sagara : ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

prathapa thirthahalli
Prathapa thirthahalli - content producer

 sagara : ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಸಾಗರದ ಸರ್ಕಾರಿ ತಾಯಿ ಮಗು ಆಸ್ಪತ್ರೆಯಲ್ಲಿ ಸೊರಬ ತಾಲೂಕಿನ ಮಹಿಳೆಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಸೊರಬದ ನಿವಾಸಿ ಅತೀಕುಲ್ಲಾ ಅವರ ಪತ್ನಿ ಆಯಿಷಾ ಸಾಗರದ  ಸರ್ಕಾರಿ ತಾಯಿ ಮಗು ಆಸ್ಪತ್ರೆಗೆ ಹೆರಿಗೆಗೆ  ದಾಖಲಾಗಿದ್ದರು. ಗರ್ಭಿಣಿಗೆ ಹೆರಿಗೆ ತಜ್ಞೆ ಡಾ.ಪ್ರತಿಮಾ ಅವರು ಸೋಮವಾರ ಶಸ್ತ್ರಚಿಕಿತ್ಸೆ ನಡೆಸಿ ಮೂರು ಮಕ್ಕಳನ್ನು ಹೆರಿಗೆ ಮಾಡಿಸಿದ್ದು,ಒಂದು ಗಂಡು ಮತ್ತು ಎರಡು ಹೆಣ್ಣು ಮಗು ಜನಿಸಿದೆ. ಮೂವರು ಮಕ್ಕಳು ತಾಯಿಯೊಂದಿಗೆ ತುರ್ತು ನಿಗಾ ಘಟಕದಲ್ಲಿ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.

ಮಹಿಳೆಗೆ ಇದು ಎರಡನೇ ಹೆರಿಗೆಯಾಗಿದ್ದು ಮೊದಲ ಹೆರಿಗೆಯಲ್ಲಿ ಒಂದು ಮಗು ಇದೆ.

 

 

 

TAGGED:
Share This Article