Meta Platforms ಸಿಎಂ ಕಚೇರಿಯಿಂದ ಒಂದೇ 1 ಪತ್ರಕ್ಕೆ ಕ್ಷಮೆ ಯಾಚಿಸಿದ ಫೇಸ್​ಬುಕ್​ : ನಡೆದಿದ್ದೇನು

prathapa thirthahalli
Prathapa thirthahalli - content producer

Meta Platforms ಬೆಂಗಳೂರು: ಮೆಟಾ ಒಡೆತನದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕನ್ನಡ ಅನುವಾದಗಳು  ಅಸ್ಪಸ್ಟವಾಗಿರುತ್ತವೆ. ಅದನ್ನು ಕೂಡಲೇ ಸರಿಪಡಿಸಿ ಎಂದು ಸಿಎಂ ಸಿದ್ದರಾಮಯ್ಯ ಕಚೇರಿಯಿಂದ ಮೆಟಾ ಕಂಪನಿಗೆ ಪತ್ರ ಬರೆಯಲಾಗಿದೆ.

ಈ ಕುರಿತು ಸಿಎಂ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿರುವ  ಸಿಎಂ ಸಿದ್ದರಾಮಯ್ಯ ಮೆಟಾ ಪ್ಲಾಟ್‌ಫಾರ್ಮ್‌ಗಳಲ್ಲಿ ಕನ್ನಡ ವಿಷಯದ ದೋಷಪೂರಿತ ಸ್ವಯಂ-ಅನುವಾದವು ಸತ್ಯವನ್ನು ತಿರುಚುತ್ತಿದೆ ಮತ್ತು ಬಳಕೆದಾರರನ್ನು ದಾರಿ ತಪ್ಪಿಸುತ್ತಿದೆ. ಅಧಿಕೃತ ಸಂವಹನಕ್ಕೆ ಬಂದಾಗ ಇದು ವಿಶೇಷವಾಗಿ ಅಪಾಯಕಾರಿ. ನನ್ನ ಮಾಧ್ಯಮ ಸಲಹೆಗಾರರು ಔಪಚಾರಿಕವಾಗಿ ಈ ಸಂಬಂಧ ಮೆಟಾಗೆ ಪತ್ರ ಬರೆದಿದ್ದಾರೆ ಎಂದಿದ್ದಾರೆ.

Meta Platforms ಮೆಟಾ ಸಂಸ್ಥೆಯಿಂದ ಕ್ಷಮೆಯಾಚನೆ:

ಮುಖ್ಯಮಂತ್ರಿ ಕಚೇರಿಯಿಂದ ಪತ್ರ ತಲುಪಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಫೇಸ್​ಬುಕ್​ ಮಾತೃ ಸಂಸ್ಥೆ ಮೆಟಾ, ಕ್ಷಮೆಯಾಚಿಸಿದೆ. ತಮ್ಮ ಅನುವಾದ ವ್ಯವಸ್ಥೆಯಲ್ಲಿ ಕಂಡುಬಂದ ದೋಷಗಳನ್ನು ಸರಿಪಡಿಸಿರುವುದಾಗಿ ಮೆಟಾ ಸ್ಪಷ್ಟಪಡಿಸಿದೆ. ಅನುವಾದದಲ್ಲಿ ಕೆಲಕಾಲ ದೋಷ ಕಂಡುಬರಲು ಕಾರಣವಾಗಿದ್ದ ಅಂಶಗಳನ್ನು ನಾವು ಸರಿಪಡಿಸಿದ್ದೇವೆ. ಇಂತಹ ಘಟನೆ ನಡೆದಿದ್ದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಮೆಟಾ ಸಂಸ್ಥೆ ತಿಳಿಸಿದೆ.

cm siddaramaiah
cm siddaramaiah
Share This Article