rm manjunath gowda | ಇಡಿ ಅರೆಸ್ಟ್ ಬಳಿಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ಮತ್ತೊಂದು ಆಘಾತ

Malenadu Today

 ಡಿಸಿಸಿ ಬ್ಯಾಂಕ್​ನಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ಆರ್​ಎಂ ಮಂಜುನಾಥ್​ ಗೌಡರನ್ನ ಇಡಿ ಅರೆಸ್ಟ್ ಮಾಡಿದೆ. ಈ ಮಧ್ಯೆ ಮಂಜುನಾಥ್​ ಗೌಡರಿಗೆ ಮತ್ತೊಂದು ಪ್ರತಿಕೂಲ ಸುದ್ದಿ ಎದುರಾಗಿದೆ.

ಇಡಿ ಅಥವಾ ಜಾರಿ ನಿರ್ದೇಶನಾಲಯ ತಮ್ಮನ್ನು ಬಂಧಿಸುವ ಸಂದರ್ಭದಲ್ಲಿ ಅನುಸರಿಸಿದ ಕಾರ್ಯ ವಿಧಾನ ಸರಿಯಲ್ಲ ಎಂದು ಪ್ರಶ್ನಿಸಿ ಹೈಕೋರ್ಟ್​ಗೆ ಅವರು ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. 

- Advertisement -

rm manjunath gowda

ಜಾರಿ ನಿರ್ದೇಶನಾಲಯ ಬಂಧಿಸುವ ಸಂದರ್ಭದಲ್ಲಿ ಅನುಸರಿಸಿದ ಕಾರ್ಯವಿಧಾನವನ್ನು ಪ್ರಶ್ನಿಸಿ ಆರ್​ಎಂಎಂ  ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್​ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನರವರ ಪೀಠ ವಿಚಾರಣೆಗೆ ಕೈಗೆತ್ತಿಕೊಂಡಿತ್ತು.

ಈ ವೇಳೆ ಅಂತಿಮವಾಗಿ, ಅರ್ಜಿದಾರರಿಗೆ ಬಂಧನಕ್ಕೆ ನೀಡಿರುವ ಪ್ರತಿ ಕಾರಣಗಳನ್ನು ಪರಿಶೀಲಿಸುವುದು ಹಾಗೂ ವಿಶ್ಲೇಷಣೆ ಮಾಡಲು ಹೈಕೋರ್ಟ್ಗೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. 

 

Share This Article
Leave a Comment

Leave a Reply

Your email address will not be published. Required fields are marked *