shivamogga traffic police : ಕ್ಯಾಮರಾ ಕಣ್ಣಲ್ಲೇ ಕಾಣುತ್ತಾರೆ ಪೊಲೀಸ್ | ವೈರಲ್ ಆಗ್ತಿದೆ ಎಸ್ಪಿ ಹಂಚಿಕೊಂಡ ವಿಡಿಯೋ
shivamogga traffic police : ಶಿವಮೊಗ್ಗ: ಇತ್ತೀಚೆಗೆ ಕಾರವಾರದಲ್ಲಿ ಶಿರೂರು ಹೆದ್ದಾರಿ ಸಮೀಪದ ಗಂಗಾವಳಿ ಸೇತುವೆ ಮೇಲೆ ಮಗುವಿನೊಂದಿಗೆ ನಿಂತಿದ್ದ ಪ್ರವಾಸಿಗ ದಂಪತಿಗಳನ್ನು ಸಿಸಿಟಿವಿ ಕ್ಯಾಮರಾದಲ್ಲಿ ಗಮನಿಸಿದ್ದ ಅಲ್ಲಿನ ಪೊಲೀಸರು, ಅವರಿಗೆ ಎಚ್ಚರಿಕೆ ನೀಡಿದ್ದರು. ಇದರ ವಿಡಿಯೋ ಉತ್ತರ ಕನ್ನಡದ ಎಸ್ಪಿಯವರು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ನಲ್ಲಿ ಹಂಚಿಕೊಂಡು, ಅಪಾಯಕಾರಿ ಸ್ಥಳಗಳಲ್ಲಿ ಎಚ್ಚರವಹಿಸುವಂತೆ ಮನವಿ ಮಾಡಿದ್ದರು. ಇದೀಗ ಇದೇ ರೀತಿ ಶಿವಮೊಗ್ಗ ಪೊಲೀಸರು ಟ್ರಾಫಿಕ್ ರೂಲ್ಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಪೂರಕವೆಂಬಂತೆ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಎಸ್ಐ ತಿರುಮಲೇಶ್ ರವರು ಟ್ರಾಫಿಕ್ ಕಂಟ್ರೋಲ್ ರೂಂನಲ್ಲಿ ಕುಳಿತುಕೊಂಡು ಮಹಾವೀರ ಸರ್ಕಲ್ನಲ್ಲಿ ದಂಪತಿಯೊಬ್ಬರು ಹೆಲ್ಮೆಟ್ ಇಲ್ಲದೆ ಬೈಕ್ನಲ್ಲಿ ಬರುತ್ತಿರುವುದನ್ನು ಗಮನಿಸಿ ಅವರಿಗೆ ಹೆಲ್ಮೆಟ್ ಧರಿಸಿಕೊಂಡು ಬೈಕ್ ಚಲಾಯಿಸುವಂತೆ ಮನವಿ ಮಾಡಿದರು, ಅಲ್ಲದೆ ಹೆಲ್ಮೆಟ್ ಧರಿಸುವುದನ್ನು ಅಗತ್ಯ ಮತ್ತು ಅನಿವಾರ್ಯತೆಯನ್ನು ವಿವರಿಸಿದರು. ಕೊನೆಗೆ ಹೆಲ್ಮೆಟ್ ಧರಿಸದ ಹಿನ್ನೆಲೆಯಲ್ಲಿ, ಅವರಿಗೆ ಐನೂರು ರೂಪಾಯಿ ದಂಡ ವಿಧಿಸುವುದಾಗಿ ತಿಳಿಸಿದ ತಿರುಮಲೇಶ್ ದಂಡದ ರಶೀದಿ ಬೈಕ್ ನಂಬರನ್ನು ಆಧರಿಸಿ ಮನೆಗೆ ಕಳುಹಿಸುವುದಾಗಿ ತಿಳಿಸಿದರು.
shivamogga traffic police : ಈ ದೃಶ್ಯವನ್ನು ಕನ್ನಡ ಮೀಡಿಯಮ್ ಚಾನಲ್ ನ ಪ್ರತಿನಿಧಿಗಳು ಶೂಟ್ ಮಾಡಿದ್ದು, ಪೊಲೀಸರ ಕಾರ್ಯ ವೈಖರಿ ಬಗ್ಗೆ ತಮ್ಮ ವಾಹಿನಿಯಲ್ಲಿ ವರದಿ ಮಾಡಿದ್ದರು. ಸದ್ಯ ಈ ವರದಿ ಶಿವಮೊಗ್ಗದ ಎಲ್ಲೆಡೆ ವೈರಲ್ ಆಗುತ್ತಿದೆ. ಸ್ವತಃ ಎಸ್ಪಿ ಮಿಥುನ್ ಕುಮಾರ್ ರವರು ವಾಹಿನಿಯ ಕ್ಲಿಪ್ಪಿಂಗ್ ಹಂಚಿಕೊಂಡಿದ್ದಾರೆ. ಇದು ಸಹ ವೈರಲ್ ಆಗುತ್ತಿದ್ದು, ಪೊಲೀಸರ ಕ್ರಮ ಶಿವಮೊಗ್ಗದ ಮಟ್ಟಿಗೆ ವಿಶೇಷವಾದ ಮಾತುಗಳಿಗೆ ಸಾಕ್ಷಿಯಾಗುತ್ತಿದೆ.


ಟ್ರಾಫಿಕ್ ಸಿಗ್ನಲ್ ನಲ್ಲಿ ಅಳವಡಿಸಿರುವ ಕ್ಯಾಮರಾ ಮುಖಾಂತರ, ದ್ವಿಚಕ್ರವಾಹನ ಸವಾರರೊಬ್ಬರು ಹೆಲ್ಮೆಟ್ ಧರಿಸದೆ ದ್ವಿಚಕ್ರವಾಹನವನ್ನು ಚಲಾಯಿಸುತ್ತಿರುವದನ್ನು ಪತ್ತೆ ಹಚ್ಚಿ, ಅವರ ಕುಟುಂಬದ ಹಾಗೂ ಚಿಕ್ಕ ಮಕ್ಕಳ ಸುರಕ್ಷತೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳುವಳಿಕೆ ನೀಡಲಾಯಿತು @DgpKarnataka pic.twitter.com/r2ede33Tw0
— SP Shivamogga (@Shivamogga_SP) June 16, 2025