sigandur bridge news : ಸಿಗಂದೂರು ಸೇತುವೆ ಉದ್ಘಾಟನೆ ವೇಳೆ ಇಷ್ಟೆಲ್ಲಾ ನಡೀತು, ಸಿಟ್ಟಾದ ಬಿವೈ ರಾಘವೇಂದ್ರ, ಕಾರಣವೇನು

prathapa thirthahalli
Prathapa thirthahalli - content producer

sigandur  bridge news :  ನಿನ್ನೆ ನಡೆದ ಸಿಗಂದೂರು ಸೇತುವೆ ಉದ್ಘಾಟನಾ ಸಮಾರಂಭದ ವೇಳೆ ಮಳೆಯಷ್ಟೇ ಜೋರಾಗಿ ಅಪಪ್ರಚಾರ ನಡೆದಿದೆ ಮತ್ತು ಈ ಸಂದರ್ಭದಲ್ಲಿ ನಮ್ಮ ಜಿಲ್ಲೆಯ ಕೆಲವು ರಾಜಕಾರಣಿಗಳು ಸಣ್ಣತನ ಪ್ರದರ್ಶಿಸಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ

ಇಂದು ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದರೆ ಲಾಂಚ್ ಸಂಚಾರಕ್ಕೆ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಅಧಿವೇಶನಕ್ಕೂ ಮುನ್ನವೇ ಸೇತುವೆ ಉದ್ಘಾಟನೆ ನಡೆಸಲಾಯಿತು. ಅಲ್ಲದೆ, “ನಮ್ಮ ಜಿಲ್ಲೆಯ ರಾಜಕಾರಣಿಗಳು ಸೇತುವೆ ನಿರ್ಮಾಣವಾದರೂ ಸಹ ಇನ್ನೂ ಏಕೆ ಬಿಡುಗಡೆ ಮಾಡುತ್ತಿಲ್ಲ ಎಂದು ಅಪಪ್ರಚಾರ ಮಾಡುತ್ತಾರೆ. ಇದೇ ಕಾರಣದಿಂದಾಗಿ ಸೇತುವೆಯನ್ನು ಬೇಗ ಉದ್ಘಾಟನೆ ಮಾಡಲಾಯಿತು. ಈ ವೇಳೆ ಹತಾಶ ಮನೋಭಾವನೆಯಿಂದ ನಮ್ಮ ಜಿಲ್ಲೆಯ ರಾಜಕಾರಣಿಗಳು ಸಣ್ಣತನ ಪ್ರದರ್ಶನ ಮಾಡಿದ್ದಾರೆ” ಎಂದು ಅವರು ಆರೋಪಿಸಿದರು.

ಈ ಹಿಂದೆ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತು ಸಚಿವ ಮಧು ಬಂಗಾರಪ್ಪ ಇಬ್ಬರೂ ಸೇತುವೆಯನ್ನು ವೀಕ್ಷಿಸಲು ಹೋದಾಗ ತಮಗೆ ಬಹಳ ಸಂತೋಷವಾಗಿತ್ತು. “ಈಗಲಾದರೂ ಅಭಿವೃದ್ಧಿ ವಿಚಾರದಲ್ಲಿ ಸ್ಪರ್ಧೆ ಏರ್ಪಾಡು ಆಯ್ತಲ್ಲ” ಎಂದು ನಾನು ಸಂತೋಷಪಟ್ಟಿದ್ದೆ, ಆದರೆ ಇಬ್ಬರೂ ಸೇತುವೆ ವಿಚಾರದಲ್ಲಿ ಹಗುರವಾಗಿ ಮಾತನಾಡಿ, “ಅಪ್ಪನ ದುಡ್ಡಿನಿಂದ ಮಾಡಿಲ್ಲ, ಯಾರಪ್ಪನ ಮನೆ ದುಡ್ಡು? ಟ್ರಂಪ್ ಕರೆಸಿ, ಮೋದಿ ಕರೆಸಿ” ಎಂದು ಹಗುರವಾಗಿ ಮಾತನಾಡುವ ಪ್ರಯತ್ನ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಅಭಿವೃದ್ಧಿ ಕಾರ್ಯಗಳನ್ನು ವೈಯಕ್ತಿಕಗೊಳಿಸಿ ಮಾತನಾಡುವುದು ಸರಿಯಲ್ಲ ಎಂದು ಅವರು ಪರೋಕ್ಷವಾಗಿ ಟೀಕಿಸಿದರು.

