tree fell at agumbe ghat / ಆಗುಂಬೆ ಘಾಟಿ ಎಂಟ್ರಿಯಲ್ಲೆ ರಸ್ತೆಗೆ ಅಡ್ಡ ಬಿದ್ದ ಮರ! 4 ಆಂಬುಲೆನ್ಸ್​ ಸೇರಿ, ಹಲವು ವಾಹನಗಳು ಜಾಮ್

Malenadu Today

tree fell at agumbe ghat / ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಮತ್ತು ಬಿರುಗಾಳಿಗೆ ಬೃಹತ್ ಮರಗಳು ಧರೆಗುರುಳುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ, ಆಗುಂಬೆ ಘಾಟಿ ಫಾರೆಸ್ಟ್ ಚೆಕ್ ಪೋಸ್ಟ್ ಬಳಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.

tree fell at agumbe ghat
tree fell at agumbe ghat

ಆಗುಂಬೆ ವಿವ್ ಪಾಯಿಂಟ್‌ಗೆ ಹೋಗುವ ದಾರಿಯಲ್ಲಿರುವ ಕೆರೆಯ ಎದುರಿಗಿನ ಮರ ಇಂದು ಸಂಜೆ ನಾಲ್ಕು ಗಂಟೆ ಸುಮಾರಿಗೆ  ಸಂಪೂರ್ಣವಾಗಿ ರಸ್ತೆಯ ಮೇಲೆ ಬಿದ್ದಿದೆ. ಈ ಮರವು ಬೃಹತ್ ಗಾತ್ರದ್ದಾಗಿರುವುದರಿಂದ ಅದನ್ನು ತೆರವುಗೊಳಿಸುವುದು ಸುಲಭದ ಕೆಲಸವಾಗಿರಲಿಲ್ಲ. ಹೀಗಾಗಿ ವಾಹನ ಸವಾರರು ನೆರವಿಗೆಗಾಗಿ ಕಾಯುತ್ತಿದ್ದರು. ಇತ್ತೀಚಿನ ಮಾಹಿತಿ ಪ್ರಕಾರ, ಬಿದ್ದ ಮರವನ್ನು ತೆರವುಗೊಳಿಸಲಾಗಿದೆ ಎನ್ನಲಾಗುತ್ತಿದೆ. 

tree fell at agumbe ghat
tree fell at agumbe ghat

ನಾಲ್ಕು ಆಂಬುಲೆನ್ಸ್‌ಗಳು ಸೇರಿ ಹಲವು ವಾಹನಗಳು ಸಿಲುಕಿ ಪರದಾಟ: tree fell at agumbe ghat

ಇನ್ನು ಮರ ಬಿದ್ದ ಪರಿಣಾಮ, ಆಗುಂಬೆ ಮಾರ್ಗವಾಗಿ ಬಂದ ನಾಲ್ಕು ಆಂಬುಲೆನ್ಸ್‌ಗಳು ಶಿವಮೊಗ್ಗಕ್ಕೆ ಬರಲಾಗದೆ ಮರದ ಬುಡದಲ್ಲಿಯೇ ನಿಲ್ಲುವಂತಾಗಿತ್ತು.. ಆಂಬುಲೆನ್ಸ್‌ಗಳು ಮಾತ್ರವಲ್ಲದೆ, ಘಾಟಿ ಹತ್ತಿ ಮೇಲೆ ಬಂದ ವಾಹನಗಳು ಮತ್ತು ಘಾಟಿಯಿಂದ ಇಳಿಯಲು ಹೊರಟಿದ್ದ ವಾಹನಗಳು ಚೆಕ್ ಪೋಸ್ಟ್ ಬಳಿಯೇ ಸಿಲುಕಿದ್ದವು.

A huge tree has fallen across the road near the Agumbe Ghati Forest Check Post, obstructing traffic.

ಈ ಭಾಗದಲ್ಲಿ ಹೆವಿ ವಾಹನಗಳ ಸಂಚಾರಕ್ಕೆ ನಿರ್ಬಂಧವಿರುವುದರಿಂದ ಸಣ್ಣ ವಾಹನಗಳು ಮಾತ್ರ  ಮಾರ್ಗದಲ್ಲಿ ಸಂಚರಿಸುತ್ತಿದ್ದವು.ಇಂದು ಬೆಳಗ್ಗೆ ಹುಲಿಕಲ್ ಘಾಟಿಯಲ್ಲಿಯೂ ಸಹ ಲಾರಿಯೊಂದು ಕೆಟ್ಟು ನಿಂತಿದ್ದರಿಂದ ವಾಹನ ಸಂಚಾರಕ್ಕೆ ದೊಡ್ಡ ಮಟ್ಟದ ಅಡಚಣೆಯಾಗಿತ್ತು.  

 ಮಳೆಗೆ ಸಂಬಂಧಿಸಿದಂತೆ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುಲಿಕಲ್ ಘಾಟಿಯ ಬಗ್ಗೆ ಅರಿಯಲು ಇಲ್ಲಿ ಕ್ಲಿಕ್​ ಮಾಡಿ

Share This Article