kanthara chapter 1 :  ತೀರ್ಥಹಳ್ಳಿಗೆ ಎಂಟ್ರಿಕೊಟ್ಟ ಕಾಂತಾರ ಚಾಪ್ಟರ್​ 1 ಚಿತ್ರತಂಡ | ಕಾರಣವೇನು

prathapa thirthahalli
Prathapa thirthahalli - content producer

kanthara chapter 1 :  ತೀರ್ಥಹಳ್ಳಿಗೆ ಎಂಟ್ರಿಕೊಟ್ಟ ಕಾಂತಾರ ಚಾಪ್ಟರ್​ 1 ಚಿತ್ರತಂಡ | ಕಾರಣವೇನು

kanthara chapter 1 2022 ರಲ್ಲಿ ರಿಲೀಸ್​ ಆಗಿದ್ದ ಕಾಂತಾರ ಚಿತ್ರ ವಿಶ್ವದೆಲ್ಲಡೆ ಉತ್ತಮ ಪ್ರದರ್ಶನ ಕಂಡು ಜಗತ್ತಿಗೆ ಕನ್ನಡ ಚಿತ್ರಗಳ ತಾಕತ್ತನ್ನು ಪರಿಚಯಿಸಿತ್ತು.16 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾದ ಈ ಚಿತ್ರ 400 ಕೋಟಿಗೂ ಅಧಿಕ ಕಲೆಕ್ಷನ್​ನ್ನು ಮಾಡಿತ್ತು. ಈ ಚಿತ್ರದ ಯಶಸ್ಸಿನ ನಂತರ ಚಿತ್ರದ ನಾಯಕ ಹಾಗೂ ನಿರ್ದೇಶಕ ರಿಶಬ್​ ಶೆಟ್ಟಿ ಕಾಂತಾರ ಪ್ರೀಕ್ವೆಲ್​ನ್ನು ಮಾಡಲು ಮುಂದಾದರು. ಇದೀಗ ದೊಡ್ಡ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿರುವ ಕಾಂತಾರ ಚಿತ್ರದ ಶೂಟಿಂಗ್​ ಬಿರುಸಿಲಲ್ಲಿ ಸಾಗುತ್ತಿದ್ದು, ಚಿತ್ರತಂಡ ಈಗ ತೀರ್ಥಹಳ್ಳಿಯಲ್ಲಿ ಶೂಟಿಂಗ್​ಗಾಗಿ ಬೀಡುಬಿಟ್ಟಿದೆ.

ಹೌದು ಕಾಂತಾರ ಚಾಪ್ಪರ್​ 1 ಚಿತ್ರದ ಶೂಟಿಂಗ್​ಗಾಗಿ ಮಾಣಿ ಹಿನ್ನೀರಿನ ಪರಿಸರದಲ್ಲಿ ಬೃಹತ್ ಬಂದರಿನ ಸೆಟ್ ಹಾಕಲಾಗುತ್ತಿದೆ. ದೋಣಿ ಹಡಗಿನ ಬಂದರನ್ನಾಗಿ ಮಾರ್ಪಡಿಸಲು ತಜ್ಞರು ಸೆಟ್ ಹಾಕುತ್ತಿದ್ದಾರೆ. ಕಾಂತಾರ ಒನ್ ಸಿನಿಮಾದ ಅಂತಿಮ ಹಂತದ ಶೂಟಿಂಗ್​​ಗೆ ಮಾಣಿ ಹಿನ್ನೀರಿನ ಪರಿಸರ ಸಾಕ್ಷಿಯಾಗಲಿದೆ.

kanthara chapter 1 ಮಾಣಿ ಹಿನ್ನೀರಿನ ಹುಳ್ಕೊಪ್ಪಕುಗ್ರಾಮದಲ್ಲಿ ಬಂದರಿನ ಸೆಟ್ ಸಿದ್ಧವಾಗುತ್ತಿದೆ. ಕಾಂತಾರ ಚಲನಚಿತ್ರದ ನಾಯಕ ನಟ ರಿಷಬ್ ಶೆಟ್ಟಿಯವರು ನಿನ್ನೆಯಿಂದ (ಜೂನ್​ 10)  ಹದಿನೈದು ದಿನಗಳ ಕಾಲ ತೀರ್ಥಹಳ್ಳಿ ತಾಲೂಕಿನ ಯಡೂರಿನ ಆಮಂತ್ರಣ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇವರ ಜೊತೆ ಕ್ಯಾಮೆರಾಮನ್, ಸ್ಕ್ರಿಪ್ ರೈಟರ್, ಸಂಕಲನಕಾರರ ತಂಡವೇ ಬೀಡುಬಿಟ್ಟಿದೆ.

ಕಾಂತಾರ ಸಿನಿಮಾದ ಅಂತಿಮ ಹಂತದ ಚಿತ್ರೀಕರಣ ಇದಾಗಿದ್ದು , ಐತಿಹಾಸಿಕ ಸನ್ನಿವೇಶದ ಚಿತ್ರೀಕರಣಕ್ಕಾಗಿ ಸೆಟ್ ಹಾಕಲಾಗುತ್ತಿದೆ. ಮುಂಬೈನಿಂದ ಸುಮಾರು 50ಕ್ಕೂ ಹೆಚ್ಚು ಕುದುರೆಗಳನ್ನು ತರಿಸಿಕೊಳ್ಳಲಾಗಿದೆ. ಸೆಟ್ ಹಾಕಿದ ಜಾಗದಲ್ಲಿ ಒಂದು ವಿಡಿಯೊ ತುಣುಕು ಕೂಡ ಸೋರಿಕೆಯಾಗದ ರೀತಿಯಲ್ಲಿ ಎಚ್ಚರ ವಹಿಸಲಾಗಿದೆ. ಅಂದುಕೊಂಡಂತೆ ಎಲ್ಲಾ ನಡೆದರೆ ಚಿತ್ರ ತಂಡವೇ ಘೋಷಿಸಿದಂತೆ ಅಕ್ಟೋಬರ್​ 02 20225 ರಂದು ದೇಶದಾದ್ಯಂತ ಕಾಂತಾರ ಚಾಪ್ಟರ್​ 1 ರ ದರ್ಶನವಾಗಲಿದೆ.

Share This Article