hosanagara news today : ಮಹಿಳೆ ಮೇಲೆ ಕುಸಿದು ಬಿದ್ದ ಕೊಟ್ಟಿಗೆ : ಸ್ಥಿತಿ ಗಂಭೀರ
ಶಿವಮೊಗ್ಗ: ಮಳೆಯ ಅಬ್ಬರಕ್ಕೆ ಕೊಟ್ಟಿಗೆ ಕುಸಿದು ಬಿದ್ದು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೊಸನಗರ ತಾಲೂಕಿನ ನಂಜವಳ್ಳಿ ಗ್ರಾಮದಲ್ಲಿ ನಡೆದಿದೆ.
ನಂಜವಳ್ಳಿ ಗ್ರಾಮದ ಇಂದಿರಾ ಎಂಬ ಮಹಿಳೆ ಗುರುವಾರ ತಮ್ಮ ಮನೆಯ ಹಿಂಭಾಗದಲ್ಲಿರುವ ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ವಿಪರೀತ ಮಳೆಯಿಂದಾಗಿ ಕೊಟ್ಟಿಗೆಯ ಗೋಡೆ ಏಕಾಏಕಿ ಕುಸಿದು ಇಂದಿರಾ ಅವರ ಮೇಲೆ ಬಿದ್ದಿದೆ.
ಕೂಡಲೇ ಗಾಯಗೊಂಡ ಮಹಿಳೆಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ಗೋಡೆ ಕುಸಿದ ಪರಿಣಾಮವಾಗಿ ಇಂದಿರಾ ಅವರ ಎದೆಯ ಪಕ್ಕೆಲುಬು ಮುರಿದಿದ್ದು, ಶ್ವಾಸಕೋಶಕ್ಕೆ ತೊಂದರೆಯಾಗಿ ಉಸಿರಾಟದ ಸಮಸ್ಯೆ ಎದುರಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಮೆಗ್ಗಾನ್ ಆಸ್ಪತ್ರೆಯ ವೈದ್ಯರು ರಾತ್ರಿಯೇ ಶಸ್ತ್ರಚಿಕಿತ್ಸೆ ನಡೆಸಿರುವುದಾಗಿ ತಿಳಿದುಬಂದಿದೆ.
