sigandur bridge : ಸಿಂಗಂದೂರು ಸೇತುವ ನಿರ್ಮಾಣ ಕಾರ್ಯ ಬರದಿಂದ ಸಾಗುತ್ತಿದ್ದು, ಅಂದುಕೊಂಡಂತೆ ಆದಲ್ಲಿ ಮೇ ತಿಂಗಳಲ್ಲಿ ಸೇತುವೆ ಉದ್ಘಾಟನೆ ಆಗಬೇಕಿತ್ತು. ಆದರೆ ಸೇತುವೆಯ ಕಾಮಗಾರಿ ವಿಳಂಭವಾಗುತ್ತಿರುವ ಹಿನ್ನಲೆ ಸಕಾಲದಲ್ಲಿ ಉದ್ಘಾಟನೆ ಸಾಧ್ಯವಾಗಲಿಲ್ಲ. ಈ ಕುರಿತು ಸಂಸದ ಬಿವೈ ರಾಘವೇಂದ್ರ ಸೇತುವೆ ಉದ್ಘಾಟನೆ ಬಗ್ಗೆ ಮಾಹಿತಿ ನೀಡಿದ್ದಾರೆ
sigandur bridge : ಬಿವೈ ರಾಘವೇಂದ್ರ ಹೇಳಿದ್ದೇನು
ಸೇತುವೆ ಕಾಮಗಾರಿಯನ್ನು ವಹಿಸಿಕೊಂಡ ಕಂಟ್ರಾಕ್ಟರ್ ಆಗಸ್ಟ್ ತಿಂಗಳಲ್ಲಿ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ಕೊಡುತ್ತೇನೆಂದು ಹೇಳಿದ್ದಾರೆ. ಆದರೆ ಜೂನ್ ತಿಂಗಳ ಅಂತ್ಯದ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಸಾಧ್ಯವಾದರೆ ಜೂನ್ ತಿಂಗಳ ಕೊನೆಯಲ್ಲಿ ಸೇತುವೆ ಉದ್ಘಾಟನೆ ಆಗಲಿದ್ದು, ಸಿಗಂದೂರು ಸೇತುವೆ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಬರುವಂತೆ ಮನವಿ ಮಾಡಿದ್ದೇವೆ ಎಂದರು.
ಈ ಕೇಬಲ್ ಸೆಗ್ಮೆಂಟ್ ಸೇತುವೆ 2,140 ಮೀಟರ್ ಉದ್ದವಿದ್ದು, ಅದರ ಕ್ಯಾರೇಜ್‌ವೇ 11 ಮೀಟರ್ ಅಗಲವಿದೆ. ಅದರ ಎರಡೂ ಬದಿಗಳಲ್ಲಿ 1.5 ಮೀಟರ್ ಅಗಲದ ಪಾದಚಾರಿ ಮಾರ್ಗವಿದ್ದು, ಯೋಜನೆಯ ಒಟ್ಟು ವೆಚ್ಚ 456.67 ಕೋಟಿ ರೂಪಾಯಿ ಎನ್ನಲಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಇದಕ್ಕೆ ರಾಷ್ಟ್ರೀಯ ಹೆದ್ದಾರಿ 369E ಎಂದು ಹೆಸರಿಟ್ಟಿದೆ.