cm siddaramaiah : ಸಿಎಂ ಸಿದ್ದರಾಮಯ್ಯರನ್ನು ಪಕ್ಷದಲ್ಲಿ ಏಕೆ ಇಟ್ಟುಕೊಂಡಿದ್ದೀರ : ಕೆ.ಎಸ್​ ಈಶ್ವರಪ್ಪ ಪ್ರಶ್ನೆ

prathapa thirthahalli
Prathapa thirthahalli - content producer

cm siddaramaiah : ಸಿಎಂ ಸಿದ್ದರಾಮಯ್ಯರವರು ಹೈಕಮಾಂಡ್​ ನಾಯಕರ ಮಾತನ್ನೇ ಕೇಳದಿದ್ದ ಮೇಲೆ ಅವರನ್ನು ಪಕ್ಷದಲ್ಲಿ ಏಕೆ ಇಟ್ಟುಕೊಂಡಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಮಾಜಿ ಡಿಸಿಎಂ ಕೆಎಸ್​ ಈಶ್ವರಪ್ಪ ಪ್ರಶ್ನಿಸಿದರು.

ಇಂದು ಶಿವಮೊಗ್ಗದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆಯವರು ಕಾಶ್ಮೀರದ ಸಿಎಂರವರನ್ನು, ತಮ್ಮ ಪಕ್ಷಕ್ಕೆ ಮಾರ್ಗದರ್ಶಕರನ್ನಾಗಿ ಕರೆಸಿಕೊಂಡು ಪಕ್ಷದ ಮುಖಂಡರಿಗೆ ಮಾರ್ಗದರ್ಶನ ಒದಗಿಸಬೇಕು ಎಂದು ಸಲಹೆ ನೀಡಿದರು. ಈ ಮೂಲಕ ಕಾಂಗ್ರೆಸ್​ ಮುಖಂಡರು ಆಡುತ್ತಿರುವ ಮಾತುಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಕೆಎಸ್​ಇ, ಎಐಸಿಸಿ ಅಧ್ಯಕ್ಷರು, ಸಿಎಂ ಸಿದ್ದರಾಮಯ್ಯ, ಸಂತೋಷ್​ ಲಾಡ್​ ಹಾಗೂ ಆರ್​ವಿ ತಿಮ್ಮಾಪುರರವರ ಅಭಿಪ್ರಾಯವೂ ತಮ್ಮ ಪಕ್ಷದ ಅಭಿಪ್ರಾಯವಲ್ಲ ಎಂದಿದ್ದಾರೆ. ಹಾಗಿದ್ದಾಗ, ಪಕ್ಷದ ಮಾತನ್ನೇ ಕೇಳದ ಅವರುಗಳನ್ನು ಕಾಂಗ್ರೆಸ್​ ಪಕ್ಷದಲ್ಲಿ ಏಕೆ ಇಟ್ಟುಕೊಂಡಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಹೇಳಿದರು.

ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯ ಬಗ್ಗೆ ಕಾಂಗ್ರೆಸ್​ನ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮನೆಯವರಿಗೆ ಆಗಿದ್ದರೆ ಆಗ ಇಂತಹ ಘಟನೆಗಳಾದಾಗ, ಅದರ ನೋವೇನು ಎಂಬುದು ತಿಳಿಯುತ್ತಿತ್ತು.ನಮ್ಮ ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ಒಂದು ವರ್ಗದ ಛೇಲಾಗಳಿಗೆ ಏನಾಗಿದೆ ಗೊತ್ತಿಲ್ಲ. ಸಚಿವ ಸಂತೋಷ್​ ಲಾಡ್​ ಹಾಗೂ ಸಿಎಂ ಸಿದ್ದರಾಮಯ್ಯ ಈ ರೀತಿಯ ಹೇಳಿಕೆ ನೀಡಿರುವುದು ಖಂಡನೀಯ ಎಂದರು.