sigandur bridge news : ಹೃದಯ ವೈಶಾಲ್ಯತೆ ಇರುವ ಸಿಎಂ ರ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ.

ಹೃದಯ ಶ್ರೀಮಂತಿಕೆ ಇರುವ ಸಿಎಂ ರನ್ನ ನಿಮ್ಮೆ ದಾರಿ ತಪ್ಪಿಸುವ ರೀತಿ ದಾರಿ ತಪ್ಪಿಸು  ರೀತಿ ಮಾಡಿದ್ದಾರೆ. ಹತಾಶ ಮನೋಬಾವದಿಂದಲೇ ಈ ರೀತಿ ಮಾಡಲಾಗಿದೆ.  ಈ ಮೂಲಕ ನಮ್ಮ ಜಿಲ್ಲೆಯ ಮುಖಂಡರು  ಸಿಎಂ ಅವರನ್ನ ಕೂಡ ಸಣ್ಣವರನ್ನಾಗಿ ಮಾಡುವ ಕೆಲಸ ಆಗಿದೆ ಎಂದು ಹೇಳಿದರು 

sigandur  bridge news : ಉದ್ಘಾಟನೆಗೆ ತಂದ ಮೂಮೆಂಟೂಗಳನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ.

ಈ ಕಾರ್ಯಕ್ರಮಕ್ಕೂ ಮುನ್ನವೇ ಐಪಿಎಸ್, ಐಎಎಸ್, ಮತ್ತು ಪಿಡಬ್ಲ್ಯೂಡಿ ಅಧಿಕಾರಿಗಳು ನಾವು ವಾಪಸ್ ಹೋಗುತ್ತೇವೆ ಎಂದು ಹೇಳಿದ್ದಲ್ಲದೆ, ಉದ್ಘಾಟನಾ ಸಮಾರಂಭಕ್ಕೆ ತರಲಾಗಿದ್ದ ಸ್ಮರಣಿಕೆಗಳನ್ನು (ಮುಮೆಂಟೋ) ಸಹ ತೆಗೆದುಕೊಂಡು ಹೋಗಿದ್ದಾರೆ. “ಕೇಂದ್ರ ಸಚಿವರು ವಿಮಾನದ ಬಗ್ಗೆ, ಹೆಲಿಕಾಪ್ಟರ್ ಹಾರುವ ಬಗ್ಗೆ ತಲೆಕೆಡಿಸಿಕೊಂಡಿದ್ದರೆ, ನನಗೆ ಶಾಲು ಇಲ್ಲ, ಹಾರ ಇಲ್ಲ, ಮುಮೆಂಟೋ ಇಲ್ಲ ಎಂದು ಫೋನ್ ಬರುತ್ತೆ. ಆಗ ನಮ್ಮ ಮುಖಂಡರ ಮನೆಯಲ್ಲಿದ್ದ ಮುಮೆಂಟೋ, ಶಾಲು, ಹಾರ ತರಿಸಿಕೊಂಡು ಕಾರ್ಯಕ್ರಮ ಮಾಡುತ್ತೇವೆ” ಎಂದು ರಾಘವೇಂದ್ರ ಹೇಳಿದರು.

sigandur bridge news ಬಿವೈ ರಾಘವೇಂದ್ರ
sigandur bridge news ಬಿವೈ ರಾಘವೇಂದ್ರ
Share This Article