Bhadra Reservoir Water Level : ಜುಲೈ 07, ಭದ್ರಾ ಜಲಾಶಯದ ಒಳ ಹರಿವು ಎಷ್ಟಿದೆ ಇವತ್ತು, ಹೆಚ್ಚಾಯ್ತ ಕಡಿಮೆಯಾಯ್ತ
Bhadra Reservoir Water Level : ಶಿವಮೊಗ್ಗ : ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿರುವುದರಿಂದ ಶಿವಮೊಗ್ಗ ಜಿಲ್ಲೆಯ ಜೀವನಾಡಿ ಭದ್ರಾ ಜಲಾಶಯದ ಒಳಹರಿವು ಸ್ವಲ್ಪ ಮಟ್ಟಿಗೆ ಹೆಚ್ಚಳವಾಗಿದೆ. ಇದು ರೈತರು ಮತ್ತು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.
ಇಂದು (ಜುಲೈ 7) ಭದ್ರಾ ಜಲಾಶಯದ ಒಳಹರಿವು 20,626 ಕ್ಯೂಸೆಕ್‌ಗೆ ದಾಖಲಾಗಿದ್ದು, ಇದು ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ಉತ್ತಮ ಏರಿಕೆಯಾಗಿದೆ. ಜಲಾಶಯಕ್ಕೆ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ, ಪ್ರಸ್ತುತ 5,198 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.
ಪ್ರಸ್ತುತ ಭದ್ರಾ ಜಲಾಶಯದ ನೀರಿನ ಮಟ್ಟ 170.9 ಅಡಿಗೆ ತಲುಪಿದೆ. ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಮಟ್ಟ 186 ಅಡಿಗಳಾಗಿದ್ದು, ಇನ್ನೂ ಸುಮಾರು 15 ಅಡಿಗಳಷ್ಟು ನೀರು ಸಂಗ್ರಹಣೆಗೆ ಅವಕಾಶವಿದೆ.

