indian army : ಆಪರೇಷನ್​ ಸಿಂಧೂರ್​ ಬಗ್ಗೆ ಶಿವಮೊಗ್ಗದಲ್ಲಿ ಯಾರೆಲ್ಲಾ ಏನೆಲ್ಲಾ ಹೇಳಿದ್ರು

indian army : ತಡರಾತ್ರಿ ಭಾರತೀಯ ಸೇನೆ ಪಾಕಿಸ್ತಾನ ಉಗ್ರರ ನೆಲೆಗಳ ಮೇಲೆ ಆಪರೇಷನ್​ ಸಿಂಧೂರ್​ ಎಂಬ ಹೆಸರಲ್ಲಿ ದಾಳಿ ನಡೆಸಿದೆ. ಈ ದಾಳಿಯ ಪರಿಣಾಮ 80 ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ. ಈ ಆಪರೇಷನ್​ ಸಿಂಧೂರ್​ ಕುರಿತು ಶಿವಮೊಗ್ಗದಲ್ಲಿ ಸಂಸದ ಬಿವೈ ರಾಘವೇಂದ್ರ ಹಾಗೂ ಮಾಜಿ ಡಿಸಿಎಂ ಕೆ ಎಸ್​ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

indian army :  ಈ ಕುರಿತು ಮಾದ್ಯಮದಳೊಂದಿಗೆ ಮಾತನಾಡಿದ ಸಂಸದ ಬಿವೈ ರಾಘವೇಂದ್ರ ಪಹೆಲ್ಗಾಮ್‌ನಲ್ಲಿ ಉಗ್ರರು ದಾಳಿಗೆ 26 ಪ್ರವಾಸಿಗರು ಮೃತರಾಗಿದ್ದು. ಆ ಹಿನ್ನಲೆ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಹಾಗಾಗಿ ಮಧ್ಯರಾತ್ರಿ ಆಪರೇಷನ್‌ ಸಿಂಧೂರ್‌ ಹೆಸರಿನಲ್ಲಿ ಪಾಕಿಸ್ತಾನದಲ್ಲಿರುವ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ. ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ಇದ್ದು, ಭಾರತದ ಸೈನಿಕರು ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಲಿದ್ದಾರೆ. ನಿನ್ನೆಯ ದಾಳಿಯಲ್ಲಿ ಸುಮಾರು 50 ರಿಂದ 70 ಉಗ್ರರು ಹತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಹಾಗೆಯೇ ಭಾರತ ಸೇನೆ ಪಾಕಿಸ್ತಾನದ ಸೈನಿಕರ ಮೇಲೆ ದಾಳಿ ನಡೆಸಿಲ್ಲ. ಗುಪ್ತಚರ ಮಾಹಿತಿ ಆಧರಿಸಿ ಉಗ್ರರ ನೆಲೆಗಳನ್ನು ಮಾತ್ರ ಗುರಿಯಾಗಿಸಿಕೊಂಡು 9 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಯಾವುದೇ ಮಸೀದಿ, ನಾಗರಿಕರ ಮೇಲೆ ದಾಳಿಯಾಗಿಲ್ಲ. ಭಾರತದ ಸಂಸತ್ತಿನ ಮೇಲೆ ದಾಳಿ, ಏರ್‌ ಬೇಸ್‌ ಮೇಲೆ ದಾಳಿ ಸೇರಿದಂತೆ ಪದೇ ಪದೆ ದಾಳಿಗಳಾಗುತ್ತಿದೆ. ಶಾಂತಿ ಮಂತ್ರಿ ಪಠಿಸುತ್ತ ಕೂರುವ ಕಾಲ ಇದಲ್ಲ. ಹಾಗಾಗಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

indian army ಕೆ ಎಸ್​ ಈಶ್ವರಪ್ಪ ಹೇಳಿದ್ದೇನು

ಆಪರೇಷನ್​ ಸಿಂಧೂರ ಹೆಸರಿನಲ್ಲಿ ನಮ್ಮ ಭಾರತೀಯ ಸೇನೆ ಪಾಕಿಸ್ತಾನದ ಉಗ್ರ ನೆಲೆಯನ್ನು ದ್ವಂಸ ಮಾಡಿದ್ದು ಸಂತೋಷವಾಗಿದೆ. 26 ಹಿಂದೂ ಹೆಣ್ಣು ಮಕ್ಕಳ ಸಿಂಧೂರವನ್ನು ಉಗ್ರಗಾಮಿಗಳು ಅಳಿಸಿದ್ದರು. ಆದ್ದರಿಂದ ಅವರನ್ನು ಮಟ್ಟಹಾಕಲು ಈ ಕಾರ್ಯಾಚರಣೆಗೆ ಆಪರೇಷನ್​ ಸಿಂಧೂರ್​ ಎಂದು ಹೆಸರಿಟ್ಟಿದ್ದು ಬಹಳಾ ಸಂತೋಷವಾಗಿದೆ. ಈ ದಾಳಿಯನ್ನು ಇಡೀ ಪ್ರಪಂಚ ಬೆಂಬಲಿಸಿದೆ ಆದರೆ ಚೀನಾ ಇದಕ್ಕೆ ವಿಷಾದ ವ್ಯಕ್ತಪಡಿಸಿದೆ.  ನಮ್ಮ ಭಾರತೀಯ ಸೇನೆಗೆ ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ಬೆಂಬಲ ನೀಡಿದ್ದಾರೆ ಅವರಿಗೆ ಅಭಿನಂದನೆಗಳು. ಭಾರತೀಯ ಸೈನಿಕರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್​ ಅಭಿನಂಧನೆ ತಿಳಿಸಿದ್ದಾರೆ. ಆದರೆ ಕಾಂಗ್ರೆಸ್​ ಪಕ್ಷ ಶಾಂತಿ ಮಂತ್ರವನ್ನು ಜಪಿಸಬೇಕು ಎಂದು ಟ್ವೀಟ್​ ಮಾಡಿದೆ. ಈ ಸಂದರ್ಭದಲ್ಲಿ ಅಂತಹ ಮನಸ್ಥಿತಿಯನ್ನು ಕಾಂಗ್ರೆಸಿಗರು ಬಿಡಬೇಕು ಎಂದರು.  

 

Leave a Comment