fraud case shivamogga : ಶಿವಮೊಗ್ಗ ನಗರದ ಪ್ರಸಿದ್ಧ ಸ್ಟೀಲ್ಸ್ ಅಂಗಡಿ ಮಾಲೀಕರೊಬ್ಬರಿಗೆ ಬರೋಬ್ಬರಿ 2.6 ಲಕ್ಷ ರೂಪಾಯಿ ವಂಚನೆಯಾಗಿದ್ದು, ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಹಕರ ಸೋಗಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಸ್ಟೀಲ್ ಖರೀದಿಸಿ ಹಣ ನೀಡದೆ ಮೋಸ ಮಾಡಿದ್ದಾರೆ ಎಂದು ಮಾಲೀಕರು ಆರೋಪಿಸಿದ್ದಾರೆ.
fraud case shivamogga ವಂಚನೆ ನಡೆದಿದ್ದು ಹೇಗೆ?
ಜೂನ್ 17, 2025 ರಂದು, ಶಿವಮೊಗ್ಗದ ಸ್ಟೀಲ್ಸ್ ಅಂಗಡಿ ಒಂದಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ದೂರವಾಣಿ ಕರೆ ಮಾಡಿ, ತಾನು ‘ಕುಮಾರ್’ ಎಂದು ಪರಿಚಯಿಸಿಕೊಂಡಿದ್ದಾನೆ. ಭದ್ರಾವತಿ ತಾಲ್ಲೂಕಿನ ಹೊಸಹಳ್ಳಿಗೆ 2,71,000 ರೂಪಾಯಿ ಮೌಲ್ಯದ ಸ್ಟೀಲ್ ಬೇಕು ಎಂದು ಆರ್ಡರ್ ನೀಡಿದ್ದಾನೆ. ಆರ್ಡರ್ ಖಚಿತಪಡಿಸಲು 11,000 ರೂಪಾಯಿಗಳನ್ನು ಫೋನ್‌ಪೇ ಮೂಲಕ ಮುಂಗಡವಾಗಿ ಪಾವತಿಸಿದ್ದು, ಉಳಿದ ಹಣವನ್ನು ಸ್ಟೀಲ್ ಡೆಲಿವರಿ ಆದ ನಂತರ ನೀಡುವುದಾಗಿ ತಿಳಿಸಿದ್ದಾನೆ.
ಇದಕ್ಕೆ ಒಪ್ಪಿದ ಅಂಗಡಿ ಮಾಲೀಕರು, ತಮ್ಮ ಅಂಗಡಿಯ ಲೇಬರ್ ಒಬ್ಬರಿಗೆ ಸ್ಟೀಲ್ ಲೋಡ್ ಮಾಡಿಕೊಂಡು ಹೊಸಹಳ್ಳಿಯ ನಿವಾಸಿಯೊಬ್ಬರ ಮನೆಗೆ ಡೆಲಿವರಿ ನೀಡುವಂತೆ ಕಳುಹಿಸಿದ್ದಾರೆ. ಲೇಬರ್ ಸ್ಟೀಲ್ ಅನ್ನು ಅನ್‌ಲೋಡ್ ಮಾಡುವಾಗ ‘ಕುಮಾರ್’ ಎಂಬ ವ್ಯಕ್ತಿ ಸ್ಥಳದಲ್ಲಿ ಹಾಜರಿದ್ದನೆಂದು ತಿಳಿದುಬಂದಿದೆ. ಸ್ಟೀಲ್ ಅನ್‌ಲೋಡ್ ಆದ ನಂತರ, ಆರ್ಡರ್ ಮಾಡಿದ್ದ ವ್ಯಕ್ತಿ ಲೇಬರ್ ಬಳಿ, “ನಾನು ಪಾರ್ಟಿಯಿಂದ ಹಣ ತೆಗೆದುಕೊಂಡು ಬರುತ್ತೇನೆ, ನೀನು ಸರ್ಕಲ್ ಹತ್ತಿರ ಬಾ” ಎಂದು ಹೇಳಿದ್ದಾನೆ. ಇದನ್ನು ನಂಬಿದ ಲೇಬರ್ ಸರ್ಕಲ್ ಬಳಿ ಬಂದು ಬಹಳ ಹೊತ್ತು ಕಾದು ನಿಂತರೂ, ಆರ್ಡರ್ ಮಾಡಿದ್ದ ವ್ಯಕ್ತಿ ಬರಲೇ ಇಲ್ಲ. ನಂತರ ಆತನಿಗೆ ಕರೆ ಮಾಡಿದಾಗ, ಮೊಬೈಲ್ ಸ್ವಿಚ್ ಆಫ್ ಆಗಿದೆ. ಇದರಿಂದ ಅನುಮಾನಗೊಂಡ ಲೇಬರ್ ತಕ್ಷಣ ಅಂಗಡಿ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ.