ಈ ಘಟನೆಯನ್ನು ಇಡೀ ದೇಶ ಸಹಿಸಲ್ಲ ಅಂತ ಪ್ರಧಾನಿಯವರು ಹೇಳಿದ್ದಾರೆ. ದೇಶವೇ ಒಂದಾಗಿರಬೇಕಾದರೆ ದೇಶ ವಿರೋಧಿ ಹೇಳಿಕೆ ಯಾಕೇ ಕೊಡುತ್ತೀರಾ. ನಿಮ್ಮ ಈ ಹೇಳಿಕೆಯಿಂದ ಇಡೀ ದೇಶದ ರಾಷ್ಟ್ರ ಭಕ್ತರಿಗೆ ನೋವುಂಟು ಮಾಡುವಂತೆ ಮಾಡಿದೆ. ಹಾಗಾಗಿ ಸಿಎಂ ಸಿದ್ದರಾಮಯ್ಯರವರು ಇಡೀ ದೇಶದ ಜನರ ಮುಂದೆ ಕ್ಷಮೆ ಕೇಳಬೇಕು ಎಂದರು.

cm siddaramaiah : ಸಿ ಎಂ ಸಿದ್ದರಾಮಯ್ಯ ತಕ್ಷಣ ರಾಜಿನಾಮೆ ಕೊಡಬೇಕು

ಬೆಳಗಾವಿಯಲ್ಲಿ ಸಭೆಯೊಂದರಲ್ಲಿ ಎಎಸ್​ಪಿ ಮೇಲೆ ಸಿಎಂ ಸಿದ್ದರಾಮಯ್ಯ ಕೈ ಎತ್ತಿದ್ದಾರೆ. ಈ ರೀತಿಯ ವರ್ತನೆ ತೋರುವ ಅವರು ರಾಜ್ಯದ ಮುಖ್ಯಮಂತ್ರಿನೋ ಅಥವಾ ಗೂಂಡಾನೋ ಎಂಬುದು ತಿಳಿಯುತ್ತಿಲ್ಲ. ಮೊನ್ನೆ ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ಭದ್ರತಾ ವೈಫಲ್ಯವೇ ಕಾರಣ ಎಂದಿದ್ದಾರೆ. ಆದರೆ ನಿನ್ನೆ ನಡೆದ ಚಿಕ್ಕ ಸಭೆಯಲ್ಲಿ  ಘೋಷಣೆ ಕೂಗಿದಾಗ ಭದ್ರತಾ ವೈಫಲ್ಯ ಕಾರಣ ಆಗಲಿಲ್ಲವಾ. ತಮ್ಮ ಸರ್ಕಾರವೇ ಸರಿಯಿಲ್ಲ ಎನ್ನುವುದಾದರೆ ತಕ್ಷಣವೇ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಹೋಗಲಿ ಎಂದರು.

cm siddaramaiah : ಕರ್ನಾಟಕದ ಸಿಎಂ ಪಾಕಿಸ್ತಾನದಲ್ಲಿ ಹೀರೋ ಕರ್ನಾಟಕದಲ್ಲಿ ಜಿರೋ

ಸಿದ್ದರಾಮಯ್ಯನವರ ಈ ರೀತಿಯ ನಡವಳಿಕೆಯಿಂದ ಕರ್ನಾಟಕದ ಮರ್ಯಾದೆಯನ್ನು ಪ್ರಪಂಚದ ಮುಂದೆ ಕಳೆದಿದ್ದಾರೆ. ಪಾಕಿಸ್ತಾನದ ಮಾಧ್ಯಮಗಳು ಸಿಎಂ ಸಿದ್ದರಾಮಯ್ಯರವರನ್ನು ಹೊಗಳಿ ವರದಿಯನ್ನು ಮಾಡುತ್ತಿವೆ. ನೀವು ತಿದ್ದಿಕೊಳ್ಳದೇ ಹೋದ್ರೆ ರಾಜ್ಯದ ಜನ ಬುದ್ದಿ ಕಲಿಸುತ್ತಾರೆ ಎಂದು ಎಚ್ಚರಿಸಿದರು.

 

Share This Article