Pahalgam Terror Attack | ಮೃತ ಪತಿಯನ್ನು ತೋರಿಸಿ ಪಲ್ಲವಿ ಕಣ್ಣೀರು | ದೈರ್ಯ ತುಂಬಿದ ಸಚಿವರು

Malenadu Today

Pahalgam Terror Attack 2025 | ಶಿವಮೊಗ್ಗದ ಮಂಜುನಾಥ್ ರಾವ್ ಸೇರಿದಂತೆ ರಾಜ್ಯದ ಮೂವರು ಕಾಶ್ಮೀರ ಪಹಾಲ್ಗಾಮ್‌ನಲ್ಲಿ (Pahalgam Terror Attack 2025 IUpdates) ನಡೆದ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.

Pahalgam Terror Attack 2025
Pahalgam Terror Attack 2025

ಅವರ ಮೃತದೇಹ ವಿಶೇಷವಿಮಾನದಲ್ಲಿ ರಾಜ್ಯಕ್ಕೆ ಬರಲಿದೆ. ಮೃತರ ಪಾರ್ಥಿವ ಶರೀರವನ್ನು ಅವರವರ ಊರುಗಳಿಗೆ ಕಳುಹಿಸಲು ಸಿದ್ದತೆ ಕೈಗೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ಕಾಶ್ಮೀರಕ್ಕೆ ತೆರಳಿರುವ ಸಚಿವ ಸಂತೋಷ್​ ಲಾಡ್​, ಅಲ್ಲಿನ ಸಿದ್ಧತೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಅಲ್ಲದೆ ರಾಜ್ಯದಿಂದ ಕಾಶ್ಮೀರಕ್ಕೆ ಪ್ರವಾಸಕ್ಕಾಗಿ ಹೋಗಿರುವವರ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ. 

Pahalgam Terror Attack 2025
Pahalgam Terror Attack 2025

Pahalgam Terror Attack 2025

ಈ ನಡುವೆ ಅನಂತ್ ನಾಗ್​ ಜಿಲ್ಲೆ ಸರ್ಕಾರಿ ಆಸ್ಪತ್ರೆಯಲ್ಲಿ ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿದ ಸಂತೋಷ್ ಲಾಡ್​ ಸಾಂತ್ವನ ಹೇಳಿದರು. ಮೃತದೇಹಗಳನ್ನು ಇರಿಸಿದ್ದ ಬಾಕ್ಸ್​ಗಳನ್ನು ಪರಿಶೀಲಿಸಿದ ಸಂತೋಷ್​ ಲಾಡ್, ಬಾಕ್ಸ್​ಗಳ ಮೇಲೆ ಬರೆದಿದ್ದ ಹೆಸರು, ವಿಳಾಸ, ಫೋನ್​ ನಂಬರ್ ಹಾಗೂ ಇನ್ನೀತರ ವಿವರಗಳು ಸರಿ ಇದೆಯೇ ಎಂದು ಮಾಹಿತಿ ಪಡೆದರು.

Pahalgam Terror Attack 2025
Pahalgam Terror Attack 2025

ಅಲ್ಲದೆ ಬಾಕ್ಸ್​ನಲ್ಲಿರುವ ಮೃತರು ಗುರುತನ್ನು ಅವರ ಸಂಬಂಧಿಕರ ಜೊತೆ ಖಾತರಿ ಪಡಿಸಿಕೊಂಡ ಸಚಿವರು, ಆ ಬಳಿಕ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಶಿವಮೊಗ್ಗದವರಾದ ಮೃತ ಮಂಜುನಾಥ್​ ರಾವ್​ರವರ ಪತ್ನಿ ಪಲ್ಲವಿಯವರಿಗೆ ಸಮಾಧಾನ ಹೇಳಿದ ಸಚಿವರು, ಅವರಿಗೆ ದೈರ್ಯ ಹೇಳಿದರು. ಸಚಿವರ ಮಾತು ಕೇಳುತ್ತಲೇ ಕಣ್ಣೀರಿಟ್ಟ ಪಲ್ಲವಿಯವರು ತಮ್ಮ ಪತಿಯ ಶರೀರವಿಟ್ಟ ಬಾಕ್ಸ್​ ತೋರಿಸಿ ಇನ್ನಷ್ಟು ದುಃಖಿತರಾದರು. ಇದನ್ನು ನೋಡಿ ಸಚಿವರು ಸಹ ಭಾವುಕಾದರು. ಬಳಿಕ ನಿಮ್ಮೊಂದಿಗೆ ನಾವಿದ್ದೇವೆ ದೈರ್ಯಗೆಡದಿರಿ ಎಂದು ಪಲ್ಲವಿಯರ ಕೈಮೇಲೆ ಕೈಯಿಟ್ಟು ಸಾಂತ್ವನ ಹೇಳಿದರು. 

Pahalgam Terror Attack 2025
Pahalgam Terror Attack 2025
Share This Article