

Latest Updates in Shivamogga Today 22

Share This Article