jp story today : ಶಿವಮೊಗ್ಗ ನಗರದಲ್ಲಿ ಹೈ ಟೆಕ್ ವೇಶ್ಯಾವಾಟಿಕೆ ದಂಧೆ. ಎಸ್ಕಾರ್ಟ್ ಗಳ ಬಳಿ ಇವೇ ಸಾವಿರಾರು ಯುವತಿಯರ ಪೋಟೋಗಳು
jp story today : ಶಿವಮೊಗ್ಗ ನಗರದಲ್ಲಿ ಈ ಹಿಂದೆ ನೆಹರು ರೋಡ್ ಗೆ ಮಹಿಳೆಯರು ಬರಲು ಹಿಂದೇಟು ಹಾಕುವಂತ ವಾತಾವರಣ ಇತ್ತು. ಇಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡ ಮಹಿಳೆಯರು ಇರುತ್ತಿದ್ದರು. ಇವರು ಗ್ರಾಹಕರನ್ನು ಕರೆಯುವ ರೀತಿ, ಇವರ ವರ್ತನೆ ದಾರಿಹೋಕರನ್ನು ಕಿರಿಕಿರಿ ಮಾಡುತ್ತಿತ್ತು. ಇದು ಎಷ್ಟರ ಮಟ್ಟಿಗೆ ಎಂದರೆ ಸಂಭಾವಿತ ಹೆಣ್ಣು ಮಕ್ಕಳು ನೆಹರು ರಸ್ತೆಯ ಫುಟ್ ಪಾತ್ ನಲ್ಲಿ ಸಾಗುತ್ತಿದ್ದರೆ, ಪುರುಷರು ಸನ್ನೆ ಮಾಡಿ ಕರೆಯುತ್ತಿದ್ದರು..ಇಲ್ಲಿ ವೇಷ್ಯವಾಟಿಕೆಯಲ್ಲಿ ತೊಡಗಿಸಿಕೊಂಡ ಹೆಣ್ಣು ಮಕ್ಕಳು ಹೊಟ್ಟೆಪಾಡಿಗಾಗಿ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು.ಕಾಲ ಕ್ರಮೇಣ ನೆಹರು ರಸ್ತೆಯಲ್ಲಿ ವೇಶ್ಯಾವಾಟಿಕೆಯ ವಾಸನೆ ಅಳಿಸಿ ಹೋಗಿದೆ.
jp story today ಆದರೆ ಅದರ ಕರಾಳ ರೂಪ ನಗರದ ಹೊರ ವಲಯದ ಪ್ರತಿಷ್ಠಿತ ಬಡಾವಣೆಗಳನ್ನು ಆವರಿಸಿಕೊಂಡಿದೆ. ನಗರದ ಹೊರವಲಯದ ಕೆಲವು ಒಂಟಿ ಮನೆಗಳಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಮೊಬೈಲ್ ಆಪ್, ಡೇಟಿಂಗ್ ಆಪ್ ಗಳನ್ನು ಬಳಸಿ ಎಸ್ಕಾರ್ಟ್ ಗಳ ಮೂಲಕ ಯುವತಿಯನ್ನು ಬುಕ್ ಮಾಡಿಕೊಳ್ಳುತ್ತಾರೆ. ತಾವು ಬಯಸಿದ ಮನೆಗೆ ಹೋಗಿ ತಮ್ಮ ವಾಂಛೆ ತೀರಿಸಿಕೊಂಡು ಬರುತ್ತಾರೆ. ಗೂಗಲ್ ಸರ್ಚ್ ನಲ್ಲಿ ಶಿವಮೊಗ್ಗ ಎಸ್ಕಾರ್ಟ್ ಎಂದು ಒತ್ತಿದರೆ, ಪಿಂಪ್ ಗಳ ಫೋನ್ ನಂಬರ್ ಸಿಗುತ್ತದೆ. ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿದರೆ, ಯುವತಿಯರ ಫೋಟೋ ಕಳಿಸಲು ಒಂದು ಸಾವಿರ ಇಲ್ಲವೇ ಎರಡು ಸಾವಿರ ಕೇಳುತ್ತಾರೆ.
