suhas shetty murder case : ರಾಜಕೀಯ ನಾಯಕರು ನಮ್ಮ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ | ಸುಹಾಸ್ ಶೆಟ್ಟಿ ತಂದೆ ಮೋಹನ್ ಶೆಟ್ಟಿ

prathapa thirthahalli
Prathapa thirthahalli - content producer

suhas shetty murder case : ರಾಜಕೀಯ ನಾಯಕರು ಅವರ ಲಾಭಕ್ಕಾಗಿ ನಮ್ಮ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮೃತ ಸುಹಾಸ್ ಶೆಟ್ಟಿ ತಂದೆ ಮೋಹನ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

suhas shetty murder case :  ಇಂತಹ ಅನಾಹುತಗಳಾದಾಗ ಯಾರು ಬರುವುದಿಲ್ಲ

ಮಂಗಳೂರಿನ ಬಚ್ಪೆ ಮೂಲದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಯನ್ನು ಗುರುವಾರ ರಾತ್ರಿ ಕಿಡಿಗೇಡಿಗಳು ಕೊಚ್ಚಿ ಕೊಲೆ ಮಾಡಿದ್ದರು. ಈ ಹಿನ್ನಲೆ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂಬ ಕೂಗು ದಕ್ಷಿಣದ ಕನ್ನಡ ಜಿಲ್ಲೆಯಾಧ್ಯಂತ ಕೇಳಿ ಬಂದಿದೆ. ಈ ಹಿನ್ನಲೆ ಅನೇಕ ರಾಜಕೀಯ ವ್ಯಕ್ತಿಗಳು ಸಹ ಸುಹಾಸ್​ ಶೆಟ್ಟಿ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ತಿಳಿಸಿ ಬಂದಿದ್ದಾರೆ. ಈ ನಡುವೆ ಮಗನ ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ಸುಹಾಸ್ ಶೆಟ್ಟಿ ತಂದೆ ಮೋಹನ್ ಶೆಟ್ಟಿ ಈಗಿನ ಯುವಕರು ಹಿಂದೂ ಹಿಂದೂ ಎಂದು  ಹಿಂದುತ್ವದ ಹಿಂದೆ ಹೋಗುತ್ತಾರೆ. ನಾಳೆ ಇಂತಹ ಅನಾಹುತ ಆದಾಗ ಯಾರೂ ಇರುವುದಿಲ್ಲ.  ಕೆಲ ರಾಜಕೀಯ ಮುಖಂಡರುಗಳು ನಾಲೈದು ದಿನ ಬಂದು ಹೋಗುತ್ತಾರೆ. ಅದು ಮಾಡುತ್ತೇವೆ ಇದು ಮಾಡುತ್ತೇವೆ ಎನ್ನುತ್ತಾರೆ. ಎಲ್ಲ ಆದ ಮೇಲೆ ಅವರೂ ಇರುವುದಿಲ್ಲ. ಯಾರೂ ಇರುವುದಿಲ್ಲ’ ಎಂದು ಸುಹಾಸ್ ಶೆಟ್ಟಿ ಅವರ ತಂದೆ ಮೋಹನ ಶೆಟ್ಟಿ ಮಾಧ್ಯಮಗಳ ಮುಂದೆ ನೋವು ತೋಡಿಕೊಂಡರು.

ನಮ್ಮ ಕುಟುಂಬಕ್ಕೆ ನಮ್ಮ ಮಗ ಆಧಾರ ಸ್ತಂಭವಾಗಿದ್ದ. ಈ ಘಟನೆಯಿಂದ ಜೀವನ ಪೂರ್ತಿ ಕೊರಗುವವರು ನಾವು ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಎಂದರು.

 

Share This Article