mp renukacharya : ಒವೈಸಿಯನ್ನು ಹೊಗಳಿ ಸಿದ್ದರಾಮಯ್ಯರನ್ನು ತೆಗಳಿದ ಎಂಪಿ ರೇಣುಕಾಚಾರ್ಯ

prathapa thirthahalli
Prathapa thirthahalli - content producer

mp renukacharya : ಓವೈಸಿ ಅಸಾದುದ್ದೀನ್​ ಧರ್ಮದ ಆಧಾರದ ಮೇಲಿನ ದಾಳಿಯನ್ನ ಖಂಡಿಸಿದ್ದಾರೆ. ಆದರೆ ನಮ್ಮ ರಾಜ್ಯದ ಸಿಎಂ ಸಿದ್ದರಾಮಯ್ಯ ಇದನ್ನು ಖಂಡಿಸುವ ಕೆಲಸವನ್ನು ಮಾಡಲಿಲ್ಲ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದರು.

ಕಾಶ್ಮೀರದಲ್ಲಿ ಉಗ್ರರರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್​ ರಾವ್ ​ರವರ ಕುಟುಂಬಕ್ಕೆ ಇಂದು ಸಾಂತ್ವನ ಹೇಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರರ ದಾಳಿ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆ ಸರಿಯಿಲ್ಲ. ಇವರೊಂದಿಗೆ ಗೃಹ ಸಚಿವ ಪರಮೇಶ್ವರ್ ಕೂಡ ಸಾಥ್ ನೀಡಿದ್ದಾರೆ. ಸಿದ್ದರಾಮ, ಶಿವಕುಮಾರ್,​ ಪರಮೇಶ್ವರ್​ ಅಂತ ಎಲ್ಲರೂ ಸಹ ದೇವರ ಹೆಸರನ್ನು ಇಟ್ಟುಕೊಂಡಿದ್ದಾರೆ. ಆದರೆ ಅವರು ಹಾಗೆ ಇಲ್ಲ. ಭಯೋದ್ಪಾದಕರ ಪರವಾಗಿ ಮಾತನಾಡುತ್ತಾರೆ. ಸಿಎಂ ಸಿದ್ದರಾಮಯ್ಯರವರ ಹೇಳಿಕೆಯನ್ನು ಪಾಕಿಸ್ತಾನ ಮಾಧ್ಯಮಗಳು ವೈಭೀಕರಿಸಿವೆ. ಅವರ ಪರ ಮಾತಾಡದವರಿಗೆ ಪಾಕಿಸ್ತಾನದ ಪ್ರಶಸ್ತಿ ಬರುತ್ತದೆಯೇ ಎಂದು ಪ್ರಶ್ನಿಸಿದರು. ಸಿಎಂ ಸಿದ್ದರಾಮಯ್ಯ ಈ ಘಟನೆ ಸಂಭವಿಸಿದ್ದು, ಭದ್ರತಾ ವೈಪಲ್ಯ ಎಂದು ಹೇಳಿ ಯೋಧರ ಆತ್ಮಸ್ಥೈರ್ಯ ಕುಗ್ಗಿಸುತ್ತಾರೆ. ನೀವು ಸಿಎಂ ಸ್ಥಾನದಲ್ಲಿ ಇರೋದಕ್ಕೆ ಲಾಯಕ್ಕಿಲ್ಲ. ಕೂಡಲೇ ರಾಜಿನಾಮೆ ಕೊಡಿ ಎಂದರು.

mp Renukacharya : ಮೃತರ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ಕೊಡಿ

ರಾಜ್ಯ ಸರ್ಕಾರ ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಕೊಡುವುದಾಗಿ ಘೋಷಿಸಿದೆ. ಆದರೆ ಅವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಸಾಕಾಗುವುದಿಲ್ಲ. ಮೂವರ ಕುಟುಂಬಕಕ್ಕೆ 1 ಕೋಟಿ ರೂಪಾಯಿ ಕೊಡಬೇಕು.ಅವರೇನು ಪರಿಹಾರಕ್ಕೆ ಕಾಯುತ್ತಿಲ್ಲ. ಅದರೇ ಅವರ ಮಕ್ಕಳ ಶಿಕ್ಷಣಕ್ಕೆ ಆ ಹಣ ಅನುಕೂಲ ಅಗುತ್ತೆ. ಹೋದ ಜೀವ ವಾಪಸ್ ಬರಲ್ಲ ತಕ್ಷಣ  ಪರಿಹಾರ ಕೊಡಿ ಎಂದರು

 

 

Share This Article