ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 3 2025: ರಾಜ್ಯದಲ್ಲಿಯೇ ವಿಶೇಷವಾದ ಒಂದು ಪ್ರಕರಣ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಇಲ್ಲಿನ ಪೊಲೀಸರು ಕಳ್ಳತನ ಪ್ರಕರಣವೊಂದನ್ನ 24 ಗಂಟೆಯಲ್ಲಿ ಭೇದಿಸಿದ್ದು, ಪ್ರಕರಣದ ಆರೋಪಿಗಳು ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಗಳಾಗಿದ್ದಾರೆ. ಅಲ್ಲದೆ ಪ್ರಕರಣದಲ್ಲಿ ಜಿಮ್ ಟ್ರೈನರ್ ಮಹಿಳೆಯು ಅರೆಸ್ಟ್ ಆಗಿದ್ದಾಳೆ
ಏನಿದು ಪ್ರಕರಣ
ದೊಡ್ಡಬಳ್ಳಾಪುರದಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಪುರುಷೋತ್ತಮ ಎಂ (22), ಆತನ ಗೆಳತಿ ಸೌಭಾಗ್ಯ ಬಿಎಚ್ ಅಲಿಯಾಸ್ ಲತಾ (24), ದರ್ಶನ್ ಅಲಿಯಾಸ್ ಸತ್ಯ (20), ಮತ್ತು ಚಂದ್ರು (24) ರನ್ನು ಅರೆಸ್ಟ್ ಮಾಡಿದ್ದಾರೆ. ನೈಟ್ ಟ್ರೈನ್ನಲ್ಲಿ ಬರುತ್ತಿದ್ದ ಆರೋಪಿಗಳು, ನಿರ್ದಿಷ್ಟ ಸ್ಟೇಷನ್ ಬಳಿ ಇಳಿದು ಟ್ರಾಕ್ ಸಮೀಪದ ಮನೆಗಳಿಗೆ ಕನ್ನ ಹಾಕುತ್ತಿದ್ದರು ಎಂದು ತನಿಖೆಯಲ್ಲಿ ಗೊತ್ತಾಗಿದೆ.
ಎಷ್ಟರಮಟ್ಟಿಗೆ ಪ್ಲಾನ್ ಮಾಡುತ್ತಿದ್ದರು ಆರೋಪಿಗಳು ಎಂದರೆ, ಒಂದು ಸ್ಟೇಷನ್ನಲ್ಲಿ ಇಳಿಯುತ್ತಿದ್ದ ಮೂವರು ಆರೋಪಿಗಳು ಅಲ್ಲಿಂದ ಟ್ರಾಕ್ ಮೇಲೆ ನಡೆದೆ ಬಹಳಷ್ಟು ದೂರ ಹೋಗುತ್ತಿದ್ದರು. ಆನಂತರ ನಿರ್ದಿಷ್ಟ ಜಾಗದಲ್ಲಿ ಚಪ್ಪಲಿ ಬಿಟ್ಟು ಬೇರೆ ಬೇರೆ ಕಡೆಗೆ ತೆರಳುತ್ತಿದ್ದರು. ಮೂವರು ಬೇರೆ ಬೇರೆ ಜಾಗದಲ್ಲಿ ರೈಲ್ವೆ ಟ್ರ್ಯಾಕ್ ಸಮೀಪದಲ್ಲಿರುವ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದರು. ಫೋನ್ ಟ್ರಾಕ್ ಆಗುತ್ತೆ ಅಂತಾ ಮೊಬೈಲ್ ಸ್ವಿಚ್ ಮಾಡಿರುತ್ತಿದ್ದರು.
ಅದಕ್ಕಾಗಿಯೇ ಚಪ್ಪಲಿ ಬಿಟ್ಟು ಹೋದ ಜಾಗ ಗುರುತು ಮಾಡಿಕೊಳ್ಳುತ್ತಿದ್ದರು. ಇದಷ್ಟೆ ಅಲ್ಲದೆ ರೈಲ್ವೆ ಟ್ರ್ಯಾಕ್ಗಳ ಬಳಿಯಲ್ಲಿ ಸಿಸಿ ಕ್ಯಾಮರಾಗಳು ಇರುವುದಿಲ್ಲ ಎಂಬ ಕಾರಣಕ್ಕೆ ಹಳಿ ಪಕ್ಕದ ಮನೆಗಳನ್ನ ಟಾರ್ಗೆಟ್ ಮಾಡುತ್ತಿದ್ದರು. ಹೀಗೆ ಕಳ್ಳತನವೆಸಗಿದ ಬಳಿಕ ಆರೋಪಿಗಳು ಕಳುವು ಮಾಲಿನ ಜೊತೆಗೆ , ಸಿಕ್ಕ ಸಿಕ್ಕ ಟ್ರೈನ್ ಹತ್ತಿ ಎಸ್ಕೇಪ್ ಆಗುತ್ತಿದ್ದರು.
ಈ ಮೂವರಿಗೆ ಜಿಮ್ ಟ್ರೈನರ್ ಆಗಿರುವ ಸೌಭಾಗ್ಯ ನೆರವು ನೀಡುತ್ತಿದ್ದಳು. ಕಳ್ಳತನದ ಮಾಲು ಮಾರಾಟ ಸೇರಿದಂತೆ ಆರೋಪಿಗಳಿಗೆ ವಕೀಲರ ನೆರವು ಒದಗಿಸುವುದಕ್ಕೆ ನೆರವಾಗುತ್ತಿದ್ದರು. ಇನ್ನೂ ತುಮಕೂರಿನಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಕದ್ದ ಮಾಲನ್ನು ಮಾರಿ ಕೇರಳ ಟೂರಿಗೆ ಹೋಗಿದ್ದರು ಈ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

Gang of 4 thieves Including Woman Gym Trainer Arrested
Gang of 4 thieves Including Woman Gym Trainer Arrested
ಬೆಂಗಳೂರು ಕಳ್ಳರ ಗ್ಯಾಂಗ್ ಬಂಧನ, ಜಿಮ್ ಟ್ರೈನರ್ ಕಳ್ಳತನ ಪ್ರಕರಣ, ದೊಡ್ಡಬಳ್ಳಾಪುರ ಕಳವು, Bengaluru burglary gang arrested, woman gym trainer arrest, Doddaballapur theft case, unique railway track robbery modus operandi,
ಇದನ್ನು ಸಹ ಓದಿ : ಮಧ್ಯರಾತ್ರಿ ರೂಮಿನೊಳಗೆ ಬಂದು ಮೈಕೈ ಮುಟ್ಟಿದ ಫ್ರಾಕ್ ಧರಿಸಿದ್ದ ಆಗಂತುಕ!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
