Sovinakoppa Cow Rescue : 30 ಅಡಿ ಆಳದ ಚಾನಲ್‌ಗೆ ಬಿದ್ದ ಹಸುವನ್ನು ಯಶಸ್ವಿಯಾಗಿ ರಕ್ಷಿಸಿದ ಅಗ್ನಿಶಾಮಕದಳದ ಸಿಬ್ಬಂದಿಗಳು

prathapa thirthahalli
Prathapa thirthahalli - content producer

Sovinakoppa Cow Rescue ಶಿವಮೊಗ್ಗ: 30 ಅಡಿ ಆಳದ ಚಾನಲ್‌ಗೆ ಬಿದ್ದ ಹಸುವಿನ ಯಶಸ್ವಿ ರಕ್ಷಣೆ

ಶಿವಮೊಗ್ಗ: ನಗರದ ಸೋಮಿನ ಕೊಪ್ಪ ಬಳಿ 30 ಅಡಿ ಆಳದ ಚಾನಲ್‌ಗೆ ಬಿದ್ದಿದ್ದ ಹಸುವೊಂದನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಯಶಸ್ವಿಯಾಗಿ ರಕ್ಷಿಸಿದ್ದಾರೆ.

ಇಂದು (ಶುಕ್ರವಾರ, ಜುಲೈ 11, 2025) ಸೋಮಿನ ಕೊಪ್ಪ ನಿವಾಸಿ ರಝಿಕ್ ಭಾಷಾ ಎಂಬುವವರ ಹಸು 30 ಅಡಿ ಆಳದ ಚಾನಲ್‌ಗೆ ಆಕಸ್ಮಿಕವಾಗಿ ಬಿದ್ದಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ವಿಷಯ ತಿಳಿಯುತ್ತಿದ್ದಂತೆ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿದರು.

ಘಟನಾ ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಹಸುವಿನ ರಕ್ಷಣೆ ಒಂದು ಸವಾಲಿನ ಕೆಲಸವಾಗಿ ಪರಿಣಮಿಸಿತು. ಆದರೂ, ಅಗ್ನಿಶಾಮಕ ದಳದ ಸಿಬ್ಬಂದಿ ತಮ್ಮಲ್ಲಿದ್ದ ಒಬ್ಬ ಸಿಬ್ಬಂದಿಗೆ ಸೊಂಟಕ್ಕೆ ಹಗ್ಗ ಕಟ್ಟಿ ಚಾನಲ್‌ನ ಕೆಳಗೆ ಇಳಿಸಿದರು. ನಂತರ, ಹಸುವಿಗೆ ರೆಸ್ಕ್ಯೂ ರೋಪ್​ ಹಾಕಿ ಅದನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.

ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಸೀನಿಯರ್ ಮೋಸ್ಟ್ ಆಫೀಸರ್ AFSTO ಮುಕ್ತಂ ಹುಸೇನ್, LF ಲೋಹಿತ್ ಕುಮಾರ್, FD ಸಂಗಮೇಶ್, FM ವೆಂಕಟೇಶ್ ಎಂ, ನಿಹಾರ್ ಕೆಕೆ, ಭೀಮಪ್ಪ ತುಂಗಳ, ಮತ್ತು ಯಶವಂತ್ ಅವರು ಭಾಗವಹಿಸಿದ್ದರು. 

Sovinakoppa Cow Rescue ಹಸುವನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು
Sovinakoppa Cow Rescue ಹಸುವನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು

Malenadu Today

Share This Article