shivamogga suddi ಬೈಕ್​ ಏರಲು ಹೊರಟಾಗ ಹಾರ್ಟ್ ಅಟ್ಯಾಕ್ ಆಯ್ತು! / ಬೀದಿಯಲ್ಲಿದ್ದ ಮಹಿಳೆ ಮಗು ರಕ್ಷಣೆ / ವಿವಾಹಿತೆ ಸಾವು! 4 ಸುದ್ದಿ!

Malenadu Today

shivamogga suddi  ಹೊಸನಗರ, 29  ಮೇ 2025: ತಾಲ್ಲೂಕಿನ ಕಾರಣಗಿರಿ ಪ್ರಗತಿ ಗ್ರಾಮೀಣ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಕೆ.ಎನ್. ರವಿಕುಮಾರ್ (45) ಹೃದಯಾಘಾತದಿಂದ ಮೃತರಾಗಿದ್ದಾರೆ. ಬುಧವಾರ ಬೆಳಿಗ್ಗೆ ಹೊಸನಗರದ ಒಂದು ಹೋಟೆಲ್ನಲ್ಲಿ ತಿಂಡಿ ಸೇವಿಸಿದ ಬಳಿಕ ಬೈಕ್ ಹತ್ತುತ್ತಿದ್ದ ಅವರಿಗೆ ಹೃದಯಾಘಾತ ಸಂಭವಿಸಿತು. ಸ್ಥಳೀಯರು ಅವರನ್ನು ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ತರಲು ಪ್ರಯತ್ನಿಸಿದರೂ ಚಿಕಿತ್ಸೆ ನಡೆಸಲಾಗಲಿಲ್ಲ. ಚಿತ್ರದುರ್ಗದ ಮೂಲದ ರವಿಕುಮಾರ್ ಅವಿವಾಹಿತರಾಗಿದ್ದು, ಕಳೆದ ವರ್ಷದಿಂದ ಕಾರಣಗಿರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. 

shivamogga suddi  ಭದ್ರಾವತಿ: ವಿವಾಹಿತೆ ಅನುಮಾನಾಸ್ಪದ ಸಾವು – ಅತ್ತೆ-ಮಾವನ ವಿರುದ್ಧ ದೂರು

ಭದ್ರಾವತಿ, 29 ಮೇ 2025: ಇಲ್ಲಿನ ನಿವಾಸಿ ಶಾಜಿಯಾ ಭಾನು (24) ಎಂಬಾಕೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಇದೀಗ ಅವರ ಪತಿಯ ಕುಟುಂಬದ ವಿರುದ್ಧ ದೂರು ದಾಖಲಾಗಿದೆ. ಮೃತಳ ಅತ್ತೆ ಹಾಗೂ ಮಾವ ಮಗಳ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆಯ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

ಆನಂದಪುರ: ಲಾರಿ ಅಪಘಾತ – ಕೆಲಸಗಾರರಿಗೆ ಗಾಯ 

ಆನಂದಪುರ, 28 ಮೇ 2025: ನೇತಾಜಿ ನಗರದ ಬಳಿ ಲಾರಿಯೊಂದು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಬಗ್ಗೆ ತಡವಾಗಿ ಮಾಹಿತಿ ಲಭ್ಯವಾಗಿದೆ. ಇಲ್ಲಿನ ಗದ್ದೆಯೊಂದಕ್ಕೆ ಲಾರಿ ಉರುಳಿಬಿದ್ದಿದ್ದು, ಈ ಸಂಬಂಧ ಸ್ಥಳಕ್ಕೆ ಬಂದ 112 ಪೊಲೀಸರು, ಘಟನೆಯಲ್ಲಿ ಗಾಯಗೊಂಡಿದ್ದ ಕೆಲಸಗಾರಿರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.  

ಭದ್ರಾವತಿ : ಅಪರಿಚಿತ ಮಹಿಳೆ-ಮಕ್ಕಳನ್ನು ರಕ್ಷಣೆ

ಭದ್ರಾವತಿ, 29 ಮೇ 2025: ಅಪರಿಚಿತ ಮಹಿಳೆಯೊಬ್ಬರು ಮಕ್ಕಳೊಂದಿಗೆ ಬೀದಿ ಬದಿಯ ಅಪರಿಚಿತರ ಮನೆಯ ಬಳಿ ಕುಳಿತಿದ್ದರು. ಅವರನ್ನು ಸ್ಥಳೀಯರು ಪೊಲೀಸರ ಮೂಲಕ ರಕ್ಷಣೆ ಮಾಡಿದ್ದಾರೆ. ಮಹಿಳೆ ಮಕ್ಕಳೊಂದಿಗೆ ಕುಳಿತಿದ್ದನ್ನ ಗಮನಿಸಿದ  ಸ್ಥಳೀಯರು 112ಗೆ ತಿಳಿಸಿದ್ದಾರೆ. ಪೊಲೀಸ್ ತಂಡವು ಸ್ಥಳಕ್ಕೆ ತೆರಳಿ ಮಹಿಳೆಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ರವಾನಿಸಿದೆ.

 

Share This Article