tour to joga 450 ರೂಪಾಯಿಗೆ ಹೊಸಗುಂದ, ಜೋಗ ಬಂಗಾರಮಕ್ಕಿ ಪ್ರವಾಸ | ನೀವೂ ಸಹ ಹೋಗಬಹುದು  

prathapa thirthahalli
Prathapa thirthahalli - content producer

tour to joga 450 ರೂಪಾಯಿಗೆ ಹೊಸಗುಂದ, ಜೋಗ ಬಂಗಾರಮಕ್ಕಿ ಪ್ರವಾಸ | ನೀವೂ ಸಹ ಹೋಗಬಹುದು  

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ, ಇದೀಗ ಜೂನ್​ 06 ರಂದು  ಒಂದು ದಿನದ  ಮಳೆಗಾಲದ ವಿಶೇಷ ಪ್ರವಾಸವನ್ನು ಆಯೋಜಿಸಿದೆ.

ಭಾನುವಾರ ಈ ವಿಶೇಷ ಪ್ರವಾಸ ಶಿವಮೊಗ್ಗದಿಂದ ಆರಂಭವಾಗಲಿದ್ದು, ಪ್ರವಾಸಿಗರನ್ನು ಜೋಗ ಜಲಪಾತ, ಬಂಗಾರಮಕ್ಕಿ, ಶ್ರೀ ವೀರಾಂಜನೇಯ ದೇವಸ್ಥಾನ ಮತ್ತು ಹೊಸಗುಂದದಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಕರೆದೊಯ್ಯಲಿದೆ.ಪ್ರವಾಸವು ಶಿವಮೊಗ್ಗದಿಂದ ಬೆಳಿಗ್ಗೆ 7:30 ಕ್ಕೆ ಹೊರಟು, ಅಂದೇ ರಾತ್ರಿ 8 ಗಂಟೆಯೊಳಗೆ ಶಿವಮೊಗ್ಗಕ್ಕೆ ತಲುಪುವಂತೆ ಯೋಜಿಸಲಾಗಿದೆ. ಈ ಪ್ರವಾಸದ ಶುಲ್ಕ ಒಬ್ಬರಿಗೆ ಕೇವಲ 450 ರೂಪಾಯಿಗಳನ್ನು ನಿಗದಿಪಡಿಸಲಾಗಿದ್ದು ಇದರಲ್ಲಿ ಬಸ್ ಪ್ರಯಾಣ ವೆಚ್ಚ ಮತ್ತು ಬೆಳಗಿನ ಉಪಹಾರ ಸೇರಿರುತ್ತದೆ.

tour to joga ಪ್ರವಾಸದಲ್ಲಿ ಕೇವಲ 45 ಜನರಿಗೆ ಮಾತ್ರ ಅವಕಾಶವಿದ್ದು, ಮೊದಲು ಹೆಸರು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ಕಾರ್ಯದರ್ಶಿ ಎನ್. ಗೋಪಿನಾಥ್ ತಿಳಿಸಿದ್ದಾರೆ. ಆಸಕ್ತರು ತಮ್ಮ ಹೆಸರನ್ನು ರವೀಂದ್ರ (ದೂರವಾಣಿ: 9916929220) ಅವರ ಬಳಿ ನೋಂದಾಯಿಸಿಕೊಳ್ಳಲು ಮನವಿ ಮಾಡಲಾಗಿದೆ.

TAGGED:
Share This Article