fraud case shivamogga ಮಾಲೀಕರ ಸೂಚನೆಯಂತೆ ಲೇಬರ್ ಮತ್ತೆ ಸ್ಟೀಲ್ ಅನ್‌ಲೋಡ್ ಮಾಡಿದ ಹೊಸಹಳ್ಳಿಯ ಆ ನಿವಾಸಿಯ ಮನೆಗೆ ಹೋಗಿ ಹಣ ಕೇಳಿದಾಗ, ಆತ ನಿಮ್ಮ ಜೊತೆ ಬಂದಿದ್ದವರ ಬಳಿಯೇ ಹಣ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾನೆ. ಇದರಿಂದ ಆಘಾತಗೊಂಡ ಮಾಲೀಕರು ತಮ್ಮ ಮಗನನ್ನು ಸ್ಥಳಕ್ಕೆ ಕಳುಹಿಸಿದ್ದಾರೆ.ಮಾಲೀಕರ ಮಗ ವಿಚಾರಿಸಿದಾಗ, ಆ ನಿವಾಸಿ ನಾನು ನಿಮ್ಮ ಅಂಗಡಿಯಲ್ಲಿ ಯಾವುದೇ ಆರ್ಡರ್ ಮಾಡಿಲ್ಲ, ನನಗೂ ನಿಮಗೂ ಯಾವುದೇ ವ್ಯವಹಾರವಿಲ್ಲ ಎಂದು ಉಡಾಫೆಯಾಗಿ ಮಾತನಾಡಿದ್ದಾನೆ. ಅಲ್ಲದೆ, ತಾವು ಡೆಲಿವರಿ ನೀಡಿದ ಸ್ಟೀಲ್ ಅನ್ನು ವಾಪಸ್ ತೆಗೆದುಕೊಂಡು ಹೋಗಲು ಸಹ ಆತ ಬಿಟ್ಟಿಲ್ಲ ಎಂದು ಮಾಲೀಕರ ಮಗ ತಿಳಿಸಿದ್ದಾರೆ. “ನಾನು ಆ ವ್ಯಕ್ತಿಗೆ ಹಣ ಕೊಟ್ಟಿದ್ದೇನೆ, ಅವರ ಬಳಿ ಹೋಗಿ ತೆಗೆದುಕೊಳ್ಳಿ ಎಂದಿದ್ದಾರೆ ಎನ್ನಲಾಗಿದೆ.
ಒಟ್ಟಾರೆಯಾಗಿ, ಆರ್ಡರ್ ಮಾಡಿದ್ದ ವ್ಯಕ್ತಿ ಮತ್ತು ಹೊಸಹಳ್ಳಿಯ ನಿವಾಸಿ ಇಬ್ಬರೂ ಸೇರಿಕೊಂಡು ಸುಮಾರು 2,60,000 ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಅಂಗಡಿ ಮಾಲೀಕರು ದೂರಿನಲ್ಲಿ ತಿಳಿಸಿದ್ದಾರೆ. ಇಬ್ಬರು ವಂಚಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಅವರು ಪೊಲೀಸರನ್ನು ಒತ್ತಾಯಿಸಿದ್ದಾರೆ.