rowdy sheets close shivamogga / 353 ರೌಡಿಶೀಟ್​ ಪಟ್ಟಿ ಕ್ಲೋಸ್​!/ ಶಿವಮೊಗ್ಗ ಪೊಲೀಸರ ಅಚ್ಚರಿಯ ನಿರ್ಧಾರ

Malenadu Today

rowdy sheets close shivamogga Shivamogga police news / ಶಿವಮೊಗ್ಗ:  ಶಿವಮೊಗ್ಗ ಪೊಲೀಸರು ಮಹತ್ವದ ಹೆಜ್ಜೆ ಇಟ್ಟಿದ್ದು ವಿವಿಧ ಕಾರಣಗಳನ್ನು ಪರಿಗಣಿಸಿ ಒಟ್ಟು 353 ರೌಡಿ ಶೀಟ್‌ಗಳನ್ನು ತಾತ್ಕಾಲಿಕವಾಗಿ  ಕ್ಲೋಸ್​ ಮಾಡಿದ್ದಾರೆ. ನಿಧನರಾದವರು ಮತ್ತು ಸನ್ನಡತೆ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಗುರುವಾರ (ಜೂನ್ 12, 2025) ಡಿಎಆರ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಅವರ ಸಮ್ಮುಖದಲ್ಲಿ ರೌಡಿ ಶೀಟರ್‌ಗಳ ಪರೇಡ್ ನಡೆಸಲಾಯಿತು. ಈ ವೇಳೆ ಮಾತನಾಡಿದ ಎಸ್‌ಪಿ ಮಿಥುನ್ ಕುಮಾರ್, ಇದು ನಿಮಗೆ ಶಾಂತಿಯುತ ಜೀವನ ನಡೆಸಲು ಸಿಕ್ಕಿರುವ ಅವಕಾಶ. ರೌಡಿಶೀಟರ್ ಪಟ್ಟಿಯಿಂದ ಹೆಸರು ತೆಗೆದುಹಾಕಿದ ಹೊರತಾಗಿಯು ಸಮಾಜದಲ್ಲಿ ನಿಮ್ಮ ನಡವಳಿಕೆಯನ್ನು ಪೊಲೀಸರು ಗಮನಿಸುತ್ತಾರೆ. ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ನಿಮ್ಮ ಭಾಗವಹಿಸುವಿಕೆಯ ಬಗ್ಗೆ ಮಾಹಿತಿ ಸಿಕ್ಕರೆ, ರೌಡಿ ಶೀಟ್ ಅನ್ನು ಮತ್ತೆ ತೆರೆಯಲಾಗುತ್ತದೆ ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು.

ರೌಡಿ ಶೀಟ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚುವ ನಿರ್ಧಾರವು ಅವರ ಸನ್ನಡತೆಯನ್ನು ಪರಿಗಣಿಸಿ ತೆಗೆದುಕೊಳ್ಳಲಾಗಿದೆ ಎಂದು ಎಸ್‌ಪಿ ಕುಮಾರ್ ತಿಳಿಸಿದರು. ಅಲ್ಲದೆ, ತಮ್ಮ ಪ್ರದೇಶದಲ್ಲಿ ಯಾವುದೇ ಅಕ್ರಮ ಚಟುವಟಿಕೆ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಎಸ್‌ಪಿ ಮಿಥುನ್ ಕುಮಾರ್ಅ ವರು ಮನವಿ ಮಾಡಿದರು.ಎಸ್‌ಪಿ ಮಿಥುನ್ ಕುಮಾರ್

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಯಾವ ವಿಭಾಗದಲ್ಲಿ ಎಷ್ಟು ರೌಡಿ ಶೀಟ್​ ಕ್ಲೋಸ್​ ಆಗಿದೆ? rowdy sheets close shivamogga

  • ಶಿವಮೊಗ್ಗ ಉಪವಿಭಾಗ (ಎ): 17 ಶಿವಮೊಗ್ಗ ಉಪವಿಭಾಗ (ಬಿ): 60 ಭದ್ರಾವತಿ ಉಪವಿಭಾಗ: 72 ಸಾಗರ: 55 ಶಿಕಾರಿಪುರ: 124 ತೀರ್ಥಹಳ್ಳಿ ಉಪವಿಭಾಗ: 25

ರೌಡಿ ಶೀಟ್ ಬಂದ್‌ಗೆ ಕಾರಣಗಳು: rowdy sheets close shivamogga

  • ನಿಧನ: ರೌಡಿ ಶೀಟ್ ಹೊಂದಿದ್ದ ಕೆಲವು ವ್ಯಕ್ತಿಗಳು ನಿಧನರಾಗಿದ್ದಾರೆ.
  • ಸನ್ನಡತೆ: ಕಳೆದ 10 ವರ್ಷಗಳಲ್ಲಿ ಯಾವುದೇ ಹೊಸ ಪ್ರಕರಣಗಳು ದಾಖಲಾಗದವರು.
  • ವಯಸ್ಸು: ವಯಸ್ಸಾದವರನ್ನೂ ಸಹ ಈ ಪಟ್ಟಿಯಲ್ಲಿ ಪರಿಗಣಿಸಲಾಗಿದೆ.

Share This Article