ಗೂಗಲ್ ಪೇ ಇಲ್ಲವೇ ಪೋನ್ ಪೇ ಮೂಲಕ ಹಣ ಪಾವತಿಸಿದರೆ, ಹತ್ತಾರು ಯುವತಿಯರ ಫೋಟೊ ಗಳು ಗ್ರಾಹಕನ ಮೊಬೈಲ್ ಗೆ ಬರುತ್ತವೆ. ಗ್ರಾಹಕ ಯಾವ ಯುವತಿಯನ್ನು ಆಯ್ಕೆ ಮಾಡುತ್ತಾನೋ, ಆ ಯುವತಿಯನ್ನು ನಿಗದಿತ ಸ್ಥಳಕ್ಕೆ ಕಳುಹಿಸಲಾಗುತ್ತದೆ. ಇದನ್ನು ಸ್ಪತಃ ಅನುಭವಿಸಿ ಬಂದ ಗ್ರಾಹಕರೇ ಹೇಳಿಕೊಂಡ ವಿಷಯವಾಗಿದೆ. ಶಿವಮೊಗ್ಗದಲ್ಲಿ ಮಾಂಸ ದಂಧೆಯಲ್ಲಿ ತೊಡಗಿಸಿಕೊಂಡ ಎಸ್ಕಾರ್ಟ್ ಗಳ ಬಳಿ ಯುವತಿಯರ ಸಾವಿರಾರು ಪೋಟೊಗಳಿವೆ. ಕೆಲವು ಯುವತಿಯರ ಪೋಟೊಗಳು ಪಾರ್ನ್ ನಲ್ಲೂ ಕೂಡ ಹರಿಯಬಿಡಲಾಗಿದೆ ಎಂದು ಹೆಸರು ಹೇಳಲಿಚ್ಚದ ಗ್ರಾಹಕರು ಮಲೆನಾಡು ಟುಡೆಗೆ ತಿಳಿಸಿದ್ದಾರೆ.

jp story today ಲಾಡ್ಜ್ ಗಳನ್ನು ಬುಕ್ ಮಾಡುವ ಯ್ಯಾಪ್ ಗಳ ಮೂಲಕವೂ ಶಿವಮೊಗ್ಗದಲ್ಲಿ ಮಾಂಸದ ದಂಧೆ ನಡೆಯುತ್ತಿದೆ. ದಿನದ ಇಪ್ಪತ್ತು ನಾಲ್ಕು ಗಂಟೆ ಬದಲಿಗೆ ಒಂದು ಗಂಟೆಗೆ ಯ್ಯಾಪ್ ಮೂಲಕ ಲಾಡ್ಜ್ ಬುಕ್ ಮಾಡುವ ಗ್ರಾಹಕರು ಕಡಿಮೆ ಹಣ ಕೊಟ್ಟು ತಮ್ಮ ಆಸೆ ಈಡೇರಿಸಿಕೊಂಡು ಬರುತ್ತಿದ್ದಾರೆ. ಪ್ರೀತಿ ಪ್ರೇಮದಲ್ಲಿ ಬಿದ್ದ ಕಾಲೇಜು ಯುವಕ ಯುವತಿಯರು ಈ ರೀತಿಯ ಯ್ಯಾಪ್ ಗೆ ಮೊರೆ ಹೋಗುತ್ತಿದ್ದಾರೆ ಎನ್ನಲಾಗಿದೆ.
jp story today: ಮಸಾಜ್ ಪಾರ್ಲರ್ ಗಳಲ್ಲಿ ಹ್ಯಾಪಿ ಎಂಡಿಂಗ್
ಶಿವಮೊಗ್ಗ ನಗರದಲ್ಲಿ ಹಾದಿ ಬೀದಿಗಳಲ್ಲಿ ಇಂದು ಸ್ಪಾ ಮಸಾಜ್ ಪಾರ್ಲರ್ ಗಳು ತಲೆ ಎತ್ತಿವೆ. ಮೇಲಂಸ್ತಿನ ಮಳಿಗೆಗಳಲ್ಲಿ ಐಷಾರಾಮಿಯಾಗಿ ತಲೆ ಎತ್ತಿರುವ ಸ್ಪಾ ಗಳು ಸಾವಿರಾರು ರೂಪಾಯಿ ಬಾಡಿಗೆ ತೆತ್ತುತ್ತಿವೆ. ಆದರೆ ಕೆಲವು ಮಸಾಜ್ ಪಾರ್ಲರ್ ಗಳ ಮಾಲೀಕರು ಮೂಲ ಉದ್ದೇಶವನ್ನು ಮರೆತಂತೆ ಕಾಣುತ್ತಿದೆ. ಗ್ರಾಹಕರನ್ನು ಆಕರ್ಷಿಸುವ ನೆಪದಲ್ಲಿ ಕೆಲವು ಸ್ಪಾ ಗಳಲ್ಲಿ ಮಾಂಸದ ದಂಧೆಯು ನಡೆಯುತ್ತಿದೆ ಎನ್ನಲಾಗಿದೆ.
