traditional day : ಸಾಂಪ್ರದಾಯಿಕ ಉಡುಗೆಯಲ್ಲಿ  (ಟ್ರೆಡಿಷನಲ್ ಡೇ ಯಲ್ಲಿ) ಮಿಂಚಿದ ಎನ್​ಇಎಸ್  ಕಾಲೇಜು ವಿದ್ಯಾರ್ಥಿಗಳು. 

prathapa thirthahalli
Prathapa thirthahalli - content producer

traditional day : ಶಿವಮೊಗ್ಗ : ನಗರದ ಎನ್​ಇಎಸ್ ಅಡ್ವಾನ್ಸ್​ ಸ್ಟಡೀಸ್​ ಕಾಲೇಜಿನಲ್ಲಿ  ಭಾನುವಾರ ಟ್ರೆಡಿಷನಲ್ ಡೇ ಕಾರ್ಯಕ್ರಮ ಜರುಗಿತು. ಕಾಲೇಜಿನ ವಿದ್ಯಾರ್ಥಿ, ವಿಧ್ಯಾರ್ಥಿನಿಯರು ದೇಸಿ ಉಡುಗೆ, ತೊಡುಗೆಗಳನ್ನು ತೊಟ್ಟು ಆಗಮಿಸಿದ್ದರು. 

ಮೊದಲು ಸರಸ್ವತಿ ಪೂಜೆ ನಡೆಸಿ, ಪ್ರಾರ್ಥನೆ ಸಲ್ಲಿಸಲಾಯಿತು. ಸರಸ್ವತಿ ಮಾತೆಯ ಪೋಟೋವನ್ನು ವಿವಿಧ ಬಗೆಯ ಪುಪ್ಫಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಿ, ಮುಂಬರುವ ಪರೀಕ್ಷೆಗಳಲ್ಲಿ ಉತ್ತಮ ಅಂಕ ಬರಲಿ ಎಂದು ಪುಸ್ತಕಗಳನ್ನು ಜೋಡಿಸಿಟ್ಟು ಭಕ್ತಿಯಿಂದ ದೇವಿಗೆ ಪ್ರಾರ್ಥಿಸಿಕೊಂಡರು. ನಂತರ ಕಾಲೇಜಿನಲ್ಲಿ ಡೊಳ್ಳಿನ  ಶಬ್ದಕ್ಕೆ  ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.

traditional day : ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು

ಕಾಲೇಜನ್ನು ತಳಿರು ತೋರಣಗಳಿಂದ  ಸಿಂಗರಿಸಲಾಗಿತ್ತು. ಪೂಜೆಯ ನಂತರ  ವಿದ್ಯಾರ್ಥಿಗಳು ಕಾರು ಹಾಗೂ ಬೈಕ್ ಗಳಲ್ಲಿ ರೋಡ್​ ಶೋ ನಡೆಸಿದರು.ಈ ವೇಳೆ ಯುವತಿಯರು ಸೀರೆಯಲ್ಲಿ  ಮಿಂಚಿದರೆ, ಯುವಕರು ಪಂಚೆ ಶರ್ಟ್ ನಲ್ಲಿ ಪೋಟೋಗೆ ಫೋಸ್ ಕೊಟ್ಟರು. ಡಿಜೆಗೆ  ಹೆಜ್ಜೆ ಹಾಕಿ ಪರಸ್ಪರ ಸೆಲ್ಫಿ ಕ್ಲಿಕ್ಕಿಸಿಕೊಂಡರು.

traditional day
traditional day ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ ಯುವತಿಯರು

ಒಂದೆಡೆ ಕಾಲೇಜಿನ  ಸಾಂಪ್ರದಾಯಿಕ ದಿನದ ಸಂಭ್ರಮದಲ್ಲಿ ಯುವಕ ಯುವತಿಯರು ಮುಳುಗಿದ್ದರೆ,ಮತ್ತೊಂದೆಡೆ ಅಂತಿಮ ವರ್ಷದ ವಿದ್ಯಾರ್ಥಿಗಳು ಪರೀಕ್ಷೆ ಮುಗಿದ ನಂತರ ಕಾಲೇಜು ದಿನಗಳು ಮುಗಿಯಿತೆಂಬ ಬೇಸರದಲ್ಲಿದ್ದರು. 

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎಸ್ ಶಿವಪ್ರಸಾದ್, ಉಪನ್ಯಾಸಕರಾದ ವಿನುತ ಶೆಣೈ, ಗುರುರಾಜ್, ಸುಜಾತ, ಅರುಣ್ ಕುಮಾರ್, ಈಶ್ವರ್, ಚಂದನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

Share This Article