funeral of Manjunath Rao | ಪಂಚಭೂತಗಳಲ್ಲಿ ಲೀನರಾದ ಮಂಜುನಾಥ್​ ರಾವ್​

Malenadu Today

funeral of Manjunath Rao :  ಕಾಶ್ಮೀರದಲ್ಲಿ ಮೃತರಾದ ಶಿವಮೊಗ್ಗ ಮೂಲದ ಮಂಜುನಾಥ್​ ರಾವ್​ ಪಂಚಭೂತ ಗಳಲ್ಲಿ ಲೀನರಾದರು. ಶಿವಮೊಗ್ಗದ ತುಂಗಾ ತೀರದಲ್ಲಿರುವ ರೋಟರಿ ಚಿತಗಾರದಲ್ಲಿ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. ಪುತ್ರ ಅಭಿಜಯ್ ಬ್ರಾಹ್ಮಣ ಸಂಪ್ರದಾಯದಂತೆ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಗುಂಡಾ ಭಟ್ಟರ​ ನೇತೃತ್ವದಲ್ಲಿ ಅಂತಿಮ ವಿಧಿ ವಿಧಾನಗಳನ್ನು ನಡೆದವು.

Funeral of Manjunath Rao
Funeral of Manjunath Rao

ಇದಕ್ಕೂ ಮೊದಲು, ಇಂದು ಬೆಳಿಗ್ಗೆ 10:30 ರ ಸುಮಾರಿಗೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಅವರ ಪಾರ್ಥಿವ ಶರೀರ ಆಗಮಿಸಿತು. ಮೃತದೇಹವನ್ನು ಬರಮಾಡಿಕೊಂಡ ವಿವಿಧ ಸಂಘಟನೆಗಳು ಮುಖಂಡರು ಸಾರ್ವಜನಿಕರು ಪಾಕಿಸ್ತಾನದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಆ ಬಳಿಕ ಮನೆಯಲ್ಲಿ ಮೃತರ ಅಂತಿಮ ದರ್ಶನ ನಡೆಯಿತು. ಮಧ್ಯಾಹ್ನ 12:30 ರ ಸುಮಾರಿಗೆ ಮನೆಯಲ್ಲಿನ ಅಂತಿಮ ವಿಧಿಗಳನ್ನು ಪೂರೈಸಿ ಮಂಜುನಾಥ್​ರವರ ಅಂತಿಮ ಯಾತ್ರೆ ಹೊರಟಿತು.

Funeral of Manjunath Rao : 
Funeral of Manjunath Rao

funeral of Manjunath Rao |

Funeral of Manjunath Rao
Funeral of Manjunath Rao

ಮೆರವಣಿಗೆಯು ಐಬಿ ಸರ್ಕಲ್​ ಮೂಲಕ, ಕುವೆಂಪು ರಸ್ತೆಗೆ ಬಂದು, ಜೈಲ್​ ಸರ್ಕಲ್​ನಲ್ಲಿ ತಿರುವು ಪಡೆದು ದುರ್ಗಿಗುಡಿ ಮುಖ್ಯರಸ್ತೆಯಲ್ಲಿ ಹಾದು, ಸೀನಪ್ಪ ಶೆಟ್ಟಿ ಸರ್ಕಲ್​ಗೆ ಬಂದಿತು. ಅಲ್ಲಿಂದ ಅಮೀರ್​ ಅಹಮದ್​ ಸರ್ಕಲ್​ ಮೂಲಕ ಬಿಹೆಚ್​ ರೋಡ್​ನಲ್ಲಿ ಸಾಗಿ, ರೋಟರಿ ಚಿತಾಗಾರವನ್ನು ತಲುಪಪಿತು. ಮೆರವಣಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದು, ಭಾರತ್​ ಮಾತಾ ಕೀ ಜೈ, ಮಂಜುನಾಥ್ ಅಮರ್​ ರಹೇ, ಭಾರತ ಮಾತೆಗೆ ಹೂವು ಹಾಕಿ ಪಾಕಿಸ್ತಾನಕ್ಕೆ ಬಾಂಬ್​ ಹಾಕಿ ಎಂಬ ಘೋಷಣೆಗಳು ಮೊಳಗಿದವು.ಮೆರವಣಿಗೆ ಬರುವ ವೇಳೆಯಲ್ಲಿ ಮಾರ್ಗದ ಉದ್ದಕ್ಕೂ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟನ್ನು ಬಂದ್​ ಮಾಡಿ ಅಂತಿಮ ನಮನ ಸಲ್ಲಿಸಿದರು. ಈ ವೇಳೆ ನಗರದೆಲ್ಲೆಡೆ ದುಃಖ ಮುಡುಗಟ್ಟಿತ್ತು.

Funeral of Manjunath Rao
Funeral of Manjunath Rao

ಇನ್ನೂ ರೋಟರಿ ಚಿತಾಗಾರಕ್ಕೆ ಮೃತದೇಹ ತಲುಪುತ್ತಲೇ ಶಾಸಕ ಎಸ್​ಎನ್ ಚನ್ನಬಸಪ್ಪ ಹಾಗೂ ವಿವಿಧ ರಾಜಕೀಯ ಮುಖಂಡರು ಮೃತದೇಹವನ್ನು ಚಿತಾಗಾರದೊಳಗೆ ತರಲು ಹೆಗಲು ನೀಡಿದರು. ಆ ಬಳಿಕ ಶಿವಮೊಗ್ಗ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯಿಂದ ಸರ್ಕಾರಿ ಗೌರವ ನೀಡಲಾಯ್ತು. ಬಳಿಕ ಗುಂಡಾಭಟ್ಟರ ನೇತೃತ್ವದಲ್ಲಿ ಅಂತಿಮ ವಿಧಿವಿಧಾನಗಳು ನಡದವು. ಈ ವೇಳೆ ಬೋಲೋ ಭಾರತ್ ಮಾತಾಕಿ ಜೈ ಎಂಬ ಘೋಷಣೆಗಳು ಮೊಳಗಿದವರು. ಇನ್ನು ಪುತ್ರ ಅಭಿಜಯ್​ ಕಣ್ಣೀರಿಡುತ್ತಲೇ ತನ್ನ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಒತ್ನಿ ಪಲ್ಲವಿ ಸೇರಿದಂತೆ ಕುಟುಂಬಸ್ಥರ ದುಃಖ ಮಡುಗಟ್ಟಿತ್ತು.ಸಚಿವ ಮಧು ಬಂಗಾರಪ್ಪರವರು ಸ್ಥಳದಲ್ಲಿದ್ದು ಮೃತ ಕುಟುಂಬಸ್ಥರಿಗೆ ದೈರ್ಯ ಹೇಳಿದರು.

Funeral of Manjunath Rao
funeral of Manjunath Rao
Funeral of Manjunath Rao
funeral of Manjunath Rao
Funeral of Manjunath Rao
funeral of Manjunath Rao

 

Share This Article