ಕರ್ನಾಟಕ ಪೊಲೀಸ್ ಕಾಯ್ದೆಯಡಿಯಲ್ಲಿ ರಸ್ತೆಬದಿಯಲ್ಲಿ ಜೂಜಾಟ ಆಡಿದ ಹಿನ್ನೆಲೆಯಲ್ಲಿ ಶಿಕ್ಷೆಗೆ ಒಳಗಾದ ಕಾರಣವನ್ನು ನೀಡಿ ಸಹಕಾರಿ ಸಂಘದ ನಿರ್ದೇಶಕರ ಮಂಡಳಿಗೆ ಆಯ್ಕೆಯಾದ ವ್ಯಕ್ತಿಯನ್ನು ಅನರ್ಹಗೊಳಿಸಿದ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್ ಬುಧವಾರ ರದ್ದುಗೊಳಿಸಿದೆ. ಹನುಮಂತರಾಯಪ್ಪ ವೈಸಿ ಮತ್ತು ಇತರ ಕೆಲವರು ರಸ್ತೆಬದಿಯಲ್ಲಿ ಇಸ್ಪೀಟ್ ಆಡುತ್ತಿದ್ದಾಗ ಪೊಲೀಸರು ಅವರನ್ನು ಬಂಧಿಸಿದ್ದರು.
supreme court of india
ಆನಂತರ ಯಾವುದೇ ವಿಚಾರಣೆಯಿಲ್ಲದೆ 200 ರೂ. ದಂಡ ವಿಧಿಸಿದ್ದರು. ನಂತರ ಆ ವ್ಯಕ್ತಿ ನೌಕರರ ವಸತಿ ಸಹಕಾರಿ ಸಂಘದ ನಿರ್ದೇಶಕರ ಮಂಡಳಿಯ ಚುನಾವಣೆಯಲ್ಲಿ ಸ್ಪರ್ಧಿಸಿ ಅತ್ಯಧಿಕ ಮತಗಳೊಂದಿಗೆ ಗೆದ್ದರು. ಆದರೆ ಅವರ ಆಯ್ಕೆಯನ್ನು ಸೊಸೈಟಿ ರಿಜಿಸ್ಟ್ರಾರ್ ರದ್ದುಗೊಳಿಸಿದ್ದರು. ಇದನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಇದೀಗ ಸುಪ್ರೀಂಕೋರ್ಟ್ ರದ್ದುಪಡಿಸಿದೆ.