idgah maidan : ಆಟದ ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶ ಮಾಡಿಕೊಡಬೇಡಿ | ಕೆ.ಇ ಕಾಂತೇಶ್

prathapa thirthahalli
Prathapa thirthahalli - content producer

idgah maidan : ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದ ಜಾಗದಲ್ಲಿ ಇರುವ ಮೈದಾನದಲ್ಲಿ ಮುಸ್ಲಿಮರು ಪ್ರತಿಭಟನೆ ಮಾಡಲು ಅವಕಾಶ ಕೊಡಬಾರದು ಎಂದು ಜಿಲ್ಲಾ ಪಂಚಾಯತ್​ ಮಾಜಿ ಸದಸ್ಯ ಕೆ.ಇ ಕಾಂತೇಶ್​ ಆಗ್ರಹಿಸಿದರು.

idgah maidan : ಅವಕಾಶ ಕಲ್ಪಿಸಿಕೊಟ್ಟರೆ ಉಗ್ರ ಹೋರಾಟ

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿವಮೊಗ್ಗ ಜಿಲ್ಲೆಯ ಹಿಂದೂಗಳ ಹೋರಾಟದಿಂದ ಜಿಲ್ಲಾಧಿಕಾರಿಗಳ ಮುಂಭಾಗದಲ್ಲಿರುವ ಆಟದ ಮೈದಾದಲ್ಲಿ ಹಾಕಲಾಗಿದ್ದ ಬೇಲಿಯನ್ನು ತೆರವುಗೊಳಿಸಲಾಗಿದೆ.ಆದರೆ ಈಗ ಅಲ್ಲಿ ಮತ್ತೊಂದು ಸಮಸ್ಯೆ ಉಂಟಾಗಿದೆ.

ಮುಸ್ಲಿಮ್​ ಸಂಘಟನೆಯೊಂದು ಡಿಸಿ ಕಚೇರಿ ಮುಂಭಾಗದಲ್ಲಿರುವ ಮೈದಾನದಲ್ಲಿ ಪ್ರತಿಭಟನೆ ಮಾಡಲು ಜಿಲ್ಲಾಧಿಕಾರಿಗಳ ಬಳಿ ಮನವಿ ಸಲ್ಲಿಸಿದೆ.ಮುಸ್ಲಿಮ್​ ಸಂಘಟನೆಗೆ ಪ್ರತಿಭಟನೆ ನಡೆಸಲು ಅವಕಾಶ ಕೊಟ್ಟರೆ ಉಗ್ರ ಹೋರಾಟ ಮಾಡಬೇಕಾಗುತ್ತೆ. ಸರ್ಕಾರಿ ಭೂಮಿ ಸರ್ಕಾರಿ ಭೂಮಿಯಾಗಿಯೇ ಇರಬೇಕು ಎಂದರು. 

ಅಲ್ಲದೆ ಎಸ್ಪಿ ,ಡಿಸಿಯವರೇ ಏನಾದ್ರೂ ಪ್ರತಿಭಟನೆ ನಡೆದರೆ ನೀವೆ ಇದರ ಹೊಣೆ ಹೊರಬೇಕಾಗುತ್ತೆ ಅಂತಾ ತಿಳಿಸಿದರು. ನಂತರ ಮಹಾನಗರ ಪಾಲಿಕೆಯ ಆಯುಕ್ತರಿಗೆ ರಾಷ್ಟ್ರಭಕ್ತ ಬಳಗದ ವತಿಯಿಂದ ಈ ಕುರಿತು ಮನವಿ ಸಲ್ಲಿಸಲಾಯಿತು

 

TAGGED:
Share This Article