ಶಿವಮೊಗ್ಗ ನಗರದಲ್ಲಿ ಸ್ಪಾ ಗಳಿಗೆ ಲಿಂಕ್ ಗಳಿದ್ದು, ಗ್ರಾಹಕ ಯಾವ ಸ್ಪಾ ಗೆ ಹೋಗಬೇಕು, ಯಾವ ಯುವತಿ ಮಸಾಜ್ ಮಾಡಬೇಕು ಎನ್ನುವುದು ಗ್ರಾಹಕ ವಾಟ್ಸಾಪ್ ನಲ್ಲಿ ಮೊದಲೇ ಆಯ್ಕೆ ಮಾಡಿಕೊಂಡಿರುತ್ತಾನೆ. ಆತ ಆಯ್ಕೆ ಮಾಡಿದ ಯುವತಿ ನಿಗದಿತ ಸ್ಪಾ ಗೆ ಬಂದು ಮಜಾಜ್ ಮಾಡುತ್ತಾಳೆ.
shivamogga news today ಸ್ಪಾ ಭಾಷೆಯಲ್ಲಿ ಹ್ಯಾಪಿ ಎಂಡಿಂಗ್
ಮಸಾಜ್ ನ ನಂತರ ಗ್ರಾಹಕನ ಲೈಂಗಿಕ ಆಸೆಯನ್ನು ಈಡೇರಿಸುವುದು ಸ್ಪಾ ಭಾಷೆಯಲ್ಲಿ ಹ್ಯಾಪಿ ಎಂಡಿಂಗ್ ಎಂದು ಕರೆಯಲಾಗುತ್ತದೆ. ಈ ಹ್ಯಾಪಿ ಎಂಡಿಂಗ್ ಈಗ ಟ್ರೆಂಡ್ ಸೆಟ್ ಆಗಿ ಹೋಗಿದೆ. ಶಿವಮೊಗ್ಗದ ಸ್ಪಾ ಗಳಲ್ಲದೆ ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಸಹ ದಂಧೆಯು ವ್ಯವಸ್ಥಿತವಾಗಿ ನಡೆಯುತ್ತಿದೆ. ಕಾಲೇಜಿನ ಕೆಲವು ಬಡ ಯುವತಿಯರನ್ನು ಈ ರೀತಿಯ ದಂಧೆಗೆ ಬಳಸಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಯಾವ ಸ್ಪಾ ಗಳಲ್ಲಿ ಮಾಂಸದ ದಂಧೆ ನಡೆಯುತ್ತಿದೆ ಎಂಬುದು ಬಲ್ಲವರಿಗೆ ಗೊತ್ತು. ಇಲ್ಲಿ ವ್ಯವಹಾರ ಕುದರಿಸಿಕೊಂಡು ತಿಂಗಳ ಮಾಮೂಲಿ ಪಡೆಯುವ ಒಂದು ವರ್ಗವೇ ಇದೆ. ನಗರದ ಎಲ್ಲಾ ಸ್ಪಾ ಗಳಲ್ಲಿ ದಂಧೆ ನಡೆಯುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವರು ಗೌರವಯುತವಾಗಿ ವ್ಯವಹಾರ ನಡೆಸುತ್ತಿದ್ದಾರೆ. ಇವರ ಕೆಲಸಕ್ಕೂ ಮಸಿ ಬಳಿಯುವ ಕೆಲಸ ನಡೆಯುತ್ತಿದೆ.